ಜೈನ ಸಮಾಜದಿಂದ ಡಿ. ಸುರೇಂದ್ರಕುಮಾರಗೆ ಸನ್ಮಾನ

ಧಾರವಾಡ 15: ಯಶಸ್ಸಿನ ಮಾರ್ಗವನ್ನು ನಿರಂತರ ಪರಿಶ್ರಮ, ಶ್ರದ್ಧೆ ಬುದ್ಧಿಶಕ್ತಿಗಳಿಂದ ಸಾಧಿಸಬೇಕೆ ಹೊರತು ಹಣದಿಂದಲ್ಲ. ಉತ್ತಮರ ಒಡನಾಡ, ಮಾತಿನಲ್ಲಿ ಸವಿ, ನೀತಿಯಲ್ಲಿ ಸ್ಪಷ್ಟತೆ, ಕೃತಿಗಳಲ್ಲಿ ದೃಢತೆಗಳಿದ್ದರೆ ದೇವ ಮಾನವರಾಗುತ್ತಾರೆ. ಇಂತಹ ಸನ್ಮಾನಗಳು ನನ್ನ ಬದುಕಿನ ಪಾಠ ಕಲಿಸುವ ಅಮೂಲ್ಯ ಕ್ಷಣಗಳು, ಪ್ರತಿದಿನವೂ ಬದಲಾವಣೆ ಪರಿಷ್ಕರಣೆ ಪಾಠ. ಈ ಪ್ರತಿಫಲಾಪೇಕ್ಷೆಗಳಿಲ್ಲದೆ ನೀತಿ ಪಾಠಗಳು ನನ್ನಿಂದ ಸಮಾಜಕ್ಕೆ ಅಳಿಲು ಸೇವೆಗಯ್ಯಲು ಪ್ರೇರಣೇ ನೀಡುತ್ತಾ ಬಂತು. ಈ ಬಾರಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ನನಗೆ ದೊರಕಿರುವುದು ಸಂತಸ ತಂದಿರುವುದಲ್ಲದೇ ಇನ್ನೂ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಇದ್ದಂತಾಗಿದೆ. ನಿಮ್ಮ ಹೃದಯಾಂತರಾಳದ ವಿಶ್ವಾಸ ನನ್ನ ಮೇಲಿಟ್ಟಿರುವುದಕ್ಕೆ ನಾನೆಂದೂ ಚಿರರುಣಿ ಎಂದು ಡಿ. ಸುರೇಂದ್ರಕುಮಾರ ತಿಳಿಸಿದರು.

ಧಾರವಾಡ ದಿಗಂಬರ ಸಮಾಜ ಜೈನ್ ಸಮಾಜ ಹಾಗೂ ಜೈನ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಹೊಸಯಲ್ಲಾಪುರದ ಆದಿನಾಥ ಭವನದಲ್ಲಿ ಇಂದು ಸಂಜೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

2019ರ ಫೆಭ್ರುವರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಎಲ್ಲರಿಗೂ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ದಿಗಂಬರ ಜೈನ ಸಮಾಜದ ಹಿರಿಯ ಎಲ್ಲಪ್ಪಾ ತಡಸ ಅಧ್ಯಕ್ಷತೆ ವಹಿಸಿದ್ದರು. ಡಾ. ಅಜಿತ ಪ್ರಸಾದ, ದತ್ತಾ ಡೋಲರ್ೆ, ಜೀವಂಧರ ಕುಮಾರ ಮತ್ತು ಡಾ. ಜಿನದತ್ತ ಹಡಗಲಿ ಪ್ರಶಸ್ತಿ ಪುರಸ್ಕೃತರ ಪರ ಮಾತನಾಡಿದರು. ಕೆ.ಜಯಕೀತರ್ಿ ಜೈನ್ ನಿರೂಪಿಸಿದರು. ಮತ್ತು ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಅಶೋಕ ಬಾಳಿಕಾಯಿ ವಂದಿಸಿದರು, ಪಾಶ್ರ್ವನಾಥ ಶೆಟ್ಟಿ, ಮಹಾವೀರ ಉಪಾದ್ಯೆ ಶ್ರೀಧರ ಬಸ್ತಿ ಇತರರು ಉಪಸ್ಥಿತರಿದ್ದರು.