ಹೊಸಹಳ್ಳಿ ಬಂಧುಗಳಿಂದ ಉಚಿತ ಖತ್ನಾ ಶಿಬಿರ : ಕೆ.ಎಂ. ಸೈಯದ್‌

Free circumcision camp from Hosahalli relatives: K.M. Syed

ಹೊಸಹಳ್ಳಿ ಬಂಧುಗಳಿಂದ ಉಚಿತ ಖತ್ನಾ ಶಿಬಿರ : ಕೆ.ಎಂ. ಸೈಯದ್‌

ಕೊಪ್ಪಳ 10: ಸುಮಾರು 26 ವರ್ಷಗಳಿಂದ ಸತತವಾಗಿ ಮುಸ್ಲಿಂ ಮಕ್ಕಳಿಗೆ ಹೊಸಹಳ್ಳಿ  ಮರಹೂಮ ಜನಾಬ ರಾಜಾ ಹುಸೇನ ಸಾಹೇಬ ಹೊಸಹಳ್ಳಿ ಇವರ ಸ್ಮರಣಾರ್ಥ ಹೊಸಹಳ್ಳಿ ಬಂಧುಗಳಿಂದ ಕೊಪ್ಪಳ ಜಿಲ್ಲಾಧ್ಯಂತ ಉಚಿತ ಖತ್ನಾ ಶಿಬಿರವನ್ನು ಏರಿ​‍್ಡಸಿ ಶಿಬಿರ ಯಶಸ್ವಿಗೊಳಿಸಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸೈಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸೈಯದ್ ಹೇಳಿದರು. ಅವರು ಗುರುವಾರದಂದು  ನಗರದ ಸಿಂದೋಗಿ ರಸ್ತೆಯ ಮಹೆಬೂಬನಗರದ ಪರ್ಲ್‌ ಗಾರ್ಡ್‌ ಫಂಕ್ಷನ್ ಹಾಲ್ ನಲ್ಲಿ ಏರಿ​‍್ಡಸಿದ ಉಚಿತ ಖತ್ನಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ ಪ್ರತಿವರ್ಷ ಸಾವಿರಾರು ಮಕ್ಕಳು ಇದರ ಸೇವೆಯನ್ನು ಸದುಪಯೋಗ ಮಾಡಿಕೊಂಡಿದ್ದಾರೆ,ಹೊಸಹಳ್ಳಿ ಬಂದುಗಳು ಡಾ.ಹಸನ್ ಅಲಿ ನಿಂಗಾಪುರ ಇವರು ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಬೆಳಗಾಂ ಜಿಲ್ಲೆಗಳಲ್ಲಿಯೂ ಕೂಡಾ ಮುಸ್ಲಿಂ ಬಾಂಧವರು ಇದರ ಸದುಪಯೋಗ ಮಾಡಿಕೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಹಿರಿಯ ವಕೀಲರಾದ ಆಸಿಫ್ ಅಲಿ, ಪೀರಾಹುಸೇನ ಹೊಸಹಳ್ಳಿ, ಇಮ್ರಾನ್ ಹೊಸಳ್ಳಿ  ಸೇರಿದಂತೆ ಮುಖಂಡರು, ವಾರ್ಡಿನ ಗುರು ಹಿರಿಯರು ಉಪಸ್ಥಿತರಿದ್ದರು.