ಲೋಕದರ್ಶನ ವರದಿ
ಶಿಗ್ಗಾವಿ 09: ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಮಂಗಳೂರು ರಿಪೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಿ.ಆರ್ ಚಟುವಟಿಕೆ ವತಿಯಿಂದ ಆಯೋಜಿಸಿದ್ದ ಸರಕಾರಿ ಶಾಲೆಗಳಿಗೆ ಉಚಿತ ಡೆಸ್ಕ್ ವಿತರಣೆಯನ್ನು ಸಂಸದ ಪ್ರಲ್ಹಾದ ಜೋಶಿ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ನೇರವೇರಿಸಿದರು.
ವಿರಕ್ತಮಠದ ಸಂಗನಬಸವ ಶ್ರೀಗಳು ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ, ಉಪಾಧ್ಯಕ್ಷ ಪರಶುರಾಮ ಸೊನ್ನದ , ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುಭಾಸ ಚವ್ಹಾಣ, ಮುಖಂಡರಾದ ಗಂಗಾಧರ ಸಾತಣ್ಣವರ, ಡಾ.ಮಲ್ಲೇಶಪ್ಪ ಹರಿಜನ, ದೇವಣ್ಣ ಚಾಕಲಬ್ಬಿ, ಕರಿಯಪ್ಪ ಕಟ್ಟಿಮನಿ, ತಹಸೀಲ್ದಾರ ಶಿವಾನಂದ ರಾಣೆ, ಬಿಇಒ ಶಿವಾನಂದ ಹೆಳವರ, ಸಮನ್ವಯಾಧಿಕಾರಿ ಮಂಜುಳಾ ಚಂದ್ರಗಿರಿ, ಶಿವಾನಂದ ಮ್ಯಾಗೇರಿ, ನಿಂಗಪ್ಪ ಹರಿಜನ, ಉಪಸ್ಥಿತರಿದ್ದರು.