ಧಾರವಾಡ 26: ಜಿಲ್ಲಾ ಪಂಚಾಯತಿಯ 2018-19 ನೇ ಸಾಲಿನಲ್ಲಿ 279.28 ಕೋಟಿ ರೂ.ಗಳ ವಾಷರ್ಿಕ ಕ್ರಿಯಾ ಯೋಜನೆಗೆ ಹಾಗೂ ಅನಿಬರ್ಂಧಿತ ಕ್ರಿಯಾ ಯೋಜನೆಯಡಿ 4 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಇಂದು ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆಯಿತು.
ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ಅವರ ಅಧ್ಯಕ್ಷತೆಯಲ್ಲಿಂದು ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಸಾಮಾನ್ಯ ಸಭೆ ಜರುಗಿತು. ಸಭೆಯಲ್ಲಿ ಮಂಡನೆಯಾದ ವಾಷರ್ಿಕ ಕ್ರಿಯಾ ಯೋಜನೆಗೆ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಕೆಲವು ಕಾಮಗಾರಿಗಳ ಮಾಪರ್ಾಡಿನ ಸೂಚನೆಯೊಂದಿಗೆ ಸಭೆ ಸವರ್ಾನುಮತದ ಅನುಮೋದನೆ ನೀಡಿತು.
ವೇತನ- 62.02 ಕೋಟಿ ರೂ. ವೇತನೇತರ -100.46 ಕೋಟಿ ರೂ. ವಿಶೇಷ ಘಟಕ ಯೋಜನೆ (ಎಸ್ಸಿಪಿ) - 7.14 ಕೋಟಿ ರೂ. ಗಿರಿಜನ ಉಪಯೋಜನೆ (ಟಿಎಸ್ಪಿ)- 4.36 ಕೋಟಿ ರೂ. ಸಾಮಾನ್ಯ- 10 ಕೋಟಿ ರೂ. ಸಂಸ್ಥೆಗಳ ಸಹಾಯಧನಕ್ಕಾಗಿ- 72.37 ಕೋಟಿ ರೂ. ಶಿಕ್ಷಣ - 139.04 ಕೋಟಿ ರೂ. ಕೃಷಿ, ತೋಟಗಾರಿಕೆ, ರೇಷ್ಮೆ -74 ಕೋಟಿ ರೂ. ಆರೋಗ್ಯ-33.28 ಕೋಟಿ ರೂ. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ- 35.03 ಕೋಟಿ ರೂ. ಸಮಾಜ ಕಲ್ಯಾಣ -23.40 ಕೋಟಿ ರೂ. ಮಹಿಳಾ, ಮಕ್ಕಳ ಅಭಿವೃದ್ಧಿ, ವಿಕಲಚೇತನರ ಕಲ್ಯಾಣ- 2.17 ಕೋಟಿ ರೂ. ಪಂಚಾಯತ ರಾಜ್ ಕಾಮಗಾರಿಗಳು-13.71 ಕೋಟಿ ರೂ. ಅನುದಾನ ಬಳಕೆಗೆ ಸಭೆಯಲ್ಲಿ ಅನುಮತಿ ಪಡೆಯಲಾಯಿತು.
ಜಿಲ್ಲೆಯಲ್ಲಿ 156 ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಅವುಗಳನ್ನು ನೆಲಸಮಗೊಳಿಸಿ ಮರುನಿಮರ್ಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಯಾವುದೇ ಜೀವಹಾನಿ ಅಥವಾ ಅಪಾಯ ಸಂಭವಿಸಲು ಅವಕಾಶ ನೀಡಬಾರದು ಎಂದು ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು.
ಜಿ.ಪಂ. ಸಿಇಓ ಡಾ.ಬಿ.ಸಿ. ಸತೀಶ್ ಮಾತನಾಡಿ ಶತಮಾನ ಕಂಡಿರುವ ಶಾಲೆಗಳ ಹಳೆಯ ವಿದ್ಯಾಥರ್ಿಗಳ ಸಭೆ ನಡೆಸಿ ಅವರಿಂದ ನೆರವು ಪಡೆದು ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಚಿಸಬೇಕು. ವಿವಿಧ ಕೈಗಾರಿಕೆಗಳ ಸಿಎಸ್ಆರ್ ಚಟುವಟಿಕೆಗಳಡಿಯಲ್ಲಿ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಸದಸ್ಯೆ ರೇಣುಕಾ ಇಬ್ರಾಹಿಂಪುರ ಮಾತನಾಡಿ, ಎಸ್ಎಸ್ಎಲ್ಸಿ ಪರೀಕ್ಷೆಗಳು ಸಮೀಪಿಸುತ್ತಿವೆ. ಫಲಿತಾಂಶ ಸುಧಾರಣೆಗೆ ವಿಶೇಷ ಚಟುವಟಿಕೆಗಳನ್ನು ಈಗಿನಿಂದಲೇ ಆರಂಭಿಸಬೇಕು ಎಂದರು.
ಜಂಟಿಕೃಷಿ ನಿದರ್ೆಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ 2018 ರ ಮುಂಗಾರು ಹಂಗಾಮಿನಲ್ಲಿ ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ 84,000 ಹೆಕ್ಟೇರ್ ಪ್ರದೇಶದಲ್ಲಿನ 60 ಕೋಟಿ ರೂ.ಮೌಲ್ಯದ ಬೆಳೆಹಾನಿಯಾಗಿದೆ. ಈ ಬಾರಿ 1970 ಕೃಷಿ ಹೊಂಡಗಳ ನಿಮರ್ಾಣಕ್ಕೆ ಮಂಜೂರಾತಿ ದೊರೆತಿದೆ. 6000 ಕ್ಕೂ ಹೆಚ್ಚು ಅಜರ್ಿಗಳು ಬಂದಿವೆ. ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಇನ್ನಷ್ಟು ಕೃಷಿಹೊಂಡಗಳ ನಿಮರ್ಾಣಕ್ಕೆ ಅನುದಾನ ದೊರೆಯಲಿದೆ ಎಂದರು.
ಸಭೆ ಆರಂಭದಲ್ಲಿ ಹಿಂದಿನ ಸಭೆಯ ಅನುಸರಣಾ ವರದಿಗೆ ಸಭೆ ಅನುಮೋದನೆ ನೀಡಿತು. ಮತ್ತು ವಿವಿಧ ಸ್ಥಾಯಿ ಸಮಿತಿಗಳ ಸಭೆಯ ನಡವಳಿಗಳಿಗೆ ಸಭೆಯು ಅನುಮೋದನೆ ನೀಡಿತು.
ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿ.ಪಂ. ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್ ಇದ್ದರು. ಜಿ.ಪಂ. ಉಪಕಾರ್ಯದಶರ್ಿ ಎಸ್.ಜಿ. ಕೊರವರ ಸಭೆ ನಿರ್ವಹಿಸಿದರು.
ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಮತ್ತು ಜಿ.ಪಂ. ಸದಸ್ಯರು, ತಾ.ಪಂ. ಗಳ ಅಧ್ಯಕ್ಷರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.