ಅದ್ಧೂರಿ ವೇಮನ ಜಯಂತಿ ಆಚರಣೆಗೆ ನಿಧರ್ಾರ

ಲೋಕದರ್ಶನ ವರದಿ

ರಾಮದುರ್ಗ 16:  ಜನೇವರಿ-19 ರಂದು ನಡೆಯಲಿರುವ ಮಹಾಯೋಗಿ ವೇಮನರ 607 ನೇ ಜಯಂತ್ಯೋತ್ಸವ ಆಚರಣೆಯ ಪ್ರಯುಕ್ತ ಪಟ್ಟಣದ ಶ್ರೀನಿವಾಸ್ ಕಲ್ಯಾಣ ಮಂಟಪದಲ್ಲಿ ರಡ್ಡಿ ಸಮಾಜದ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. 

ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುವ ಕುರಿತು ಚಚರ್ಿಸಿ, ಜಯಂತಿ ಅಂಗವಾಗಿ ಪಟ್ಟಣದ ಬೆಳಿಗ್ಗೆ 9 ಗಂಟೆಗೆ ವೆಂಕಟೇಶ್ವರ ದೇವಸ್ಥಾನದಿಂದ ಶ್ರೀನಿವಾಸ ಕಲ್ಯಾಣ ಮಂಟಪದವರೆಗೆ ವಿವಿಧ ವಾಧ್ಯ ಮೇಳದೊಂದಿಗೆ ಬೈಕ್ ರ್ಯಾಲಿಯ ಮೂಲಕ ಮೆರವಣೆಗೆ ನಡೆಸುವದು. ನಂತರ 10.30 ಕ್ಕೆ ಜಯಂತಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಚಚರ್ಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಡ್ಡಿ ಸಮಾಜದ ತಾಲೂಕಾಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ, ಮಾ.3 ರಂದು ಪಟ್ಟಣದ ಆಂಜನೇಯ ನಗರದಲ್ಲಿ ನಿಮರ್ಿಸಲಾದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ಮಲ್ಲಮ್ಮ ಮೂತರ್ಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬೃಹತ ಪ್ರಮಾಣದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಎಲ್ಲ ಸಮಾಜ ಬಾಂಧವರು ಕೈ ಜೋಡಿಸಬೇಕು. ಸಾರ್ವಜನಿಕರು ಜ.19 ರಂದು ಬೆಳಿಗ್ಗೆ 9 ಗಂಟೆಗೆ ಸಮಯಕ್ಕೆ ಸರಿಯಾಗಿ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಬೇಕು. ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಕಲ್ಯಾಣ ಮಂಟಪಕ್ಕೆ ಬಂದು ಜಯಂತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸಮಾಜದ ಮುಖಂಡ ರಮೇಶ ಅಣ್ಣಿಗೇರಿ ಮಾತನಾಡಿ, ಸಮಾಜದ ಸಂಘಟನೆ ಕುರಿತು ಮಾತನಾಡಿದರು. ಗೋಪಾಲ ಸಂಶಿ, ಯಂಕಣ್ಣ ಮುಧೋಳ ಸೇರಿದಂತೆ ಸಮಾಜದ ಮುಖಂಡರು ಜಯಂತಿ ಆಚರಣೆ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಿದರು. 

ವೇದಿಕೆಯಲ್ಲಿ ರಡ್ಡಿ ಸಮಾಜದ ಮುಖಂಡರಾದ ಚನ್ನಬಸವರಾಜ ಹಿರೇರಡ್ಡಿ, ಜನಕರಡ್ಡಿ ಹಕಾಟಿ, ಮಾಜಿ ತಾ.ಪಂ ಅಧ್ಯಕ್ಷೆ ಮಂಜುಳಾ ದೇವರಡ್ಡಿ, ವೈ.ಬಿ.ಕಕರಡ್ಡಿ, ಹನಮಂತಗೌಡ ಭರಮಗೌಡ್ರ, ಶಿವಾನಂದ ಶಿರೂರ ಸೇರಿದಂತೆ ಉಪಸ್ಥಿತರಿದ್ದರು.

ಆನಂದ ಪಾಟೀಲ ಸ್ವಾಗತಿಸಿದರು. ಎಚ್.ಜಿ. ಒಂಟಗೋಡಿ ನಿರೂಪಿಸಿದರು. ಅಶೋಕ ಹಕಾಟಿ ವಂದಿಸಿದರು.