ಲೋಕದರ್ಶನ ವರದಿ
ಬೆಳಗಾವಿ : ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಅಡಿಯಲ್ಲಿ ಬೆಳಗಾವಿ ತಾಲ್ಲೂಕಿನ ಕುದ್ರೆಮನಿ ಗ್ರಾಮದಲ್ಲಿ ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಸಂಸದ ಸುರೇಶ ಅಂಗಡಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಿದರು.
ಮಂಗಳವಾರ ನಗರದ ಹೊರವಲಯದ ಕುದುರೆಮನಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 238 ಎಸ್ಸಿ/ಎಸ್ಟಿ ಪಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರಗಳನ್ನು ವಿತರಣೆ ಮಾಡಿ, ಸಕರ್ಾರ ಉಚಿತವಾಗಿ ನೀಡಿರುವಂತ ಗ್ಯಾಸ್ಗಳನ್ನು ಸರಿಯಾದ ರೀತಿಯಲ್ಲಿ ಜಾಗೃಕತೆಯಿಂದ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಎಮ್.ಎಲ್.ಎ ಮನೋಹರ ಕಡೋಲ್ಕರ್, ಆರ್.ಎಪ್.ಓ ಶ್ರೀನಾಥ ಕಡೋಲ್ಕರ್, ಧನಂಜಯ ಜಾದವ, ಗ್ರಾ.ಪಂ. ಅಧ್ಯಕ್ಷೆ ಅಶಿತಾ ಸುತಾರ, ಉಪಾದ್ಯಕ್ಷೆ ಮಲ್ಲವ್ವಾ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.