ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮ ಸಮಾರೋಪ

ಧಾರವಾಡ 25; ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮವನ್ನು ಈ ವರ್ಷ ನ. 15ರಂದು ಪ್ರಾರಂಭವಾಗಿ ದಿ. 23ವರಗೆ ಧಾರವಾಡ ಹಾಗೂ ಹುಬ್ಬಳ್ಳಿಯ ವಿವಿಧ ಸ್ಥಳಗಳಲ್ಲಿ ಪ್ರತಿ ದಿನ ಮಕ್ಕಳ ಸಂಬಂಧಿಸಿದ ಭಿಕ್ಷಾಟಣೆ, ಬಾಲ ಕಾಮರ್ಿಕ ಪದ್ಧತಿ, ಬಾಲ್ಯವಿವಾಹ ಪದ್ಧತಿ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹಾಗೂ ವಿಶೇಷ ಮಕ್ಕಳಿಗೆ ಜಾಗೃತಿ ಮೂಡಿಸುವ ತಿಳವಳಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪದಕಗಳು ಹಾಗೂ ಪ್ರಸಂಶನಾ ಪತ್ರವನ್ನು ವಿತ್ತರಿಸುವ ಜೊತೆ ಮಕ್ಕಳ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಇವತ್ತು ಬರೆ ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮದ ಸಮಾರೋಪ ಸಮಾರಂಭ. ಮಕ್ಕಳ ಸಹಾಯವಾಣಿ 1098 ಇಡಿ ವರ್ಷ ಪ್ರತಿ ದಿನ 24 ಘಂಟೆ ಕೆಲಸವನ್ನು ಮಾಡುತ್ತದೆ ತೊಂದರೆಯಲ್ಲಿರುವ ಮಕ್ಕಳ ಕುರಿತು ಮಕ್ಕಳು ಸಾರ್ವಜನಿಕರು ದೊರವಾಣಿ ಮೂಲಕ ತಿಳಿಸಿದರೆ ಮಕ್ಕಳ ಸಹಾಯವಾಣಿ ಸಮಸ್ಯೆಯನ್ನು ವಿವಿಧ ಇಲಾಖೆಗಳ ಸಹಾಯ ಸಹಕಾರದಿಂದ ಬಗೆಹರಿಸುವ ಪ್ರಯತ್ನವನ್ನು ಮಾಡುತ್ತದೆ ಎಂದು ಚಂದ್ರಶೇಖರ ರಾಹುತರ ತಿಳಿಸಿದರು.

    ದಿ.24ರಂದು ಕೇಂದ್ರ ಸಕರ್ಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಬಿ.ಡಿ.ಎಸ್.ಎಸ್.ಸಂಸ್ಥೆ ಮಕ್ಕಳ ಸಹಾಯವಾಣಿ-1098, ಸಿ.ಐ.ಎಫ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಧಾರವಾಡ  ಹಾಗೂ ಸರಕಾರಿ ಪ್ರಾಥಮಿಕ ಹಿರಿಯ ಪ್ರೌಡ ಕನ್ನಡ ಹಾಗೂ ಉದರ್ು ಶಾಲೆ, ಮದಾರಮಡ್ಡಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ, ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು.

ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಅವರು ಮಾತನಾಡುತ್ತಾ ಮಕ್ಕಳ ಸಹಾಯವಾಣಿ 1098 ಕಾರ್ಯಕ್ರಮ ರಾಷ್ಟ್ರದಾದ್ಯಂತ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಸಚಿವಾಲಯದಿಂದ ನಡೆಯುತ್ತದೆ. ಮಕ್ಕಳ ಸಹಾಯವಾಣಿಯ ಲಾಭವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ನಂತರ ವಿವಿಧ ಸ್ವಧರ್ೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತಿಯ, ಹಾಗೂ ತೃತಿಯ ಸ್ಥಾನಗಳು ಪಡೆದುಕೊಂಡಿರುವ ಮಕ್ಕಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದಶರ್ಿ ಚಿಣ್ಣನ್ನವರ ಆರ್.ಎಸ್. ಪದಕಗಳು ಹಾಗೂ ಪ್ರಸಂಶನಾ ಪತ್ರವನ್ನು ವಿತ್ತರಿಸಿ ಮಾತನಾಡುತ್ತಾ ಇವತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಮೂದಲಿನಂತೆ ತೊಂದರೆಗಳು ಇಲ್ಲ. ಮೊದಲು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಉಪನಿದರ್ೇಶಕರು ಭೇಟಿ ನೀಡುವದು ಅಪರೂಪವಿತ್ತು. ಇವತ್ತು ಅವರು ಶಾಲೆಗಳಿಗೆ ಭೇಟಿಯಾಗಿ ಮಕ್ಕಳ ಶಿಕ್ಷಣ ಬಗ್ಗೆ ವಿಚಾರಿಸುತ್ತಿದ್ದಾರೆ. ಮೊದಲು ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಸರಿ ಇದ್ದಿಲ್ಲಾ. ಆದರು ಶಿಕ್ಷಕರು ಮಕ್ಕಳಿಗೆ ತುಂಬ ಸಂತೋಷದಿಂದ ಹೋಗಿ ಶಿಕ್ಷಣವನ್ನು ನೀಡುತ್ತಿದ್ದರು. ಈಗೂ ಸಹ ಶಿಕ್ಷಕರು ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡುವಲ್ಲಿ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಶಿಕ್ಷಕರು ಮಕ್ಕಳಿಗೆ ಒಳ್ಳೆ ಬೋಧನೆ ಮಾಡಬೇಕು. ಭೋಧನೆ ಮಾಡುವಾಗ ಮಕ್ಕಳಿಗೆ ಕೆಲ ಸಣ್ಣ ಪುಟ್ಟ ಶಿಕ್ಷೆ ಕೊಟ್ಟಿರುತ್ತಾರೆ. ಅದು ಶಿಕ್ಷಣದ ಹಾಗೂ ಕಲಿಕೆಯ ಒಂದು ಭಾಗ. ಮಕ್ಕಳು ಅದನ್ನು ದುರುಪಯೋಗ ಮಾಡಬಾರದು ತಮ್ಮ ಪಾಲಕರಿಗೆ ದೂರನ್ನು ಕೊಡಬಾರದು ಎಂದು ಕಿವಿ ಮಾತು ಹೇಳಿದರು.

ನಂತರ 4 ಶಾಲೆಯ ಶಿಕ್ಷಕರು ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಕುರಿತು ಹಿರಿಯ  ಚಿಣ್ಣನ್ನವರಗೆ ಮಕ್ಕಳ ಪರವಾಗಿ ಮನವಿ ಸಲ್ಲಿಸಿದರು. ಅವರು ಮನವಿ ಪಡೆದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೌಲಭ್ಯವನ್ನು ಒದಗಿಸಿಕೊಡುವಂತೆ ತಿಳಿಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪತ್ರವನ್ನು ಸಹ ಕಳುಹಿಸುತ್ತೆವೆ ಎಂದು ತಿಳಿಸಿದರು.      

ಬಿ.ಆರ್.ಸಿ ಪಾಟೀಲ್, ಎ.ಬಿ.ಪಠಾಣ, ಹೆಚ.ಡಿ. ನಾಗಮ್ಮನವರ, ಶ್ರೀದೇವಿ ಎಸ್. ದ್ಯಾಮಣ್ಣವರ ಶಿಕ್ಷಕರು, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಹಾಗೂ ಸುಮಾರು 200 ಮಕ್ಕಳು ಭಾಗವಹಿಸಿದ್ದರು. ಚಂದ್ರಶೇಖರ ರಾಹುತರ ನಿರೂಪಿಸಿದರು. ಬಿ.ಆರ್.ಸಿ ಪಾಟೀಲ್ ಸ್ವಾಗತಿಸಿ, ವಂದಿಸಿದರು.