ಗದಗ : ಮತಗಟ್ಟೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ: ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಚವ್ಹಾಣ ಹೇಳಿಕೆ

ಗದಗ 19:     ಪ್ರಜಾಪ್ರಭುತ್ವ ಬಲಗೊಳ್ಳುವಲ್ಲಿ ಮತದಾನದ ಪಾತ್ರ ಬಹು ಮುಖ್ಯವಾಗಿದ್ದು  ಎಪ್ರಿಲ್ 23ರಂದು ನಡೆಯುವ   ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ  ಜಿಲ್ಲೆಯ ಮತಗಟ್ಟೆ ಅಧಿಕಾರಿಗಳು ಪ್ರೇರೇಪಿಸಲು ಮುಂದಾಗಬೇಕು  ಎಂದು  ಗದಗ ಜಿ.ಪಂ. ಸಿ.ಇ.ಓ ಹಾಗೂ   ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ    ಮಂಜುನಾಥ ಚವ್ಹಾಣ ನುಡಿದರು.

        ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ  ಸ್ವೀಪ್ ಸಮಿತಿ ಏರ್ಪಡಿಸಿದ್ದ   ಬೂತ್ ಮಟ್ಟದ ಅಧಿಕಾರಿಗಳ   ತರಬೇತಿಯನ್ನುದ್ದೇಶಿಸಿ ಅವರು  ಮಾತನಾಡಿದರು.    ಯಾವುದೇ ಅಮಿಷಕ್ಕೊಳ್ಳಗಾಗದೇ ನಿಭರ್ೀತ ಮುಕ್ತ ಮತದಾನದ ಕುರಿತು ತಮ್ಮ ವ್ಯಾಪ್ತಿಯ ಮತದಾರರಲ್ಲಿ  ಜಾಗೃತಿ ಮೂಡಿಸಬೇಕು.  ಈಗಾಗಲೇ  ಶಾಲಾ ಕಾಲೇಜುಗಳಲ್ಲಿ  ಯುವ ಮತದಾರರ ನೊಂದಣಿ  ಹಾಗೂ ಮತದಾರ ಜಾಗೃತಿ  ಕಾರ್ಯಗಳನ್ನು  ಜರುಗಿಸಲಾಗಿದೆ.  ಮತದಾನದ  ಜಾಗೃತಿ ಮೂಡಿಸಲು  ಬೂತ್ ಮಟ್ಟದ ಅಧಿಕಾರಗಳು ತಮ್ಮ ವ್ಯಾಪ್ತಿಯ  ಮನೆ ಮನೆಗಳಿಗೆ  ಭೇಟಿ ನೀಡಲು ತಿಳಿಸಬೇಕು.   ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ   ಚುನಾವಣಾ ಅಕ್ರಮಗಳು ಕಂಡು ಬಂದರೆ  ಅ-ತರಟ  ಆ್ಯಪ್ ಮೂಲಕ  ಸಹಾಯಕ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲು ಮಂಜುನಾಥ ಚವ್ಹಾಣ    ತಿಳಿಸಿದರು.

         ಗದಗ ಜಿ.ಪಂ. ಉಪಕಾರ್ಯದಶರ್ಿ ಪ್ರಾಣೇಶ ರಾವ್  ಮಾತನಾಡಿ ಚುನಾವಣಾ ಕಾರ್ಯವನ್ನು  ಪ್ರಜಾಪ್ರಭುತ್ವದ ಹಬ್ಬ ಅಥವಾ ಉತ್ಸವ  ಎಂದು ತಿಳಿದು  ಸರ್ವರೂ ಈ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ  ಚುನಾವಣಾ ಕರ್ತವ್ಯವನ್ನು  ಮತಗಟ್ಟೆ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಅರ್ಹ ಮತದಾರರು  ಮತದಾನದಿಂದ ವಂಚಿತರಾಗದಂತೆ   ಎಲ್ಲರೂ  ಮತದಾನದಲ್ಲಿ ಪಾಲ್ಗೊಳ್ಳುವಂತೆ  ಪ್ರೇರೇಪಿಸಿ    ಎಂದು  ನುಡಿದರು. 

         ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಕಾರ್ಯದಶರ್ಿ ಟಿ. ದಿನೇಶ ಅವರು  ಮಾತನಾಡಿ ಭಾರತ ಚುನಾವಣಾ ಆಯೋಗದ ನಿದರ್ೇಶನ್ವಯ  ಚುನಾವಣಾ ಮತಗಟ್ಟೆಗಳಲ್ಲಿ  ಸಾಕ್ಷರತಾ ಕ್ಲಬಗಳನ್ನು ರಚಿಸಲಾಗಿದೆ.   ಬೂತ್ ಮಟ್ಟದ ಅಧಿಕಾರಿಗಳು    ಚುನಾವಣಾ ಪ್ರಕ್ರಿಯೆಯ   ಬುನಾದಿಯಂತೆ    ಕೆಲಸ ಮಾಡಬೇಕು ಎಂದರು. ಸಿ.ಎಸ್.ನದಾಫ್, ವಿ.ಎಸ್.ಪಾಟೀಲ,     ಜಿ. ಎಮ್. ಹಕಾರಿ ಸಂಪನ್ಮೂಲ ವ್ಯಕ್ತಿಗಳಾಗಿ    ಆಗಮಿಸಿ  ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದರು.