ಉಚಿತ ನೇತ್ರ ತಪಾಸಣಾ ಶಿಬಿರ

ಲೋಕದರ್ಶನ ವರದಿ

ಹಾವೇರಿ 02 : ಕಣ್ಣುಗಳು ಅಮೂಲ್ಯವಾದವುಗಳು ಅವುಗಳ ಸಂರಕ್ಷಣೆ ಮಾಡುವ ಮೂಲಕ ಬದುಕನ್ನು ಬೆಳಕಾಗಿಸಿಕೊಳ್ಳಿ ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಅಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿನಸಾಬ ಬುಡಂದಿ ಹೇಳಿದರು. ಸಾರ್ವಜನಿಕ ಆಸ್ಪತ್ರೆ ಸವಣೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆ,ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗ,ತಾಲೂಕ ವೈದ್ಯಾಧಿಕಾರಿಗಳ ಕಛೇರಿ.ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಹಿರೇಮುಗದೂರಿನ ಅಮ್ಮಾ ಸಂಸ್ಥೆ(ರಿ) ಇವುಗಳ ಸಹಕಾರ, ಸಂಯುಕ್ತಾಶ್ರಮದಲ್ಲಿ ಸವಣೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

 ಎಲ್ಲ ಕೆಲಸ ಕಾರ್ಯಗಳಿಗೂ ಕಣ್ಣುಗಳ ಪಾತ್ರ ಬಹಳ ಮುಖ್ಯ.ಬದುಕಿನ ಬೆಳಕಿಗೆ ಕಣ್ಣುಗಳೇ ಆಧಾರ. ಆರೋಗ್ಯಕ್ಕಾಗಿ ಸಕರ್ಾರಗಳು ಬಹಳಷ್ಟು ಅನುಕೂಲಕರ ಸೌಲಭ್ಯ ನೀಡಲಾಗುತ್ತಿವೆ. 

  ಇಂತಹ ಸೌಲಭ್ಯ ಪಡೆಯಲು ಈ ದಿನ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಉಪಯುಕ್ತವಾಗಿದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.ಈ ಶಿಬಿರದಲ್ಲಿ ತಾಲೂಕಿನ ನೂರಾರು ಜನರು ಪಾಲ್ಗೊಂಡಿದ್ದು,ಉಚಿತ ತಪಾಸಣೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಂಡರು.

ಈ ಸಂದರ್ಭದಲ್ಲಿ ಡಾ|| ತಪ್ಪೇಶ ನಾಗ.ಶಂಕರ ಆಸ್ಪತ್ರೆಯ ಶಂಕರ ನಾಯ್ಕ.ವೆಂಕಟೇಶ ಎನ್.ಫಕ್ಕಿರೇಶ ಕಾಳಿ.ನಾಗೇಶ.ಪ್ರಭಾವತಿ.ಮೇಘಾ.ಅನಂತ ಇತರರು ಹಾಗೂ ಆಸ್ಪತ್ರೆ, ಇಲಾಖೆ ಸಂಯೋದದೊಂದಿಗೆ ಜರುಗಿತು.