ಕಾಂಗ್ರೇಸ್ ಸರ್ಕಾರ ಶಿಘ್ರವೇ ಮನೆಗೆ ಕಳಿಸುತ್ತಾರೆ ಮಾಜಿ ಶಾಸಕ ವಿರುಪಾಕ್ಷಪ್ಪ

Former MLA Virupakshappa will send the Congress government home soon

ಕಾಂಗ್ರೇಸ್ ಸರ್ಕಾರ ಶಿಘ್ರವೇ ಮನೆಗೆ ಕಳಿಸುತ್ತಾರೆ ಮಾಜಿ ಶಾಸಕ ವಿರುಪಾಕ್ಷಪ್ಪ  

 ಬ್ಯಾಡಗಿ  12: ಬೆಳಗಾವಿ: ‘ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್‌ ಮಾಡಿರುವುದು ಖಂಡನೀಯ. ಸರ್ಕಾರ ತನ್ನ ಹಿಟ್ಲರ್ ಧೋರಣೆ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದೆ ಇದರಿಂದ ನಮ್ಮ ಸಮುದಾಯ ರೋಚ್ಚಿಗೆ ಎಂದರೆ ಶಿಘ್ರವೇ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಮನೆಗೆ ಕಳಿಸುವ ಶಕ್ತಿ ನಮ್ಮಲ್ಲಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.ಇಂದು ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೆತೃತ್ವ ವಹಿಸಿ ಮಾತನಾಡಿದರು.ಶಿಗ್ಗಾಂವಿಯಲ್ಲಿ 2 ಮಿಸಲಾತಿ ಕುರಿತು ಸಿ ಎಂ ಮನೆ ಎದುರು ಪ್ರತಿಭಟನೆ ಮಾಡಿದಾಗ ಯಾವುದೇ ಲಾಠಿ ಚಾರ್ಜ್‌ ಮಾಡಿಸಿಲ್ಲ ಆದರೆ 10 ಲಕ್ಷ ಸಮಾಜದವರು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಿದಾಗ ನಮ್ಮೂಂದಿಗೆ ಕೈ ಜೋಡಿಸಿದ್ದ ಲಕ್ಷ್ಮಿ ಹೆಬ್ಬಾಳಕರ ಹಾಗೂ ವಿಜಯಾನಂದ ಕಾಶಪ್ಪನವರ ಹಾಗೂ ಹಲವು ಶಾಸಕ ಮಿತ್ರರು ನಮ್ಮ ಜೊತೆಗೆ ಹೋರಾಟ ಮಾಡಿದವರು ನಾವು ಅಧಿಕಾರಕ್ಕೆ ಬಂದ 2 ದಿನದಲ್ಲಿ 2ಎ ಮಿಸಲಾತಿ ಕೊಡುತ್ತೆ ವೆ ಎಂದಿದ್ದರು.  

ಅಧಿಕಾರಕ್ಕೆ ಭದ್ರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ವರ್ಷದಿಂದ ಟುವೆ ಮೀಸಲಾತಿ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದಿರುವುದಿಲ್ಲ ಈ ವಿಷಯ ಕರೋಲಿನ್ ದಕ್ಕೆ ತರಲಿಲ್ಲದ್ದಕ್ಕೆ ಕಳೆದ ಬೆಳಗಾವ್ ಲೋಕಸಭೆ ಚುನಾವಣೆಯಲ್ಲಿ ಪದ್ಯಮಸಾಲಿ ಸಮಾಜದ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು. ಕಳೆದ ಬೊಮ್ಮಾಯಿ ಅವರ ಸರ್ಕಾರದಲ್ಲಿ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳ ಬಡವ ವಿದ್ಯಾರ್ಥಿಗಳಿಗೆ ರೈತರ ಮಕ್ಕಳಿಗೆ ಕೂಲಿ ಕೆಲಸ ಮಾಡುವವರಿಗೆ ಹಣ ಬಿಡುಗಡೆ ಮಾಡುವ ಕೆಲಸವನ್ನು ಮಾಡಿದ್ದರು. ಈಗ ಸಿದ್ದರಾಮಯ್ಯ ಸರ್ಕಾರವು ಕಿತ್ತುಹೋಗಿವ ಕೆಲಸ ಮಾಡಿದೆ ಎಂದು ಆರೋಪಿಸಿದರು ಶೀಘ್ರವೇ ನಮ್ಮ ಸ್ವಾಮೀಜಿಗಳಿಗೆ ಕ್ಷಮೆ ಕೇಳಿ ನಮ್ಮ ಸ್ವಬ್ಬಾಯಕ್ಕೆ ಮೀಸಲಾತಿಯನ್ನು ನೀಡಬೇಕು ಇಲ್ಲವಾದರೆ ಇನ್ನೂ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಹೇಳಿದರು. ಈ ವೇಳೆ ಸಮಾಜದ ಮುಖಂಡ ಶಂಕರಗೌಡ ಪಾಟೀಲ್ ಮಾತನಾಡಿ ‘ಸಿ.ಎಂ ಸಿದ್ದರಾಮಯ್ಯ ಅವರು, ತಮ್ಮ ಹಿಟ್ಲರ್ ಆಡಳಿತದಲ್ಲಿ ರಾಜ್ಯದ ಜನತೆ ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ಮಾಡಲೂ ಅವಕಾಶವಿಲ್ಲವೇ ಬಾಯಲ್ಲಿ ಬಸವಣ್ಣನ ವಚನ ಹೇಳಿ, ಕೈಯಲ್ಲಿ ಲಾಠಿ ಪ್ರಹಾರ ಮಾಡುವ ತಮ್ಮದು ಯಾವ ಸೀಮೆ ಸಿದ್ಧಾಂತ  ನಿಮ್ಮದು ಪ್ರತಿಭಟನಾಕಾರರಿಗೆ ರಕ್ತ ಬರುವಂತೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರಲ್ಲ, ಪೊಲೀಸರು ಯಾರ ಅಣತಿಯಂತೆ ಈ ದುಸ್ಸಾಹಸ ಮಾಡಿದ್ದಾರೆ.‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಜನರ ಹಕ್ಕು. ಜನರ ಸಮಸ್ಯೆ ಆಲಿಸಿ ಅವರಿಗೆ ಸಮಾಧಾನ ಹೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ರೀತಿ ಮುತ್ಸದ್ಧಿತನ ತೋರುವುದು ಬಿಟ್ಟು, ಏಕಾಏಕಿ ಲಾಠಿ ಚಾರ್ಚ್‌ ಮಾಡುವ ಮೂಲಕ ಒಂದು ಸಮುದಾಯವನ್ನು ಪ್ರಚೋದನೆ ಮಾಡಿ ರೊಚ್ಚಿಗೇಳಿಸುವುದು ಯಾವ ಸೀಮೆ ಆಡಳಿತ? ಯಾವ ಸೀಮೆ ನಾಯಕತ್ವ?’ ಎಂದೂ ಕೇಳಿದ್ದರು ಕೂಡಲೇ ನಮ್ಮ ಸ್ವಾಮೀಜಿಗಳಿಗೆ ಕ್ಷಮೆ ಕೆಳಿ ನಮ್ಮ ಸಮುದಾಯಕ್ಕೆ 2 ಎಂ ಮೀಸಲಾತಿ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ತಿರಕಪ್ಪ ಮರಬಸಣ್ಣನವರ, ಶಹರ ಘಟಕದ ಅಧ್ಯಕ್ಷ ಬಸವರಾಜ ಕಡೆಕೊಪ್ಪ, ಜಯದೇವ್ ಶಿರೂರ, ಶೇಖಣ್ಣ ಗಡಾದ, ಎಂ ಸಿ ಯರಗಲ್, ವೀರಭದ್ರ​‍್ಪ ಗೊಡಚಿ,  ಯುವ ಮುಖಂಡ ಶಿವಯೋಗಿ ಗಡಾದ, ವಿಜಯ್ ಬಳ್ಳಾರಿ, ಶೇಖರಗೌಡ ಗೌಡ, ಸುರೇಶ್ ಯತ್ನಳ್ಳಿ, ಶಂಕ್ರು ಅಕ್ಕಿ, ರಾಜಶೇಖರಗೌಡ ಹೊಮ್ಮರಡಿ, ದಯಾನಂದ ಉಳ್ಳಾಗಡ್ಡಿ, ಸಿದ್ದಲಿಂಗಪ್ಪ ಬಳ್ಳಾರಿ, ನಾಗನಗೌಡ ಕೊಲ್ಲಾಪುರ, ಮಾಲತೇಶ ಪೂಜಾರ, ಜ್ಯೋತಿ ಕುದರಾಳ, ದ್ರಾಕ್ಷಾಣಿ ಹರಮಗಟ್ಟಿ, ಗಿರಿಜವ್ವ ಪಟ್ಟಣಶೆಟ್ಟಿ, ಎಂ ಆರ್ ಭದ್ರಗೌಡ, ಬಸವರಾಜ ಬಳ್ಳಾರಿ, ಮಂಜುನಾಥ್ ಶಿವಕುಮಾರ ಪಾಟೀಲ. ಸೇರಿದಂತೆ ಸಮಾಜದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು,