ಗದಗ 15: ಅಕ್ಷರದಾಸೋಹದ ಬಿಸಿಯೂಟ ತಯಾರಿಕಾ ಸಿಬ್ಬಂದಿಗಳಿಗೆ ಗದಗ ಬೆಟಗೇರಿಯ ಲೋಯಲಾ ಪ್ರೌಢಶಾಲೆಯಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ ಜರುಗಿತು.
ಗದಗ ತಾಲೂಕು ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿಗಳು ಬಿಸಿಯೂಟ ತಯಾರಿಕಾ ಸಿಬ್ಬಂದಿ ಲೋಕಸಭಾ ಚುನಾವಣೆ ಮತದಾನದಲ್ಲಿ ತಪ್ಪದೇ ಮತ ಚಲಾಯಿಸಿ ತಮ್ಮ ಕುಟುಂಬದ, ಸಮಾಜದ ಹಾಗೂ ಸುತ್ತಲಿನ ಅರ್ಹ ಮತದಾರರು ಯಾವುದೇ ಆಮಿಷಕ್ಕೊಳಗಾಗದೇ, ತಪ್ಪದೇ ಮತ ಚಲಾಯಿಸಲು ಪ್ರೇರೆಪಿಸುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನವನ್ನು ತಪ್ಪದೇ ಮಾಡುವ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು. ಇ.ವಿ.ಎಂ ಮತಯಂತ್ರದ ಪ್ರಾತ್ಯಕ್ಷಿಕೆ ಈ ಸಂದರ್ಭದಲ್ಲಿ ಜರುಗಿತು.
ಅಕ್ಷರ ದಾಸೋಹ ಅಧಿಕಾರಿ ಅಸುಂಡಿ, ಗದಗ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಕೆಳದಿಮಠ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಡ್ಡೇರ, ಜಿಲ್ಲಾ ಸ್ವೀಪ ಸಮಿತಿ ಅಧಿಕಾರಿ ಎಸ್.ಕೆ ಹವಾಲ್ದಾರ, ತಾಲೂಕು ಪಂಚಾಯತ ಪಿ.ಡಿ.ಓ ಹಾಗೂ ಗದಗ ವ್ಯಾಪ್ತಿಯ ಬಿಸಿಯೂಟ ತಯಾರಕಾ ಸಿಬ್ಬಂದಿಗಳು ಮತದಾರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.