ಲೋಕದರ್ಶನ ವರದಿ
ಕಾಗವಾಡ 24: ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಐನಾಪೂರದ ಸಕರ್ಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ಸಕರ್ಾರದವತಿಯಿಂದ 204 ವಿದ್ಯಾಥರ್ಿಗಳಿಗೆ ಉಚಿತವಾಗಿ ಲ್ಯಾಪಟಾಪ್ ರಾಜ್ಯದ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಖಾತೆ ಸಚಿವ ಶ್ರೀಮಂತ(ತಾತ್ಯಾ) ಪಾಟೀಲ ವಿತರಿಸಿದರು.
ಸೋಮವಾರ ರಂದು ಐನಾಪೂರದ ಸಕರ್ಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ಬಿ.ಎ. ಮತ್ತು ಬಿ.ಕಾಂ ಪ್ರಥಮ ವರ್ಷದಲ್ಲಿ ಓದುತ್ತಿರುವ 204 ವಿದ್ಯಾಥರ್ಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲು ಸಚಿವರು ಉಚಿತವಾಗಿ ಲ್ಯಾಪಟಾಪ್ ನೀಡಿದರು.
ರಾಜ್ಯ ಸಕರ್ಾರ ಇಂದಿನ ಕಂಪ್ಯೂಟರ್ ಯುಗದಲ್ಲಿ ವಿದ್ಯಾಥರ್ಿಗಳಿಗೆ ಲ್ಯಾಪಟಾಪ್ದ ಕೊರತೆ ಸಾಮಾನ್ಯ ಕುಟುಂಬದ ವಿದ್ಯಾಥರ್ಿಗಳಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಲ್ಯಾಪಟಾಪ್ ನೀಡಲಾಗಿದೆ. ಸಕರ್ಾರದ ಯೋಜನೆಯ ಸದುಪಯೋಗ ಪಡೆದುಕೊಂಡು ವಿದ್ಯಾಲಯದ, ನಿಮ್ಮ ಜನ್ಮ ನೀಡಿದ ತಂದೆತಾಯಿಯ ಕನಸ್ಸನ್ನು ನನಸಾಗಿಸಿರಿ ಎಂದು ಸಚಿವರು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಈ ಸಮಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎನ್.ಜಾಧವ ಮತ್ತು ಎಲ್ಲ ಪ್ರಾಧ್ಯಾಪಕರು ಹಾಗೂ ಕೆ.ಆರ್.ಇ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಗೌಡಾ ಪಾರಶೆಟ್ಟಿ, ದಾದಾ ಪಾಟೀಲ, ರಾಜೇಂದ್ರ ಪೋತದಾರ, ಚಿದಾನಂದ ಡೂಗಣವರ, ಬಸವರಾಜ ಕಾಚರ್ಿ, ಅನುಪ ಶೆಟ್ಟಿ, ಪ್ರಕಾಶ ಚಿನಗಿ, ಹರಿಬಾ ಹಂಚಿನಾಳೆ, ಹನಮಂತ ಗುರವ್, ಸೇರಿದಂತೆ ಸಚಿವರ ಅಭಿಮಾನಿಗಳು ಅದ್ಧೂರಿವಾಗಿ ಸನ್ಮಾನಿಸಿದರು.