ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಗರ್ಭಿಣಿಯರಿಗೆ ಉಚಿತ ರಕ್ತಪರೀಕ್ಷೆ ಮತ್ತು ಸ್ಕ್ಯಾನಿಂಗ್ ಸೇವೆಯ ಕಾರ್ಯಕ್ರಮ

Free blood test and scanning service program for pregnant women as part of World Health Day celebra

ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಗರ್ಭಿಣಿಯರಿಗೆ ಉಚಿತ ರಕ್ತಪರೀಕ್ಷೆ ಮತ್ತು ಸ್ಕ್ಯಾನಿಂಗ್ ಸೇವೆಯ ಕಾರ್ಯಕ್ರಮ

ಬಳ್ಳಾರಿ 05: ನಗರದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಗರ್ಭಿಣಿಯರಿಗೆ ಪೋಷಕಾಂಶಗಳ ಆಹಾರದ ಅರಿವು ಮತ್ತು ಉಡಿ ತುಂಬುವ ಹಾಗೂ ಉಚಿತ ರಕ್ತಪರೀಕ್ಷೆ ಮತ್ತು ಸ್ಕ್ಯಾನಿಂಗ್ ಸೇವೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  

ಇದೇ ವೇಳೆಯಲ್ಲಿ ಖಿಉ ವಿಠ್ಠಲ್ ಅದ್ಯಕ್ಷರು ಈಕಂಋ ,ಇವರು ಮಾತನಾಡಿ ಆರೋಗ್ಯವೇ ಮಹಾ ಭಾಗ್ಯ ಎಲ್ಲರೂ ಆರೋಗ್ಯದ ಕಾಳಜಿ ವಹಿಸಬೇಕು.. ಅದರಲ್ಲೂ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಗಮನ ಇಡಬೇಕು ಇಂಥಹ ಆರೋಗ್ಯ ಸೇವೆಗಳನ್ನು ನೀಡುವುದಕ್ಕಾಗಿನೆ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆ ಇರೋದು ಅದರ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಅದ ಆಡಿ. ರುಕ್ ಸರಬಾನು ಸ್ತ್ರೀ ರೋಗ ತಜ್ಞರು, ಗರ್ಭಿಣಿಯಾದ ಮೊದಲ ದಿನದಿಂದ ಗರ್ಭದಾರಣೆ ಆಗುವವರೆಗೆ ಏನು ಮಾಡಬೇಕು,ಏನು ಮಾಡಬಾರದು , ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು ಎನ್ನುವುದರ ಬಗ್ಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಶಾಖ ವ್ಯವಸ್ಥಾಪಕರು ಈಕಂಋ ಪ್ರಸ್ತಾವಿಕ ನುಡಿಗಳನ್ನು ನುಡಿದರು. ನಂತರ ಪಾಲ್ಗೊಂಡಂತ 100 ಗರ್ಭಿಣಿ ಬಾಣಂತಿಯರಿಗೆ ಉಡಿತುಂಬಿ ಉಚಿತ ಆರೋಗ್ಯ ತಪಾಸಣೆ ( ರಕ್ತ ಪರೀಕ್ಷೆ ಮತ್ತು ಸ್ಕಾನ್ನಿಂಗ್) ಮಾಡಲಾಯಿತು ಕಾರ್ಯಕ್ರಮದ ನಿರೂಪಣೆ ಬಸವರಾಜ ಕಾರ್ಯಕ್ರಮ ಅಧಿಕಾರಿ ಮಾಡಿ ಸ್ವಾಗತವನ್ನು ಸುಜಾತ ಪುರಾಣಿಕ್ ಅವರು ನಡೆಸಿಕೊಟ್ಟರು ಗೋಪಾಲ್ ವರ್ಮ ವಂದಿಸಿದರು ಅದೇ ರೀತಿ ಈಕಂಋ ನ ಎಲ್ಲಾ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತರು ಇತರರು  ಭಾಗವಹಿಸಿದ್ದರು.