ಮಾದಿನೂರು ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
ಕೊಪ್ಪಳ 21: ತಾಲೂಕಿನ ಮಾದಿನೂರು ಗ್ರಾಮ ದಲ್ಲಿ ಗ್ರಾಮ ಪಂಚಾಯಿತಿ, ಕೊಪ್ಪಳ ಲೈನ್ಸ್ ಕಣ್ಣಿನ ಆಸ್ಪತ್ರೆ ಮತ್ತು ಕೊಪ್ಪಳ ಇನ್ನರ್ವಿಲ್ ಕ್ಲಬ್ ಇವುಗಳ ಸಯುಕ್ತ ಆಶ್ರಯದಲ್ಲಿ ಶನಿವಾರದಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು, ಸದರಿ ತಪಾಸಣಾ ಶಿಬಿರದಲ್ಲಿ ಗ್ರಾಮಸ್ಥರು ತಮ್ಮ ಕಣ್ಣಿನ ತಪಾಷಣೆ ಮಾಡಲಾಯಿತು ಮತ್ತು ಮತ್ತು ಕ್ಲಬ್ ವತಿಯಿಂದ ಶೀಘ್ರ ಇದೆ ದಿ 27 ರಂದು ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ವಿವರಿಸಿದರು , ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು, ಕಾರ್ಯಕ್ರಮದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ, ಯವರು ಸರಳ ಸಾಂಕೇತಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನೇತ್ರದಾನ ಅತ್ಯಂತ ಶ್ರೇಷ್ಠದಾನವಾಗಿದೆ ಕಣ್ಣಿನ ಚಿಕಿತ್ಸೆ ಪಡೆದುಕೊಳ್ಳಬೇಕು ಜನರಲ್ಲಿ ಜಾಗೃತಿ ಮೂಡಿಸಬೇಕು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ಕರೆ ನೀಡಿದರು ಹಾಗೂ ಸಹಕಾರ ನೀಡಿದ ಲೈನ್ಸ್ ಸಂಸ್ಥೆಯ ಕಣ್ಣಿನ ಆಸ್ಪತ್ರೆಯ ವೈದ್ಯರಿಗೆ ಸಿಬ್ಬಂದಿ ವರ್ಗದವರಿಗೆ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಕ್ಲಬ್ಬಿನ ಸದಸ್ಯರಿಗೆ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿಅಭಿನಂದಿಸಿದರು,ಕಾರ್ಯಕ್ರಮದಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ಉಪಾಧ್ಯಕ್ಷರಾದ ಮಧು ಶೆಟ್ಟರ್ ಕಾರ್ಯಕಾರಿ ಸದಸ್ಯರಾದ ಸುಜಾತ ಪಟ್ಟಣಶೆಟ್ಟಿ ನಿತಾ ತಂಬ್ರಳ್ಳಿ ಮಾಜಿ ಅಧ್ಯಕ್ಷರಾದ ಸುಧಾ ಶೆಟ್ಟರ್ ಸದಸ್ಯರಾದ ಕವಿತಾ ಶೆಟ್ಟರ್ ಸೇರಿ ದಂತೆ ಗ್ರಾಮ ಪಂಚಾಯಿತಿಯ ಅಧಿಕಾರಿ ವರ್ಗದವರು ಸಿಬ್ಬಂದಿಯವರು ಜನ ಪ್ರತಿನಿಧಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.