ಬೆಳಗಾವಿ ನಗರದ ಮಜಗಾಂವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕೊಣ್ಣಿನಪುರೆ ಶಸ್ತ್ರಚಿಕಿತ್ಸೆ ಶಿಬಿರ
ಬೆಳಗಾವಿ. 13: ಜೈನ ಇಂಟರ್‌ನ್ಯಾಷನಲ್ ಟ್ರೆಡ ಆರ್ಗನೈಝೇಶನ ಜಿತೋ ಸಂಸ್ಥೆಯ ವತಿಯಿಂದ ಡಿ.12 ರಂದು ಶ್ರೀಮತಿ ಸೋನಬಾಯಿ ಮಾಂಗಿಲಾಲಜಿ ಸಾಮಸುಖ ಹೆಲ್ತ ಕೇರ “ದೃಷ್ಟಿ” ಯೋಜನೆಯಡಿ ಹಾಗೂ ಕೆ.ಎಲ್.ಇ.ಪ್ರಭಾಕರ ಕೋರೆ ಆಸ್ಪತ್ರೆ ಇವರ ಸಹಯೋಗದೊಂದಿಗೆ ಬೆಳಗಾವಿ ನಗರದ ಮಜಗಾಂವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕೊಣ್ಣಿನಪುರೆ ಶಸ್ತ್ರಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಕೆ.ಎಲ್.ಇ.ಆಸ್ಪತ್ರೆಯ ನುರಿತ ನೇತ್ರ ತಜ್ಞರಿಂದ ಮಜಗಾಂವ ಗ್ರಾಮಸ್ಥರ ನೇತ್ರಗಳನ್ನು ತಪಸಾಣೆ ಮಾಡಲಾಯಿತು. ಈ ಶಿಬಿರದಲ್ಲಿ ಒಟ್ಟು 229 ಜನರ ನೇತ್ರ ಗಳನ್ನು ತಪಾಸಣೆ ಮಾಡಲಾಯಿತು, ಇದರಲ್ಲಿ 65 ಜನರಲ್ಲಿ ಕಣ್ಣಿನಲ್ಲಿ ಪೊರೆ ಕಂಡು ಬಂದಿದ್ದು, ಇವರಿಗೆ .ಕೆ.ಎಲ್.ಇ. ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲು ಕ್ರಮ ಕೈಗೊಳ್ಳಲಾಯಿತು.
ಈ ಶಿಬಿರಕ್ಕೆ ಮಜಗಾಂವ ಗ್ರಾಮಸ್ಥರ ವತಿಯಿಚಿದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಶಿಬಿರದಲ್ಲಿ ಕೆ.ಎಲ್.ಇ. ಆಸ್ಪತ್ರೆಯ ನೇತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ಬುಬನಾಳೆ ಮತ್ತು ಅವರ ತಂಡದ ವೈದ್ಯರು ಜನರ ನೇತ್ರ ತಪಾಸಣೆ ಕೈಗೊಂಡರು. ಈ ಸಂದರ್ಭದಲ್ಲಿ ಜಿತೋ ಚೇರಮನ ಹರ್ಷವರ್ಧನ ಇಂಚಲ, ಯೋಜನಾ ಮುಖ್ಯಸ್ಥ ಪ್ರವೀಣ ಸಾಮಸುಖಾ, ಕಾರ್ಯಕ್ರಮ ಸಂಯೋಜಕ ಪ್ರಮೋದ ಪಾಟೀಲ, ಡಾ.ಅಲ್ಲಮಪ್ರಭು, ಸಾಮಾಜಿಕ ಕಾರ್ಯಕರ್ತರಾದ ಸಂಜೀವ ಚೌಗುಲೆ, ದೀಪಕ ಸಾತಗೌಡಾ ಸೇರಿ ದಂತೆ ಮೊದಲಾದವರು ಉಪಸ್ಥಿತರಿದ್ದರು.