ಜನೇವರಿ 18 ರಿಂದ ರಸಿಕ ವ್ಯಾಖ್ಯಾನಮಾಲೆ

From January 18, Rasika Dharnimanale

ಜನೇವರಿ 18 ರಿಂದ ರಸಿಕ ವ್ಯಾಖ್ಯಾನಮಾಲೆ  

ಸಂಕೇಶ್ವರ 10: ರಸಿಕ ವ್ಯಾಖ್ಯಾನಮಾಲೆ ಜನೇವರಿ 18 ರಿಂದ ಜನೇವರಿ 22ರ ವರೆಗೆ  ಸಂಕೇಶ್ವರದ ಗಾಂಧಿ ಚೌಕ ವಿಠ್ಠಲ ಮಂದಿರದ ಪ್ರಾಣಾಂಗದಲ್ಲಿ ಜರುಗುವುದೆಂದು ಭವಾನಿ ಮಂದಿರದಲ್ಲಿ ವ್ಯಾಖ್ಯಾನಮಾಲೆ ಮಂಡಳದ ಸದಸ್ಯರು ತಿಳಿಸಿದರು. 

ಈ ಕುರಿತು ಭವಾನಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಸಮಾರಂಭದ ಬಗ್ಗೆ ವಿವರಣೆ ನೀಡಿದರಲ್ಲದೇ ಪತ್ರಕರ್ತರ ದಿನಾಚಾರಣೆಯನ್ನು ಪತ್ರಕರ್ತರಿಗೆ ಹೂಗುಚ್ಛ ನೀಡಿ ಸನ್ಮಾನಿಸಿದರು. ಈ ವಿಷಯವನ್ನು ಮರಾಠಾ ಸಮಾಜದ ಪುಢಾರಿಗಳಾದ ಅಪ್ಪಾ ಮೋರೆ, ಪುಷ್ಪರಾಜ ಮಾನೆ, ಅಭೀಜಿತ ಕುರಣಕರ, ಅರವಿಂದ ಕುರಾಡೆ, ವಾಳಕಿ, ಮೊದಲಾದವರು ಉಪಸ್ಥಿತರಿದ್ದರು.  

ಪ್ರಾಚಾರ್ಯರು ಡಾ. ಜಿ.ಪಿ. ಮಾಳಿ, ಕೊಲ್ಹಾಪೂರ, ವಿಜಯ ಕಾಳೆ, ಕಾಂಚನ ಬಿರನಾಳೆ, ನಿಪ್ಪಾಣಿ, ಶಿವಾಜಿರಾವ ಭುಕೆಲೆ, ಗಡಹಿಂಗ್ಲಜ, ಅಮರ ಜಾಂಭಳೆ, ಗಡಹಿಂಗ್ಲಜ, ಇವರಿಂದ ಈ ವ್ಯಾಖ್ಯಾನಮಾಲೆ ನಡೆಯಲಿದೆ