ರಾಣೇಬೆನ್ನೂರ27: ಈ ಭೂಮಿಯ ಮೇಲೆ ವಾಸಿಸುವ 84 ಲಕ್ಷ ಜೀವರಾಶಿಗಳಲ್ಲಿ ವಿವೇಚನೆ ಹಾಗೂ ಮಾತನಾಡುವ ಏಕೈಕ ಜೀವಿ ಮನುಷ್ಯನಾಗಿದ್ದಾನೆ. ಎಲ್ಲ ಜೀವಿಗಳಲ್ಲಿ ಶ್ರೇಷ್ಠನಾಗಿರುವ ಮನುಷ್ಯನಿಗೆ ಅಂಗಾಂಗಗಳು ಸಹ ಅಷ್ಟೇ ಪ್ರಾಮುಖ್ಯತೆಯಾಗಿವೆ. ಇವುಗಳನ್ನು ಕಾಪಾಡಿಕೊಂಡು ಆರೋಗ್ಯಕರ ಜೀವನ ನಡೆಸಬೇಕೆಂದು ದಾನಿ ಬಸವರಾಜ ಕುರುಗೋಡಪ್ಪನವರ ಹೇಳಿದರು.
ಶನಿವಾರ ಸ್ಥಳೀಯ ಲಯನ್ಸ್ ಮತ್ತು ಲಯನೆಸ್ ಕ್ಲಬ್, ದಿ.ಬಸಮ್ಮ, ದಿ.ಶಿವಪ್ಪ ಕುರಗೋಡಪ್ಪನವರ ಹಾಗೂ ಮಕ್ಕಳು, ಬೆಂಗಳೂರಿನ ಕನರ್ಾಟಕ ಮಾರ್ವಾಡಿ ಯುಥ್ ಫೆಡರೇಷನ್ ಆಶ್ರಯದಲ್ಲಿ ಲಯನ್ಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಜೈಪುರ ಕಾಲುಗಳ ಜೋಡಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸದೃಢವಾಗಿ ಮನುಷ್ಯ ಬದುಕಲು ಅಂಗಾಂಗಳು ಅವಶ್ಯಕವಾಗಿದ್ದರೂ ಸಹ ಸ್ವಲ್ಪ ಪ್ರಮಾಣದ ಗಾಯ ಹಾಗೂ ನೋವುಗಳು ಕಂಡು ಬಂದರೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳದೇ ಬೇಜವಾಬ್ದಾರಿಯಿಂದ ತಮ್ಮ ಅಂಗಾಂಗಳಿಗೆ ತಾವೇ ಮಾರಕವಾಗಿ ಪರಿಣಮಿಸುತ್ತೀರಿ, ಇದರಿಂದಾಗಿ ಇಂತಹ ತೊಂದರೆ ಕಂಡು ಬಂದಾಗ ಕೂಡಲೇ ವೈದ್ಯರ ಬಳಿ ಸಂಪಕರ್ಿಸಿ ಸಲಹೆ ಸೂಚನೆ ಪಡೆಯಿರಿ ಎಂದರು.
ಎಂಜಿಇ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಅರಕೇರಿ ಮಾತನಾಡಿ, ಅನೇಕರಿಗೆ ಹುಟ್ಟಿನಿಂದಲೇ ಅಂಗಾಂಗಗಳು ಊನಗಳಾಗುತ್ತವೆ. ಕೆಲವು ವಂಶಪಾರಂಪರೆಯಿಂದಲೂ ಸಹ ಬರುತ್ತವೆ. ಅನೇಕ ಬಾರಿ ಅಪಘಾತ ಮತ್ತಿತರ ಸಂದರ್ಭಗಳಲ್ಲಿ ಕೈಕಾಲು ಸೇರಿದಂತೆ ಇತರ ಅಂಗಗಳು ಹಾನಿಗೊಂಡು ನಡೆಯಲು ಬಾರದಂತಹ ಪರಸ್ಥಿತಿ ಉಂಟಾಗುತ್ತದೆ. ಅದಕ್ಕಾಗಿ ಮಾನಸಿಕ ನೋವು ಬಾರದಂತೆ ಇಂತಹ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಇಂತಹ ಶಿಬಿರಗಳಲ್ಲಿ ರೋಗಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು. ಹಾಗೂ ಸಾರ್ವಜನಿಕರೂ ಸಹ ಶಿಬಿರದ ಮಹತ್ವವನ್ನು ಅರಿತು ರೋಗಿಗಳಿಗೆ ಸಹಾಯ ಸಹಾರ ಮಾಡುವುದರ ಮೂಲಕ ಮಾನವೀಯತೆ ಮೆರೆಯಬೇಕೆಂದರು. 60ಕ್ಕೂ ಅಧಿಕ ರೋಗಿಗಳಿಗೆ ಉಚಿತ ಜೈಪುರ ಕಾಲುಗಳ ಜೋಡಣೆ ಅಳತೆಯನ್ನು ತೆಗೆದುಕೊಳ್ಳಲಾಯಿತು. ಎ.28 ರಂದು ಎಲ್ಲ ರೋಗಿಗಳಿಗೂ ಉಚಿತ ಕಾಲುಗಳ ಜೋಡಣೆ ಮಾಡಲಾಗುವುದು ಎಂದರು.
ನಿವೃತ್ತ ಉಪನ್ಯಾಸಕ ಬಿ.ಬಿ. ನಂದ್ಯಾಲ, ಲಯನ್ಸ್ ಅಧ್ಯಕ್ಷ ರೇವಣಗೌಡ ಗ್ಯಾನಗೌಡ್ರ, ಲಯನೆಸ್ ಅಧ್ಯಕ್ಷ ಗೀತಾ ಕಾಕೋಳ, ಮೂಳೆಗಳ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಮುರಳಿಧರ, ಎಲ್.ಜಿ.ಶೆಟ್ರ, ಟಿ.ವೀರಣ್ಣ, ಬಸವರಾಜ ಪಾಟೀಲ, ಬಸವರಾಜ ಬಡಿಗೇರ, ಎಂ.ಎಚ್.ಪಾಟೀಲ್, ಆರ್.ವಿ ಸುರಗೊಂಡ, ಅಶೋಕ ಗಂಗನಗೌಡ್ರ, ಜಯಚಂದ್ರ, ಎಂ.ಜಿ. ಮಣ್ಣಮ್ಮನವರ, ಗಣೇಶ, ನಾಗರಾಜ, ಗುಡ್ಡಪ್ಪ, ವೆಂಕಟರಾಮ, ಗೋಪಾಲ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.