ಹುಣಸೂರು, ಡಿ 9- ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆಯತ್ತ ಸಾಗಿದ್ದರೂ , ಹುಣಸೂರಿನಲ್ಲಿ ಮಾತ್ರ ಮಾಜಿ ಸಚಿವ ವಿಶ್ವನಾಥ್ ಸೋಲು ಬಹುತೇಕ ಖಚಿತವಾದಂತಿದೆ.
ಆರಂಭದಿಂದಲೂ ವಿಶ್ವನಾಥ್ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ನ ಮಂಜುನಾಥ್ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.ಇನ್ನು ಕೆಲವೇ ಸುತ್ತುಗಳು ಮಾತ್ರ ಬಾಕಿಯಿದ್ದು, ಮಂಜುನಾಥ್ 23 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.