ಗದಗ 21: ಏ. 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 3 ರಂತೆ ಒಟ್ಟು 12 ಸಖಿ ಮತಗಟ್ಟೆಗಳನ್ನು ಗದಗ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದು ಇವುಗಳನ್ನು ಸಂಪೂರ್ಣ ಮಹಿಳಾ ಅಧಿಕಾರಿ ಸಿಬ್ಬಂದಿಗಳೆ ನಿರ್ವಹಿಸಲಿದ್ದಾರೆ ಎಂದು ಜಿ.ಪಂ ಮುಖ್ಯಕಾರ್ಯನಿವರ್ಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿಗಳ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಚುನಾವಣಾ ಆಯೋಗದ ನಿದರ್ೇಶನದಂತೆ ಕಳೆದೆರಡು ತಿಂಗಳಿಂದ ಜಿಲ್ಲೆಯಲ್ಲಿ ಜಿಲ್ಲಾ ಸ್ವೀಪ ಸಮಿತಿ ವೈವಿಧ್ಯಮಯ ಮತದಾರ ಜಾಗೃತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಹೊಸ ಹಾಗೂ ಯುವ ಮತದಾರರ ಸೇರ್ಪಡೆ, ಅಮಿಶಕ್ಕೊಳಗಾಗದೇ ತಪ್ಪದೇ ಮತ ಚಲಾಯಿಸಲು ಪ್ರೇರೇಪಿಸಲಾಗಿದೆ. ವಿವಿಧ ಸಾರ್ವಜನಿಕ, ಪ.ಪೂ. ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳು, ತಾಲೂಕಾ ಪಂಚಾಯತ, ಸ್ಥಳೀಯ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಹಕಾರದಿಂದ ನಡೆದ ಸ್ವೀಪ ಸಮಿತಿ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಸಮಾಪ್ತಿಗೊಳಿಸಲಾಗಿದೆ. ಪಾಲಕರಿಗೆ ಪತ್ರಾಂದೋಲನದ ಮೂಲಕ ಜಿಲ್ಲೆಯಲ್ಲಿ 4 ಲಕ್ಷ ಮತದಾನ ಮಾಡುವ ಸಂಕಲ್ಪ ಪತ್ರಗಳನ್ನು ಸಂಗ್ರಹಿಸಲಾಗಿದೆ. ಕಡಿಮೆ ಮತದಾನದ ಪ್ರದೇಶಗಲಲ್ಲಿ 1ಲಕ್ಷ ಮತದಾರ ಜಾಗೃತಿ ಕರಪತ್ರಗಳನ್ನು ವಿತರಿಸಲಾಗಿದೆ. ಜಿಲ್ಲೆಯ ಒಟ್ಟು 8,54,084 ಮತದಾರರಿಗೆ ವೋಟರ್ ಸ್ಲಿಪ್ ಹಂಚಲಾಗುತ್ತಿದ್ದು ಅದರ ಜೊತೆಗೆ ಕುಟುಂಬಕ್ಕೊಂದರಂತೆ 2 ಲಕ್ಷ ಕುಟಂಬಗಳಿಗೆ ಮತದಾರ ಮಾರ್ಗದಶರ್ಿ ಮಡಿಕೆ ಪತ್ರಗಳನ್ನು ಹಂಚಲಾಗುತ್ತಿದೆ ಎಂದು ಮಂಜುನಾಥ ಚವ್ಹಾಣ ನುಡಿದರು.
ಜಿಲ್ಲೆಯ ಗದಗ ಜಿಲ್ಲೆಯಲ್ಲಿ ಒಟ್ಟು 12,168 ವಿಶೇಷಚೇತನ ಮತದಾರರನ್ನು ಗುರುತಿಸಿದ್ದು, ಚುನಾವಣಾ ಆಯೋಗದ ನಿದರ್ೇಶನದಂತೆ ಅವರಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. 427 ವಾಹನಗಳನ್ನು ಇದಕ್ಕಾಗಿ ನಿಯುಕ್ತಿಸಿದ್ದು 131 ಪುರ್ನವಸತಿ ಕಾರ್ಯಕರ್ತರನ್ನು 394 ಅಧಿಕಾರಿ, ಎನ್,ಎಸ್,ಎಸ್,ವಿದ್ಯಾಥರ್ಿಗಳನ್ನು ಬಳಸಿಕೊಂಡು ವಿಶೇಷಚೇತನ ಮತದಾರರನ್ನು ಮತಗಟ್ಟೆಗೆ ಕರೆದು ತಂದು ತಮ್ಮ ಮನೆಗೆ ವಾಪಸ್ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ವೀಲ್ ಚೇರ್ ಹಾಗೂ ಭೂತಗನ್ನಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಗದುಗಿನ ಎಪಿಎಂಸಿ ಆವರಣದಲ್ಲಿ 102 ಸಂಖ್ಯೆಯ ಮತಗಟ್ಟೆಯುನ್ನು ಪೂರ್ಣವಾಗಿ ವಿಶೇಷ ಚೇತನ ಅಧಿಕಾರಿ ಸಿಬ್ಬಂದಿ ನಿರ್ವಹಿಸಲಿದ್ದಾರೆ. ಜಿಲ್ಲೆಯ ಸಖಿ ಮತಗಟ್ಟೆಗಳು: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲರ್ಾಪೂರ ಮತಗಟ್ಟೆ ಸಂಖ್ಯೆ 10, ಎ.ಪ.ಎಂ.ಸಿ ಆಫೀಸ್ ನ್ಯೂ ಬ್ಯೂಲ್ಡಿಂಗ್ ಮತಗಟ್ಟೆ ಸಂಖ್ಯೆ 111, ಮುಂಡರಗಿಯಲ್ಲಿ ಸರಕಾರಿ ಹಿರಿಯ ಉದರ್ು ಬಾಲಕಿಯರ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 54, ಗದಗದಲ್ಲಿ ಸರಕಾರಿ ಪಿಯು ಕಾಲೇಜು ಮುಂಡರಗಿ ರೋಡ ಮಗಟ್ಟೆ ಸಂಖ್ಯೆ 124, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಸಿದ್ದಲಿಂಗನಗರ ಮತಗಟ್ಟೆ ಸಂಖ್ಯೆ 118, ಗದಗದ ಸಿ.ಎಸ್. ಪಾಟೀಲ ಬಾಲಕಿಯರ ಹಿರಿಯ ಶಾಲೆ ಬೇಟಗೇರಿ ಮತಗಟ್ಟೆ ಸಂಖ್ಯೆ 97, ರೋಣ ತಾಲೂಕಿನ ಗಜೆಂದ್ರಗಡದ ಸರಕಾರಿ ಬಾಲಕಿಯರ ಮಾದರಿ ಶಾಲೆ ಮಗಟ್ಟೆ ಸಂಖ್ಯೆ 76, ರೋಣ ತಾಲೂಕಿನ ನರೇಗಲ್ ನಗರ ಪಂಚಾಯತ ಮತಗಟ್ಟೆ ಸಂಖ್ಯೆ 187, ರೋಣದ ಸಿ.ಡಿ.ಪಿ.ಒ ಆಫೀಸ್ ಮತಗಟ್ಟೆ ಸಂಖ್ಯೆ 109, ನರಗುಂದದಲ್ಲಿ ಬಾಲಕಿಯರ ಪ್ರೌಢ ಶಾಲೆ ಮತಗಟ್ಟೆೆ ಸಂಖ್ಯೆ 91, ಸರಕಾರಿ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 80, ಎ.ಪಿ.ಎಂ.ಸಿ ರೈತ ಭವನ ಹಳೆಯ ಕಟ್ಟಡ ಮತಗಟ್ಟೆ ಸಂಖ್ಯೆ 100 ರಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮಂಜುನಾಥ ಚವ್ಹಾಣ ತಿಳಿಸಿದರು.
ಗದಗ ಜಿಲ್ಲೆಯಲ್ಲಿ ಲೋಕಸಭೆ ಮತದಾನ ಕಾರ್ಯ ಶಾಂತಿ ಹಾಗೂ ಸವ್ಯವಸ್ಥಿತವಾಗಿ ಜರುಗಲು ಚುನಾವಣಾ ಆಯೋಗದ ಮಾರ್ಗದಶರ್ಿ ಸೂತ್ರ ಹಾಗೂ ಸ್ಥಳೀಯ ಆಂಶಗಳನ್ನು ಆಧರಿಸಿ ಸೂಕ್ತ ಭಧ್ರತಾ ಕ್ರಮ ಕೈಕೊಳ್ಳಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಪೊಲೀಸ ಇಲಾಖೆಯ 4 ಡಿಎಸ್ಪಿ, 12 ಸಿಪಿಐ, 27 ಪಿಎಸೈ, 19 ಎಸೈ, 700 ಪೊಲೀಸ್ ಸಿಬ್ಬಂದಿ 6ಒಒ ಗೃಹರಕ್ಷಕರು, ಸೇರಿದಂತೆ 1500 ಕ್ಕೂ ಹೆಚ್ಚಿನ ಅಧಿಕಾರಿ ಸಿಬ್ಬಂದಿಯು ಮತದಾನ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದಲ್ಲದೇ ಎರಡು ಕಂಪನಿ ಸಶಸ್ತ್ರ ಮೀಸಲು ಪಡೆ ಸೇರಿದಂತೆ ಹೆಚ್ಚುವರಿಯಾಗಿ ಹೊರಗಿನಿಂದ ಬಂದಿರುವ ರಕ್ಷಣಾ ದಳಗಳು ಮತದಾನವು ಶಾಂತಿ, ಸುವ್ಯಸ್ಥಿತ ವಾತಾವರಣದಲ್ಲಿ ಮತದಾರರು ನಿಭರ್ೀತಿಯಿಂದ ಮತದಾನ ಮಾಡುವಂತೆ ಕ್ರಮ ಜರುಗಿಸಲಾಗಿದೆ. 66 ಸೆಕ್ಟರ ಮೊಬೈಲ್ ರಕ್ಷಣಾ ಘಟಗಳು ಸದಾ ಸಂಚಾರದಲ್ಲಿರುತ್ತವೆ ಚುನಾವಣಾ ಕಾರ್ಯದಲ್ಲಿ ಅಶಾಂತಿ. ಅವ್ಯವಸ್ಥೆ ಉಂಟುಮಾಡುವವರ ವಿರುದ್ದ ಮುಂಜಾಗ್ರತೆಯ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಶ್ರೀನಾಥ ಜೋಷಿ ತಿಳಿಸಿದರು.
ಜಿಲ್ಲೆಯ ಮತದಾನಕ್ಕೆ ಜಿಲ್ಲಾಡಳಿತ ಕೈಕೊಂಡ ಕ್ರಮಗಳನ್ನು ವಿವರಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಪರ ಜಿಲ್ಲಾಧಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಕಾರ್ಯದಶರ್ಿ ಟಿ.ದಿನೇಶ ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗದ ಅಧಿಕಾರಿ ಸಿಬ್ಬಂದಿಗಳು ಇದ್ದರು.