98 ದಿನ ಜೈಲು ಶಿಕ್ಷೆ ಪೂರೈಸಿದ ಮಾಜಿ ಕೇಂದ್ರ ಹಣಕಾಸು ಸಚಿವ, ಪಿ. ಚಿದಂಬರಂ ವ್ಯಕ್ತಿಗತ ಹಕ್ಕುಗಳು ಎಲ್ಲಿ?. ತರೂರ್, ತಿವಾರಿ ಪ್ರಶ್ನೆ

ನವದೆಹಲಿ,  ನ  25:  ಐಎನ್ಎಕ್ಸ್  ಮೀಡಿಯಾ  ಪ್ರಕರಣದಲ್ಲಿ  ನಡೆದಿದೆ ಎನ್ನಲಾದ      ಭ್ರಷ್ಟಚಾರ ಆರೋಪ ಸಂಬಂಧ,  ಪ್ರಸ್ತುತ ತಿಹಾರ್  ಜೈಲಿನಲ್ಲಿ  ಬಂಧಿಸಿಡಲಾಗಿರುವ      ಮಾಜಿ ಕೇಂದ್ರ  ಹಣಕಾಸು ಸಚಿವ ಪಿ.  ಚಿದಂಬರಂ  ಅವರನ್ನು  ಹಿರಿಯ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಹಾಗೂ  ಮನೀಶ್  ತಿವಾರಿ  ಸೋಮವಾರ ಭೇಟಿ ಮಾಡಿದ್ದರು.

ಚಿದಂಬರಂ ಅವರ ಪುತ್ರ  ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ  ಸಹ ತರೂರ್ ಹಾಗೂ ತಿವಾರಿ ಅವರೊಂದಿಗಿದ್ದರು.

ತೀವ್ರ  ಒತ್ತಡಗಳ  ನಡುವೆಯೂ  ಪಿ  ಚಿದಂಬರಂ ಮಹಾನ್  ಘನತೆ  ಹಾಗೂ  ಸಮತೋಲನ  ಪ್ರದರ್ಶಿಸಿಸಿ, ಒಳ್ಳೆಯ  ಮನೋಭಾವನೆಗಳಿಂದ,  ಬಲಿಷ್ಠವಾಗಿರುವಂತೆ  ಕಂಡುಬಂದರು.  ಅವರು 98 ದಿನಗಳು      ಜೈಲು  ಶಿಕ್ಷೆ ಅನುಭವಿಸಿರುವುದೇ      ಒಂದು ವಿಪರ್ಯಾಸ. ನಾಳೆ ಸಂವಿಧಾನ ದಿನಾಚರಣೆ  ಚಿದಂಬರಂ  ಅವರ  ಸ್ವಾತಂತ್ರದ ಹಕ್ಕು ಎಲ್ಲಿದೆ? ನಮ್ಮ ಪ್ರಜಾಪ್ರಭುತ್ವಕ್ಕೆ ಯಾವ  ಸಂದೇಶಗಳನ್ನು  ಇದು ರವಾನಿಸುತ್ತಿದೆ ?  ಎಂದು ಶಶಿ ತರೂರ್  ಚಿದಂಬರಂ ಭೇಟಿಯ  ನಂತರ  ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ

ಜೈಲಿನ ಹೊರಗೆ,  ಸುದ್ದಿಗಾರರೊಂದಿಗೆ  ಮಾತನಾಡಿದ  ಶಶಿ ತರೂರ್, ಚಿದಂಬರಂ  ಅವರ  ಸುದೀರ್ಘ  ಬಂಧನ  ಅನಗತ್ಯ ಹಾಗೂ ನಮ್ಮ  ವ್ಯವಸ್ಥೆಯ ದುಸ್ಥಿತಿಯನ್ನು  ಪ್ರತಿಬಿಂಭಿಸುತ್ತಿದೆ ಎಂದರು.

ಚಿದಂಬರಂ  ವಿರುದ್ಧ  9.96  ಲಕ್ಷ ರೂಪಾಯಿ  ಲಂಚ ಪಡೆದಿರುವ  ದೋಷಾರೋಪದ ಬಗ್ಗೆ  ಅಣಕವಾಡಿದ  ಕಾಂಗ್ರೆಸ್  ನಾಯಕ  ಮನೀಶ್ ತಿವಾರಿ,  ಮಾಜಿ ಕೇಂದ್ರ ಹಣಕಾಸು ಸಚಿವರು  ದೇಶದ ಅತ್ಯುನ್ನತ,  ಪ್ರತಿಭಾವಂತ  ವಕೀಲರು. ಅವರಿಗೆ ಅಷ್ಟು ಪ್ರಮಾಣದ ಹಣ  ಅಗತ್ಯವಿದ್ದರೆ,  ಯಾವುದೇ      ಒಂದು ನ್ಯಾಯಾಲಯದಲ್ಲಿ  ಕಕ್ಷಿದಾರನೊಬ್ಬರ  ಪರವಾಗಿ  ಕೇವಲ 10 ಸೆಕೆಂಡ್  ಹಾಜರಾಗಿದ್ದರೆ ಈ ಹಣ  ಪಡೆಯಬಹುದಾಗಿತ್ತು ಎಂದರು.

ಚಿದಂಬರಂ ಅವರ ಜಾಮೀನು  ಆರ್ಜಿಯನ್ನು ಸುಪ್ರೀಂ  ಕೋರ್ಟ್ ಕೈಗೆತ್ತಿಕೊಳ್ಳಲಿರುವ ಅಂಶದ ಬಗ್ಗೆ  ಮಾತನಾಡಿದ  ಮನೀಶ್ ತಿವಾರಿ,  ಈಗಾಗಲೇ  ಅವರನ್ನು  98 ದಿನಗಳ ಕಾಲ  ಜೈಲಿನಲ್ಲಿರಿಸಲಾಗಿದೆ, ವಾಕ್ ಸ್ವಾತಂತ್ರ  ಪ್ರತಿಪಾಧಿಸುವ  ಪ್ರತಿಯೊಬ್ಬರೂ ಇದನ್ನು  ಜ್ಞಾಪಕದಲ್ಲಿಟ್ಟುಕೊಳ್ಳಬೇಕು.  ದ್ವನಿ  ಅಡಗಿಸುವ  ಯತ್ನಗಳ ಮೂಲಕ  ಮೋದಿ ಸರ್ಕಾರ ತನ್ನ ವೈಫಲ್ಯಗಳನ್ನು  ಮುಚ್ಚಿಕೊಳ್ಳಲು  ಸಾಧ್ಯವಿಲ್ಲ,  ಸುಪ್ರೀಂ ಕೋರ್ಟ್  ನ್ಯಾಯ ಒದಗಿಸಲಿದೆ  ಎಂಬ ಆಶಯವಿದೆ ಎಂದರು

ನಿರಂತರ  ಕಿರುಕುಳದ ನಂತರವೂ ಚಿದಂಬರಂ ಅವರ  ಸಮತೋಲನ, ಘನತೆ ಹಾಗೂ ಧೈರ್ಯ  ತಮಗೆ ಅಚ್ಚರಿ ಮೂಡಿಸಿದೆ      ತಿವಾರಿ ನುಡಿದರು.

ನಾಳೆ  ಸಂವಿಧಾನ  ದಿನ  ಸಂವಿಧಾನದ ಮೂಲ  ತತ್ವ  ವ್ಯಕ್ತಿಗತ ಸ್ವಾತಂತ್ರ  ರಕ್ಷಿಸುವುದಾಗಿದೆ.  ನ್ಯಾಯಾಲಯಗಳು ಸಂವಿಧಾನದ  ಈ  ಮೂಲತತ್ವವನ್ನು ಪರಿಗಣಿಸಲಿವೆ  ಎಂಬ ಆಶಯ ತಮ್ಮದಾಗಿದೆ ಎಂದು ನುಡಿದರು.

ಇದಕ್ಕೂಮುನ್ನ,  ಹಲವು  ದಿನಗಳ  ಹಿಂದೆ  ಕಾಂಗ್ರೆಸ್ ಅಧ್ಯಕ್ಷೆ  ಸೋನಿಯಾ ಗಾಂಧಿ  ತಿಹಾರ್ ಜೈಲಿಗೆ  ತೆರಳಿ  ಚಿದಂಬರಂ ಅವರನ್ನು ಭೇಟಿ ಮಾಡಿದ್ದರು

ಮೊದಲು ಸಿಬಿಐ,  ನಂತರ ಜಾರಿ ನಿರ್ದೇಶನಾಲಯ ಬಂಧನದ ನಂತರ  ಚಿದಂಬರಂ ಅವರನ್ನು  ಕಳೆದ ಮೂರು ತಿಂಗಳಿಗೂ  ಹೆಚ್ಚಿನ  ಕಾಲ  ಜೈಲಿನಲ್ಲಿರಿಸಲಾಗಿದೆ.