ಗದಗ: ಮಹರ್ಷಿ ವಾಲ್ಮೀಕಿ ಜಾತ್ರೆಯ ಅಂಗವಾಗಿ ಸಭೆ

ಲೋಕದರ್ಶನ ವರದಿ

ಗದಗ 22: ಮಹಷರ್ಿ ವಾಲ್ಮೀಕಿ ಜಾತ್ರೆಯ ಅಂಗವಾಗಿ ಗದುಗಿನ ದುರ್ಗಾ ಪರಮೇಶ್ವರ ಭವನದಲ್ಲಿ ಲೆಕ್ಕಪತ್ರ ಕುರಿತು ಸಭೆ ನಡೆಯಿತು. 

ಕಾರ್ಯಕ್ರಮದಲ್ಲಿ ರೋಣ, ಗಜೇಂದ್ರಗಡ, ಗದಗ, ಶಿರಹಟ್ಟಿ, ನರಗುಂದ, ಮುಂಡರಗಿ, ಲಕ್ಷ್ಮೇಶ್ವರ, ಏಳು ತಾಲೂಕುಗಳ ಜಾತ್ರಾ ಸಮಿತಿಯ ಅಧ್ಯಕ್ಷರು ಆಗಮಿಸಿದ್ದರು. ಜಗದ್ಗುರುಗಳುಶ್ರೀ ಪ್ರಸನ್ನಾನಂದ ಸ್ವಾಮಿಗಳು ಇಡೀ ಕನರ್ಾಟಕ ರಾಜ್ಯದ ಖರ್ಚು ವೆಚ್ಚಗಳನ್ನು ಸಭೆಯಲ್ಲಿ ಚರ್ಚೆಸಿ ಮಾತನಾಡಿದರು. 

ರೋಣ ಮತ್ತು ಗಜೇಂದ್ರಗಡ ತಾಲೂಕಿನಿಂದ ಬಂದ ಕಾಣಿಕೆ 2,76,335/-ರೂ., ಗದಗ ತಾಲೂಕಿನಿಂದ 3,83,263/-ರೂ., ಶಿರಹಟ್ಟಿ ತಾಲೂಕಿನಿಂದ 1,75,172/- ರೂ., ನರಗುಂದತಾಲೂಕಿನಿಂದ 58,720/-ರೂ, ಮುಂಡರಗಿ ತಾಲೂಕಿನಿಂದ 4,39,100/- ರೂ., ಲಕ್ಷ್ಮೇಶ್ವರ ತಾಲೂಕಿನಿಂದ 2,85,907/- ರೂ ಒಟ್ಟು ಎಲ್ಲ 7 ತಾಲೂಕುಗಳಿಂದ 16,18,582/- ರೂ. ಗಳ ಕಾಣಿಕೆ ಬಂದಿದೆ. ಈ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಕಾಣಿಕೆಯನ್ನು ವಾಲ್ಮೀಕಿ ಜನಾಂಗದವರು ಮಠಕ್ಕೆ ನೀಡಿದ್ದೀರಿ ಎಂದು ಅಭಿನಂದಿಸಿದರು. 

ರಾಜನಹಳ್ಳಿಯ ವಾಲ್ಮೀಕಿ ಜಾತ್ರೆಯಖರ್ಚು ವೆಚ್ಚವು ಹಾಗೂ ನಂತರ ಉಳಿದ ಹಣವನ್ನು ಯಾವ ಯಾವ ಕಾರ್ಯಕ್ರಮಕ್ಕೆ ಉಪಯೋಗ ಮಾಡಬೇಕೆಂದು ಸಭೆಯಲ್ಲಿ ಚರ್ಚೆಮಾಡಲಾಯಿತು. ಸಭೆಯಲ್ಲಿರೋಣ ತಾಲೂಕ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷ ಬಸವಂತಪ್ಪ ಎಚ್. ತಳವಾರ ಮಾತನಾಡಿ ಮುಂಬರುವ ವಾಲ್ಮೀಕಿ ಜಾತ್ರೆಗೆ ಅದ್ದೂರಿಯಾಗಿ ಕಾಣಿಕೆಯನ್ನು ಕನರ್ಾಟಕದ ವಾಲ್ಮೀಕಿಜನಾಂಗದವರು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತೇವೆ. ಬಡಮಕ್ಕಳಿಗೆ ಶಿಕ್ಷಣವನ್ನು ಕಲಿಯಲಿಕ್ಕೆ ಒಂದು ವಿದ್ಯಾಸಂಸ್ಥೆಯನ್ನು ಮಾಡಬೇಕು ಹಾಗೂ ಕನರ್ಾಟಕ ರಾಜ್ಯದಲ್ಲಿ ಯಾವುದೇ ಜನಾಂಗ ಅವರಆರೋಗ್ಯಕ್ಕೆ ಹಣಕಾಸಿನ ತೊಂದರೆ ಇದ್ದರೆ ಅಂತಹ ಜನಾಂಗಕ್ಕೆ ಒಂದು ಸೀಮಿತ ಕಾಣಿಕೆಯನ್ನು ಕಮೀಟಿಯವರು ಚಚರ್ೆಮಾಡಿ ಅವರಿಗೂ ಸಹಾಯ ಮಾಡಬೇಕು ಎಂದರು. 

ಈ ಸಭೆಯಲ್ಲಿ ಜಗದ್ಗುರು ಪ್ರಸನ್ನಾನಂದ ಮಹಾಸ್ವಾಮಿಗಳು , ಬಸವರಾಜ ಬೆಳಧಡಿ, ಚಿಗರಿಯವರು, ಹುಬ್ಬಳ್ಳಿಯವರು, ಗದಗ ಜಿಲ್ಲಾ ವಾಲ್ಮೀಕಿ ಸಮಾಜದ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರುಗಳು,ಪ್ರಧಾನ ಕಾರ್ಯದಶರ್ಿಗಳು, ಸದಸ್ಯರು, ಎಲ್ಲಾ ತಾಲೂಕಾ ಜಾತ್ರಾ ಸಮಿತಿಯ ಅಧ್ಯಕ್ಷರುಗಳು, ತಾಲೂಕಾ ವಾಲ್ಮೀಕಿ ಸಂಘದ ಅಧ್ಯಕ್ಷರುಗಳು, ಗದಗ ಜಿಲ್ಲೆಯ ಗ್ರಾಮೀಣ ಪ್ರದೇಶದ ಹಿರಿಯರು,ಯುವಕರು, ಉಪಸ್ಥಿತರಿದ್ದರು.