ಮಾರುತಿ ಗೊಂದಿಯವರಿಂದ ಗವಿಸಿದ್ದೇಶ್ವರ ಜಾತ್ರೆಗೆ ಉಚಿತ ಬಸ್ಸಿನ ಸೇವೆ

Free bus service from Maruti Gondi to Gavisiddeshwar Jatra

ಮಾರುತಿ ಗೊಂದಿಯವರಿಂದ ಗವಿಸಿದ್ದೇಶ್ವರ ಜಾತ್ರೆಗೆ ಉಚಿತ ಬಸ್ಸಿನ ಸೇವೆ 

ಕೊಪ್ಪಳ 18: ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತಿ ಪಡೆದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಧಾರ್ಮಿಕ ಸಾಮಾಜಿಕ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂಗಮ. ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಾಡಿನ ಅನೇಕ ಭಕ್ತರು ವಿವಿಧ ವಿಶಿಷ್ಟ ಭಕ್ತಿ ಸೇವೆಗಳನ್ನು ಸಲ್ಲಿಸುವುದರ ಮೂಲಕ ಭಕ್ತಿ ಅರ​‍್ಿಸುವದು ಅಪ್ಯಾಯಮಾನ ಹಾಗೆಯೇ ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಮಾರುತಿ ಗೊಂದಿಯವರು ಉಚಿತವಾಗಿ ಬಸ್ಸಿನ ಸೇವೆಯ ಮೂಲಕ ಜಾತ್ರಾ ಸೇವೆಯಲ್ಲಿ ತೊಡಗಿದ್ದಾರೆ. 

ಕಳೆದ ಎಂಟು ವರ್ಷಗಳಿಂದ ಸೇವೆ ಮಾಡಿಕೊಂಡು ಬರುತ್ತಿರುವ ಇವರು ಈ ವರ್ಷವೂ ಕೂಡಾ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಬೆಳಗಿನಿಂದ ಸಾಯಂಕಾಲದವರೆಗೆ ಗವಿಮಠಕ್ಕೆ ಆಗಮಿಸುವ ವಿಶೇಷವಾಗಿ ವೃದ್ದರಿಗೆ,ವಿಕಲಚೇತನರಿಗೆ,ಮಕ್ಕಳಿಗೆ ಹಾಗೂ ಮಾಜಿ ಸೈನಿಕರಿಗೆ ಮತ್ತು ಭಕ್ತಾದಿಗಳಿಗೆ ಉಚಿತವಾಗಿ ಪ್ರಯಾಣ ಮಾಡುವ ಸದವಕಾಶವನ್ನು ಕಲ್ಪಿಸಿದ್ದಾರೆ.ಈ ವಾಹನವು  ಬಸಸ್ಟ್ಯಾಂಡನಿಂದ ಗಂಜ್ ವೃತ್ತದ ಮೂಲಕ ಗವಿಮಠದವರೆಗೆ ಚಲಿಸುತ್ತದೆ. ಇವರ ಸೇವೆಯು ರಥೋತ್ಸವದ ದಿನದಿಂದ ಪ್ರಾರಂಭವಾಗಿದ್ದು ಅಮಾವಾಸ್ಯೆಯ ತನಕ ಮುಂದುವರೆಯುತ್ತದೆ.ಹಾಗೆಯೇ ನಗರದ ಬಳ್ಳಾರಿ ಡೆಕೊರೆಟರ‌್ಸ ಹಾಗೂ ಕುಟುಂಬದವರ ವತಿಯಿಂದ ನಿರಂತರವಾಗಿ ನಡೆಸಿಕೊಂಡ ಬಂದ ಪದ್ದತಿಯಂತೆ ಈ ವರ್ಷವೂ ಕೂಡಾ ಪಾದಯಾತ್ರೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂರು ದಿನಗಳ ಕಾಲ ಅವರ ಅಂಗಡಿಯ ಮುಂದೆ ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಪ್ರತಿದಿನ ಬೆಳಿಗ್ಗೆ ಉಪ್ಪಿಟ್ಟು ಉಪಹಾರಮತ್ತು ಚಹಾ ಹಾಗೂ ಮಧ್ಯಾಹ್ನ ಪಲಾವ್ ಮತ್ತು ಅನ್ನ ಸಾಂಬಾರಿನ ಪ್ರಸಾದವನ್ನುವಿತರಿಸಿದ್ದಾರೆ.ಸರ್ವ ದಾನಿಗಳಿಗೆ ಪರಮ ಪೂಜ್ಯರು ಪ್ರಶಂಶಿಸಿ ಆಶೀರ್ವದಿಸಿದ್ದಾರೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.