ಲೋಕದರ್ಶನ ವರದಿ
ಹೊನ್ನಾವರ,14:.ಲಯನ್ಸ್ ಕ್ಲಬ್ ಹೊನ್ನಾವರ ಇವರಿಂದ ಶಾರದಾಂಭಾ ಪ್ರೌಢಶಾಲೆ ಸಂಶಿಯಲ್ಲಿ ಬೃಹತ್ ಉಚಿತ ದಂತ ತಪಾಸಣೆ, ದಂತ ಚಿಕಿತ್ಸೆ ಮತ್ತು ಮಧುಮೇಹದ ಬಗ್ಗೆ ರಕ್ತ ತಪಾಸಣೆ ಜೊತೆಗೆ ಡಾ|| ವೀಣಾ ಭಟ್ ಬೆಂಗಳೂರು ಇವರಿಂದ ಆರೋಗ್ಯದ ಬಗ್ಗೆ ಅರಿವು ಮಧುಮೇಹದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಲಾಯನ್ಸ್ ಅಧ್ಯಕ್ಷರಾದ ರಾಜೇಶ ಸಾಳೆಹಿತ್ತಲ್ರವರು ಪ್ರಾಸ್ತಾವಿಕ ನುಡಿಯನ್ನು ನುಡಿದರು. ಡಾ|| ವೀಣಾ ಭಟ್ ಮಧುಮೇಹದ ಬಗ್ಗೆ ಉಪನ್ಯಾಸ ನೀಡಿದರು. ಡಾ|| ಸುಜಾತ ಪಟಗಾರ ಇವರು ದಂತದ ಮಹತ್ವವನ್ನು ಸಭೆಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ತಾಲೂಕು ಪಂಚಾಯತ ಅಧ್ಯಕ್ಷರಾದ ಉಲ್ಲಾಸ ನಾಯ್ಕ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕೆಂದು ತಿಳಿಸಿದರು.
ಖಜಾಂಚಿ ಯೋಗೇಶ ರಾಯ್ಕರ್ ಹಾಗೂ ಮುಖ್ಯಾಧ್ಯಾಪಕರು ಎನ್.ಎ. ಬಂಕಾಪುರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಡಾ|| ಬೊಸ್ಕೆಯವರು ಶಾಲಾ ಮಕ್ಕಳಿಗೆ ಉಚಿತವಾಗಿ ಪೇಸ್ಟ ಮತ್ತು ಬ್ರೆಶ್ನ್ನು ನೀಡಿದರು. ಕಾರ್ಯಕ್ರಮಕ್ಕೆ ಲಯನ್ಸ್ ಪ್ರೊಪೆಸರ್ ಸುರೇಶ ಎಸ್. ಇವರು ಸ್ವಾಗತಿಸಿದರು. ಸಹ ಶಿಕ್ಷಕರಾದ ಜಿ.ಎಸ್.ಹೆಗಡೆ ವಂದಿಸಿದರು.
ಎಂ.ಎಸ್. ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ರಾಮನಾಥ ಸಂಘ ಕುದ್ರಗಿಯವರು ಸಹಕಾರ ನೀಡಿದರು. ರಾಮನಾಥ ಸ್ವಸಹಾಯ ಸಂಘ, ಕುಂಬಾರಕೇರಿ ಕುದ್ರಿಗಿ ಮತ್ತು ಗೆಳೆಯರ ಬಳಗ ಮಾಗೋಡ ಸಹಕರಿಸಿದರು.