ಹಳೆ ವಿದ್ಯಾರ್ಥಿಗಳಿಂದ ಅಗಲಿದ ಗುರುಗಳು, ಸ್ನೇಹತರಿಗೆ ನಮನ
ಹೂವಿನಹಡಗಲಿ 10: ತಾಲೂಕಿನ ಹೊಳಗುಂದಿ ಗ್ರಾಮದ ಎಎಂಪಿಎಸ್ ಪ್ರೌಡ ಶಾಲೆಯ 1990- 1991 ಸಾಲಿನ ಹಳೆ ವಿದ್ಯಾರ್ಥಿಗಳು 35 ವರ್ಷಗಳ ನಂತರ ಕುಚಕು ಗೆಳೆಯರು ಸಿದ್ದೇಶ್ವರ ದೇಗುಲದಲ್ಲಿ ಭಾನುವಾರ ಎಲ್ಲರೂ ಒಂದು ಕಡೆ ಸೇರಿ ಪೂರ್ವ ಬಾವಿ ಸಭೆ ಮಾಡಲಾಯಿತು. ಸಭೆಯಲ್ಲಿ ಅಗಲಿದ ಗುರುಗಳು ಮತ್ತು ಸ್ನೇಹಿತರಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ಯು.ಎಂ.ಶಿವಯೋಗಿ.ಹೆಚ್.ವೀರೇಶ ಮಾತನಾಡಿ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಅಂದಿನಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸಬೇಕು. ನಂತರ ವಿದ್ಯಾರ್ಥಿ ಜೀವನದ ನೂರಾರು ನೆನಪುಗಳನ್ನು ಹಂಚಿಕೊಂಡರು. ಗುರುವಿನ ಶ್ರೇಷ್ಠತೆ ವಿದ್ಯಾರ್ಥಿ ಜೀವನದಲ್ಲಿ ತಿಳಿಯುವುದಕ್ಕಿಂತ ವೃತ್ತಿ ಜೀವನದ ಪಯಣದಲ್ಲಿ ತಿಳಿಯುವುದು ಹೆಚ್ಚು ಎಂದ ಅವರು ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯೆ, ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಮೇ.18ರಂದು ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಹಳೆ ವಿದ್ಯಾರ್ಥಿಗಳಾದ ಅಲ್ಲಾಭಕ್ಷಿ. ಮಂಜುನಾಥ. ಎಸ್.ಬಿ.ಸಿದ್ದಲಿಂಗಪ್ಪ. ಎಂ.ಅಶೋಕ.ಎಜಿ.ಶಿವು.ಹೆಚ್.ಅಜ್ಜಪ್ಪ.ಮಲ್ಲಿಕಾರ್ಜುನ.ಬಸವರಾಜ.ದುರುಗಪ್ಪ.ಯಮನಪ್ಪ.ವಿ.ಮಲ್ಲಿ. ದಾದ್.ಬನ್ನಿಕಲ್ಲು ಕೊಟ್ರೇಶ. ಭರಮಪ್ಪ. ಹೆಚ್.ವೀರನಗೌಡ.ವಿಜಯ.ಸಿ.ಜಿ.ನಾಗರಾಜ ಇದ್ದರು. .