ಸ್ವಾತಂತ್ರ್ಯ ಯೋಧ ಶರಣಬಸವರಾಜ ಬಿಸರಳ್ಳಿಗೆ ಸನ್ಮಾನ

ಲೋಕದರ್ಶನ ವರದಿ

ಕೊಪ್ಪಳ  09: ಕೊಪ್ಪಳದ ಸಾಹಿತ್ಯ ಭವನದಲ್ಲಿ ಕನರ್ಾಟಕ ಉದರ್ು ಅಕಾಡೆಮಿ ಬೆಂಗಳೂರು ಹಾಗೂ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕುಲ್ ಹಿಂದ್ ಮಹೆಫಿಲೆ ಮುಶಾಯರಾ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಯೋಧ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಉದರ್ು ನಿವೃತ್ತ ಶಿಕ್ಷಕ ಶರಣಬಸವರಾಜ ಬಿಸರಳ್ಳಿಯವರಿಗೆ ಸನ್ಮಾನಿಸಲಾಯಿತು.

ಕನರ್ಾಟಕ ಉದರ್ು ಅಕಾಡೆಮಿ ಅಧ್ಯಕ್ಷರಾದ ಮುಬೀನ್ ಮುನವ್ವರ್ ನಗರಸಭೆ ಹಿರಿಯ ಸದಸ್ಯ ಅಮಜದ ಪಟೇಲ್, ಜೆಡಿಎಸ್ ಮುಖಂಡ ಕೆ.ಎಂ. ಸೈಯದ್, ಅಂಜುಮನ್ ಅಧ್ಯಕ್ಷ ಎಂ. ಪಾಷಾ ಖಾಟಾನ್, ಹುಬ್ಬಳ್ಳಿಯ ಸಮಾಜ ಸೇವಕ ರಶೀದ್ ಶೇಖ್, ಅಕಾಡೆಮಿ ಸದಸ್ಯರಾದ ಶಫೀಕ ಆಬೀದಿ, ಶಾಹಿದ್ ಖಾಜಿ, ಮಿಲ್ಲತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಇಮಾಮ್ ಹುಸೇನ ಸಿಂದೋಗಿ, ಕಾಂಗ್ರೆಸ್ ಮುಖಂಡ ಗವಿಸಿದ್ದಪ್ಪ ಮುದಗಲ್ ಸೇರಿದಂತೆ ಯುವ ನಾಯಕ ಎಂ.ಬಿ ಯುಸೂಫ್ ಖಾನ್,ಬದಿಯೂದಿನ್ ನವಿದ್, ಮಹ್ಮದ್ ಅಲಿ, ಹೀಮಾಯತಿ ಅಕಾಡೆಮಿ ಸಿಬ್ಬಂದಿ ಇಫರ್ಾನುಲ್ಲಾ ಮತಿತ್ತರರು ಪಾಲ್ಗೊಂಡಿದ್ದರು.