ನಾಮನಿರ್ದೇಶಿತ ಸದಸ್ಯನಾಗಿ ವಿನೋದ ಸಿಂಪಿ

Fun Oyster as a nominated member

ನಾಮನಿರ್ದೇಶಿತ ಸದಸ್ಯನಾಗಿ ವಿನೋದ ಸಿಂಪಿ 

ಮಹಾಲಿಂಗಪುರ: ಸ್ಥಳೀಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖಂಡ ವಿನೋದ ಗಂಗಾಧರ ಸಿಂಪಿ ಅವರನ್ನು ಮಹಾಲಿಂಗಪುರ ಪುರಸಭೆಯ ನಾಮನಿರ್ದೇಶಿತ ಸದಸ್ಯನನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಪುರಸಭೆಗೆ ನಾಲ್ವರು ಅಭ್ಯರ್ಥಿಗಳನ್ನು ಸದಸ್ಯರನ್ನಾಗಿ ಸರಕಾರ ನಾಮನಿರ್ದೇಶನ ಮಾಡಿ ಆದೇಶಿಸಿದ್ದು, ಉಳಿದ 1 ಸ್ಥಾನಕ್ಕೆ ಕರ್ನಾಟಕ ಪೌರಕಾಯ್ದೆಯಡಿ ಅಧಿಕಾರ ಚಲಾಯಿಸಿ ವಿನೋದ ಸಿಂಪಿ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.