ಗದಗ 12: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಮ್ಸ್ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ, ಐ.ಎಮ್.ರಕ್ತನಿಧಿ ಕೇಂದ್ರ, ಯುಥ್ ಹಾಸ್ಟೇಲ್, ಜೈನ್ ಸಮಾಜ, ರೋಟರಿ ಕ್ಲಬ್, ಲಾಯನ್ಸ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಸಪ್ತಾಹವನ್ನು ಜೂನ್ 10ರಿಂದ ಜೂನ್ 15 ರ ವರೆಗೆ ಆಯೋಜಿಸಲಾಗಿದ್ದು, ಪ್ರತಿ ದಿನ ಕನಿಷ್ಠ 100 ಯುನಿಟ್ಗಳ ಗುರಿಯನ್ನು ಇಟ್ಟುಕೊಂಡು ಶಿಬಿರವನ್ನು ಏರ್ಪಡಿಸಲಾಗಿತ್ತು.
ಮೊದಲನೆಯ ದಿನ ದಿ. 10ರಂದು ಜಿಲ್ಲಾಡಳಿತ ಭವನ ರೂ. ನಂ 101 ರಲ್ಲಿ 122 ಜನ ರಕ್ತದಾನ ಮಾಡಿದರು, ಎರಡನೇ ದಿನ ತೋಟಸದಾರ್ಯ ಇಂಜಿನಿಯರಿಂಗ್ ಕಾಲೇಜ್ನಲ್ಲಿ 153 ಜನ ರಕ್ತದಾನ ಮಾಡಿದ್ದು, ದಿನಾಂಕ: 12ರಂದು ಐ.ಎಂ.ಇ ಹಾಲ್ ಗದಗ ದಲ್ಲಿ 75 ಯುನಿಟ್ ಸಂಗ್ರಹವಾಗಿದ್ದು, ರಕ್ತದಾನ ಶಿಬಿರ ಸಪ್ರಾಹ ಯಶಸ್ವಿಯಾಗಿ ನಡೆಯಿತು ನಾಳೆ ದಿ. 13ರಂದು ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಮೆಡಿಕಲ್ ಕಾಲೇಜ್ ವಿದ್ಯಾಥರ್ಿಗಳು, ಪ್ರೊಪೇಸರ್ಗಳು ಹಾಗೂ ಜಿಲ್ಲಾ ಆಸ್ಪತ್ರೆಯ ಎಲ್ಲ ಸಿಬ್ಬಂದಿಯವರು ಸೇರಿ 150 ಕ್ಕು ಹೆಚ್ಚ ಯುನಿಟ್ಗಳ ಸಂಗ್ರಹಣಾ ಗುರಿಯನ್ನು ಹೊಂದಿರುತ್ತಾರೆ. ಸ್ವಇಚ್ಚೆಯಿಂದ ಸಾರ್ವಜನಿಕರು ಸಹ ಈ ಶಿಬಿರದಲ್ಲಿ ರಕ್ತದಾನ ಮಾಡಬಹುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಜಿ.ಎಸ್. ಪಲ್ಲೇದ, ಡ್ಯಾಪ್ಕೋ ಅಧಿಕಾರಿಗಳಾದ ಡಾ. ಚಂದ್ರಕಲಾ ಜೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ವಿರುಪಾಕ್ಷರೆಡ್ಡಿ ಮಾದಿನೂರ ಹಾಗೂ ಎ.ಎಂ.ಎ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ, ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಹುಯಿಲಗೋಳ ಮನವಿ ಮಾಡಿದ್ದಾರೆ.