ಲೋಕದರ್ಶನ ವರದಿ
ಬೆಳಗಾವಿ 22: ಕೆಎಲ್ಎಸ್ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತೊತ್ಸವದ ಅಂಗವಾಗಿ ದಿ.21ರಂದು ವಾಯ್. ಆರ್. ಸಿ, ಎನ್.ಎಸ್.ಎಸ್. ಹಾಗೂ ಎನ್. ಸಿ. ಸಿ. ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರಕ್ಕೆ ಕೆ. ಎಲ್. ಇ ಯ ಪರಿಣಿತ ವೈದ್ಯರು ಆಗಮಿಸಿದ್ದರು. ನಮ್ಮ ಮಹಾವಿದ್ಯಲಯದ ಸುಮಾರು 90ಕ್ಕೂ ಹೆಚ್ಚು ವಿದ್ಯಾಥರ್ಿಗಳು ರಕ್ತದಾನ ಮಾಡಿದರು.
ಅಲ್ಲದೆ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಆಶ್ರಮದ ಸ್ವಾಮಿ ನವದುಗರ್ಾನಂದರು ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ ವಿದ್ಯಾಥರ್ಿಗಳು ದೈಹಿಕ ಆಕರ್ಷಣೆಗೆ ಒಳಗಾಗದೆ ಉತ್ತಮ ವ್ಯಕ್ತತ್ವವನ್ನು ಬೆಳೆಸಿಕೊಳ್ಳುವತ್ತ ಪ್ರಯತ್ನಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಎಚ್. ವೀರಾಪೂರವರು ವಹಿಸಿದ್ದರು. ಅವರು ರಕ್ತದಾನದ ಮಹತ್ವ ಹಾಗೂ ಅದರ ಪ್ರಯೋಜನಗಳ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮಕ್ಕೆ ಪ್ರೊ. ಗ್ಯಾಮಾನಾಯಿಕ ಎಚ್. ,ಡಾ.ಎಮ್.ಎಲ್. ಲಮಾಣಿ, ಪ್ರೊ. ಸರೀತಾ ಪಾಟೀಲ, ಪ್ರೊ. ಎ.ಆರ್.ನಿರಲ್ಕೇರಿ ಹಾಗೂ ಎಲ್ಲ ಉಪನ್ಯಾಸಕರು, ವಿದ್ಯಾಥರ್ಿಗಳು ಉಪಸ್ಥಿತರಿದ್ದು ಶೋಭೆಯನ್ನು ತಂದರು.