ಬಳ್ಳಾರಿಯಲ್ಲಿ ನ.28,29, 30 ರಂದು ನಾಲ್ಕು ಚಕ್ರ ವಾಹನಗಳ ಸಹಾಸಮಯ ಸ್ಫರ್ಧೆ
Four-wheeler rally to be held in Bellary on November 28, 29, and 30
ಬಳ್ಳಾರಿ 25: ಬಳ್ಳಾರಿಯಲ್ಲಿ ಮೊದಲ ಬಾರಿಗೆ ಕೆಎ-34 ಆಫ್ ರೋಡ್ ಚಾಲೆಂಜ್ ಸಠ್ಥೆಯ ಆಶ್ರಯದಲ್ಲಿ ನ.28, 29 ಹಾಗೂ 30 ರಂದು ಮೂರು ದಿನಗಳಕಾಲ ನಾಲ್ಕು ಚಕ್ರ ವಾಹನಗಳ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಬಳ್ಳಾರಿಯ ಕೆಎ-34 ಆಫ್ ರೋಡ್ ಚಾಲೆಂಜ್ ಸಠ್ಥೆಯ ಅಧ್ಯಕ್ಷ ವಿಂದಿಯಾ ವರ್ಮಾ ಅವರ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಜನೆಕುಂಟೆ ಪ್ರದೇಶದಲ್ಲಿ 4 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೋಡಿ ಫೈಡ್ ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳ, ಎಕ್ಸ್ಪರ್ಟ್ ಪೆಟ್ರೋಲ್, ಡೀಸೆಲ್, ಥಾರ್ 2020 ಜಿಮ್ಮಿ ಹಾಗೂ ಮಹಿಳೆಯರ ವಿಭಾಗ ಸೇರಿದೆ. ಇದು ಬಳ್ಳಾರಿಯಲ್ಲಿ ಮೊದಲ ಬಾರಿಗೆ ಆಯೋಜಿಸುತ್ತಿರುವುದು ಹೆಮ್ಮೆ ತರಿಸಿದೆ. ಮಹಾರಾಷ್ಟ್ರದ ಸತಾರಾ, ರಾಜ್ಯದ ವಿಜಯಪುರ, ಕಲಬುರ್ಗಿ, ಹಾಸನ, ನರಸಿಂಹರಾಜ ಪುರ, ಶಿವಮೊಗ್ಗ, ಬೆಂಗಳೂರು, ಮಡಿಕೇರಿ, ಸುರಪುರ, ಸೇರಿದಂತೆ ಕೇರಳ ರಾಜ್ಯ ನಾನಾ ಕಡೆಯಿಂದ ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ.
ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸಠ್ಥೆಯ ಕಾರ್ಯದರ್ಶಿ ಕೆನಿತ್ ವರ್ಮಾ ಅವರು ಮಾತನಾಡಿ, ಬಳ್ಳಾರಿಯಲ್ಲಿ ಮೊದಲ ಬಾರಿಗೆ ನಾಲ್ಕು ಚಕ್ರ ವಾಹನಗಳ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಎಲ್ಲ ಸುರಕ್ಷತೆ ಕ್ರಮಗಳು ಸೇರಿದಂತೆ ಅನುಮತಿಯನ್ನು ಪಡೆಯಲಾಗಿದೆ. ಈ ಕ್ರೀಡೆ ಸುಮಾರು 1ರಿಂದ 1.5 ಕೀ.ಮೀ. ಇರಲಿದೆ. ಕೆ.ಎ.34 ಬಳ್ಳಾರಿ ಆಫ್ ರೋಡ್ 4*4 ಚಾಲೆಂಜ್ ಸೀಸನ್ -1 ಜೀಪ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 30 ಸಾವಿರ, 1 ರನ್ನರ್ ಅಪ್ 20 ಸಾವಿರ, 2ನೇ ರನ್ನರ್ ಅಪ್ 10 ಸಾವಿರ ಬಹುಮಾನ ನೀಡಲಾಗುವುದು.
ತಾಲೂಕಿನ ಜಾನೆಕುಂಟೆ ಪ್ರದೇಶದ ಬಯಲು ಸೀಮೆಯಲ್ಲಿ ಈ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ. ನ.28 ರಂದು ನಗರದಲ್ಲಿ ಮಾಜಿ ಸಚಿವ, ಗ್ರಾಮಿಣ ಶಾಸಕ ಬಿ.ನಾಗೇಂದ್ರ ಅವರು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಚಾಲನೆ ಪರವಾನಿಗೆ ಕಡ್ಡಾಯವಾಗಿದೆ, 18 ವರ್ಷ ಮೇಲ್ಪಟ್ಟವರು ಕ್ರೀಡೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದರು. ಈ ಸಂದರ್ಭದಲ್ಲಿ ಸಠ್ಥೆಯ ಖಜಾಂಚಿ ಡಾ.ರಾಹುಲ್ ಎಂ.ಪಿ.,ಸಲಹೆಗಾರರಾದ ಸಂತೋಷ್ ಮಾರ್ಟಿನ್, ಹಿರಿಯ ಪತ್ರಕರ್ತ ಅಹಿರಾಜ್, ವಿಜಯ ಆನಂದ್, ಸಠ್ಥೆಯ ರಾಜೇಶ್, ದರ್ಶನ ಚೌದ್ರಿ, ಸಾಯಿ ಪ್ರಸಾದ್ ಆಗಮಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 