ಲೋಕದರ್ಶನ ವರದಿ
ಬೆಳಗಾವಿ 19: ಕಿವುಡ ಮಕ್ಕಳ ಸರಕಾರಿ ಶಾಲೆ ಬೆಳಗಾವಿಯಲ್ಲಿ ದಿ.18ರಂದು ಚೈಲ್ಡ್ ಲೈನ್ ಸಹಯೋಗದಲ್ಲಿ ಸ್ನೇಹ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ವಿದ್ಯಾಥರ್ಿಗಳಿಗಾಗಿ ಆಟೋಟ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು. ಸ್ಪಧರ್ೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ಲೂದರ್್ ಮಾತನಾಡಿ ಸರಕಾರದ ಯೋಜನೆಗಳನ್ನು ಕುರಿತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಈ ಸಭೆಯಲ್ಲಿ ಕಿವುಡ ಮಕ್ಕಳ ಸರಕಾರಿ ಶಾಲೆಯ ಅಧೀಕ್ಷಕರಾದ ಆರ್.ಬಿ.ಬನಶಂಕರಿರವರು ಅಧ್ಯಕ್ಷತೆ ವಹಿಸಿದ್ದರು. ಹಾಗೂ ಕೈಗಾರಿಕಾ ಮತ್ತು ಹಿರಿಯ ನಾಗರಿಕ ಸಹಾಯವಾಣಿ ಜಂಟಿ ನಿದರ್ೇಶಕ ಎಮ್.ಎಸ್. ಮುದಕವಿ, ಹಿರಿಯ ನಾಗರಿಕ ಸಂಸ್ಥೆಯ ಪದಾಧಿಕಾರಿ ಬಸವರಾಜ ನಿವರ್ಾಣಿ, ಶಿವಲೀಲಾ ಹಿರೇಮಠ, ರಾಜು ಬೋಜಪ್ಪಗೋಳ, ನಿಂಗಪ್ಪ ಮರಿಕಟ್ಟಿ, ಸುಧಾ ಗಟ್ಟಿ, ಹಾಗೂ ಶಾಲೆಯ ಶಿಕ್ಷಕರಾದ ಶಂಕರಗೌಡ ಪಾಟೀಲ, ಸಂತೋಷ ಕುಮಾರ, ಎಮ್.ಮುರಳೀಧರ, ಸಂತೋಷ ಕೆ. ರತ್ನಮ್ಮ ಪಿ, ಶಿವಜ್ಯೋತಿ, ದೀಪಾ ಕಂಬಾರ, ರಶ್ಮೀ ನವಲಕರ, ಸವಿತಾ ಹೋಳಿ, ಸವಿತಾ ಕೇರೂರ ಉಪಸ್ಥಿತರಿದ್ದರು.