ಜಿಲ್ಲಾಸ್ಪತ್ರೆಗೆ ಉಚಿತ ಸ್ಟ್ರೇಚಸರ್್ ವಿತರಣೆ

ಲೋಕದರ್ಶನ ವರದಿ

ಕೊಪ್ಪಳ 02: ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ನೆಹರು ಮೆಮೋರಿಯಲ್ ಸ್ಪೋಟ್ಸರ್್ ಮತ್ತು ರೀಕ್ರಿಯೇಶನ್ ಸೆಂಟರ್ ವತಿಯಿಂದ ರೋಗಿಗಳಿಗೆ ಉಪಯುಕ್ತವಾಗಲು ಉಚಿತ ಸ್ಟ್ರೇಚಸರ್್ನ್ನು ಸ್ವಾಮಿ ವಿವೇಕಾನಂದ ಶಾಲೆ ಆವರಣದ ನೆಹರು ಮೆಮೋರಿಯಲ್ ಸ್ಪೋಟ್ಸರ್್ ಕಚೇರಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ,ಜಿಲ್ಲಾ ಸರ್ಜನ್ ಡಾ.ದಾನರಡ್ಡಿ, ಡಿಎಚ್ಓ ಡಾ.ಮಾದಿನೂರು, ಡಾ.ಮಹೇಂದ್ರ ಕಿಂದ್ರಿ, ನಗರಸಭೆ ಮಾಜಿ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸನಗೌಡ ಪಾಟೀಲ್, ಎಸ್.ಕೆ.ಪಾಟೀಲ್, ಶಾಂತಣ್ಣ ಮುದಗಲ್ ಸೇರಿದಂತೆ ನೆಹರು ಮೆಮೋರಿಯಲ್ ಸ್ಪೋಟ್ಸರ್್ ಮತ್ತು ರೀಕ್ರಿಯೇಶನ್ ಸೆಂಟರ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.