ಸೌಹಾರ್ದ ಸಹಕಾರಿಯ ವಾಷರ್ಿಕ ಸಭೆ, ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ

ವಿಜಯಪುರ 09:ಕನರ್ಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರಿಂದ ವಿಜಯಪುರದಲ್ಲಿ ಸೌಹಾರ್ದ ಸಹಕಾರಿಯ  ವಾಷರ್ಿಕ ಸಭೆ ಮತ್ತು ಮುಖ್ಯ ಕಾರ್ಯನಿವರ್ಾಹಕರಿಗೆ  ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಶುಭಶ್ರೀ ಸಾಗರ ಹೊಟೇಲನಲ್ಲಿ ದಿನಾಂಕ 9-01-2019 ರಂದು  ಎಂ.ಜಿ. ಪಾಟೀಲ ನಿದರ್ೇಶಕರು ಸಂಯುಕ್ತ ರಾಜ್ಯ  ಸಂಯುಕ್ತದ ಉದ್ಘಾಟನೆ ನೆರವೇರಿಸಿ ಮಾತನಾಡಿ ಸಹಕಾರಿಗಳು ತಮ್ಮ ಸದಸ್ಯರೊಂದಿಗೆ ಮಾತ್ರ ವ್ಯವಹಾರಿಸತಕ್ಕದ್ದು ಸದಸ್ಯರೇತರಿಂದ ವ್ಯವಹಾರ ಮಾಡಿದಲ್ಲಿ ಅವರಿಂದ ಬಂದಂತಹ ಆದಾಯದ ಮೇಲೆ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅದರಿಂದ ಮುಂದಿನ ದಿನಮಾನಗಳಲ್ಲಿ ಸದಸ್ಯರೊಂದಿಗೆ ಕಡ್ಡಾಯವಾಗಿ ವ್ಯವಹಾರ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. ಶ್ರೀ ಸಿದ್ಧರಾಮಪ್ಪ ಉಪ್ಪಿನ ನಿದರ್ೇಶಕರು ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಅವರು ಮಾತನಾಡಿ ಜಿಲ್ಲೆಯ ಸಹಕಾರಿಗಳಿಗೆ ಸಂಯುಕ್ತ ಸಹಕಾರಿಯು ಮೇಲಿಂದ ಮೇಲೆ ತರಬೇತಿಗಳನ್ನು ಆಯೋಜಿಸುತ್ತಿರುವುದು ತುಂಬಾ ಆಯೋಜಿಸುತ್ತಿರುವು ತುಂಬಾ ಶ್ಲಾಘನೀಯ. ಸಂಯುಕ್ತ ಸಹಕಾರಿ ಇರುವುದು ತಮ್ಮನ್ನು ಸಮರ್ಥ ಹಾಗೂ ವ್ಯವಹಾರದಲ್ಲಿ ಪರಿಣಿತ ಪಡಿಸುವ ಆಶಾಭಾವನೆಯಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಶ್ರೀ ಬಸವರಾಜು ಎಸ್. ಸೌಹಾರ್ದ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಸೌಹಾರ್ದ ಸಹಕಾರಿಗಳು ಯಾರಿಗೂ ತೊಂದರೆಗಳಾದಲ್ಲಿ ಪರಿಹಾರಕ್ಕಾಗಿ ಈ ಸಂಯುಕ್ತ ಸಹಕಾರಿಯು ಸದಾ ಶ್ರಮದಾನಮಾಡುತ್ತದೆ, ಮತ್ತು ಮಾರ್ಗದರ್ಶನ ಮಾಡುತ್ತದೆ ಎಂದು ತಿಳಿಸಿದರು. ಮತ್ತು ಸೌಹಾರ್ದ ಸಹಕಾರಿಗಳ ವತಿಯಿಂದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಶಾಖೆ ವಿಜಯಪುರ ಇದರ ನಿದರ್ೇಶಕರಾದ ಚನಬಸಯ್ಯ ಹಿರೇಮಠ ಮಾತನಾಡಿ ಸೌಹಾರ್ದ ಸಹಕಾರಿಗಳು ನಿಯಮದ ಪ್ರಕಾರ ನಡೆದುಕೊಂಡು ಹೋದಾಗ ಮಾತ್ರ ಸೌಹಾರ್ದಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮತ್ತು ಜಿಲ್ಲೆಯಲ್ಲಿ ಬರುವಂತಹ ಮಹಿಳಾ ಸೌಹಾರ್ದಗಳ ಸಿಇಓಗಳಿಗೆ ಹೆಚ್ಚಿನ ತರಬೇತಿ ನೀಡಿದರೆ ಸೌಹಾರ್ದಗಳ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ ಎಂದರು.

ಬೆಳಗಾವಿ ಪ್ರಾಂಥದ ಜಿಲ್ಲೆಗಳಿಗೆ ಪ್ರತಿ ತಿಂಗಳು ತರಬೇತಿ ವ್ಯವಸ್ಥೆ ಮಾಡಲಾಗಿದ್ದು ತಾವು ಸಲಹೆಗಳನ್ನು ಪಡೆದು ವ್ಯವಹಾರ ಮಾಡಬೇಕೆಂದು ಸಲಹೆ ನೀಡಿದ ಎಸ್.ಜಿ.ಹೆಗಡೆ ತರಬೇತಿ ನೀಡಲು ಬಂದಂತಹ ಸಲಹೆಗಳನ್ನು ತಪ್ಪದೇ ಪಾಲಿಸಬೇಕೆಂದು ವಿವರಣೆ ನೀಡಿದರು ಮತ್ತು ಕುಮಾರಿ ಸಂಯುಕ್ತಾ ಶಿವಾನಂದ ಪಾಟೀಲ ನಿದರ್ೇಶಕರು ಡಿಸಿಸಿ ಬ್ಯಾಂಕ್ ವಿಜಯಪುರ ಇವರು ಮಾತನಾಡಿ, ಜಿಲ್ಲೆಯಲ್ಲಿ ಬರುವಂತಹ ಸುಮಾರು 400 ಸೌಹಾರ್ದಗಳ ಸಿಇಓಗಳು ಭಾಗವಹಿಸಿ ವಾಷರ್ಿಕ ಸಭೆಯಲ್ಲಿ ಅಧ್ಯಯನ ಮತ್ತು ಸಾಹಿತ್ಯ ತರಬೇತಿಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.