ಕಾಗವಾಡ 02: ಉಗಾರ ಪುರಸಭೆ ಪೌರಾಡಳಿತ ಕಾಮರ್ಿಕರಿಗೆ ಕಳೆದ 11 ತಿಂಗಳಗಳಿಂದ ಸಂಬಳ ನೀಡಿಲ್ಲಾ. ಈ ಕಾಮರ್ಿಕರತ್ತ ಯಾವುದೇ ಸರಕಾರಿ ಅಧಿಕಾರಿಗಳು, ಚುನಾಯಿತ ಸದಸ್ಯರು ಗಮನ ಹರಿಸಿಲ್ಲಾ. ಸಮಸ್ಯೆಯಲ್ಲಿದ್ದ 18 ಕಾಮರ್ಿಕರಿಗೆ ನಾನು ತಲಾ 5 ಸಾವಿರ ರೂ.ಸಹಾಯವಾಗಿ ನೀಡಿದ್ದೇನೆ. ದೀಪಾವಳಿ ಹಬ್ಬ ಆಚರಿಸಲು ಈ ಕಾಮರ್ಿಕರತ್ತ ಸರಕಾರ ಕಣ್ಣುತೆರೆಯಿಲಿ ಎಂದು ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಸರಕಾರದ ನೀಷ್ಕ್ರಿಯತೆ ಬಗ್ಗೆ ಖಾರವಾಗಿ ಮಾತನಾಡಿದರು.
ಗುರುವಾರರಂದು ಉಗಾರ ಖುರ್ದದಲ್ಲಿ ರಾಜ್ಯೋತ್ಸವ ನಿಮಿತ್ಯ ಸಮಾರಂಭಕ್ಕೆ ಆಗಮಿಸಿದ ಮಾಜಿ ಶಾಸಕ ರಾಜು ಕಾಗೆಯವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸರಕಾರ ಇಲ್ಲದಂತಾಗಿದೆ. ಪೌರಾಡಳಿತ ಕಾಮರ್ಿಕರು ದಿನನಿತ್ಯ ಪಟ್ಟಣ ಸ್ವಚ್ಛಗೊಳಿಸುತ್ತಾರೆ. ಅಲ್ಪ ವೇತನದ ಸೇವೆಯಲ್ಲಿರುವ ಇವರಿಗೆ ತಿಂಗಳದ ಸಂಬಳ ಇಲ್ಲದೆ ಇದ್ದಿದ್ದರಿಂದ ದೀಪಾವಳಿ ಹಬ್ಬ ಹೇಗೆ ಆಚರಿಸುವುದು? ಎಂದು ನನ್ನನ್ನು ವಿಚಾರಿಸಿದಾಗ 18 ಕಾಮರ್ಿಕರಿಗೆ ಸಹಾಯ ನೀಡಿದ್ದೇನೆ. ಈ ಕೆಲಸ ಆಡಳಿತದಲ್ಲಿದ್ದವರು ಮಾಡಬೇಕಾಗಿತ್ತು ಎಂದರು.
ಕಾಮರ್ಿಕರಿಗೆ ಹಣ ನೀಡುವ ಶಾಸಕರು ಎಲ್ಲಿದ್ದಾರೆ? :
ಉಗಾರ ಪುರಸಭೆಯಲ್ಲಿ ಕಾಮರ್ಿಕರ ಸಭೆ ಕರೆದು ಸಮಸ್ಯೆಯಲ್ಲಿದ್ದ ಕಾಮರ್ಿಕರಿಗೆ ಸರಕಾರ ನೀಡದೆ ಇದ್ದರೆ ನಾನು ಹಣ ನೀಡುತ್ತೇನೆ ಎಂದು ಹೇಳಿರುವ ಇಂದಿನ ಶಾಸಕರು ದೀಪಾವಳಿ ಹಬ್ಬ ಬಂದರೂ ಹಣ ನೀಡಿಲ್ಲಾ. ತಾವು ನೀಡಿರುವ ಹಣ ಎಲ್ಲಿದೆ? ಎಂದು ಮಾಜಿ ಶಾಸಕ ರಾಜು ಕಾಗೆ ಪ್ರಶ್ನಿಸಿದರು.
ನಾನು ಮಂಜೂರುಗೊಳಿಸಿದ ಕಾಮಗಾರಿಗೆ ನಿಮ್ಮ ಪೂಜೆ:
ಈಗಿನ ಶಾಸಕರು ನನ್ನ ಅವಧಿಯಲ್ಲಿ ಮಂಜೂರುಗೊಳಿಸಿದ ಕೆಂಪವಾಡ ರಸ್ತೆ, ಕೃಷ್ಣಾ ಕಿತ್ತುರ ಗ್ರಾಮದ ಸುವರ್ಣ ಗ್ರಾಮಯೋಜನೆ, ಸಕ್ಕರೆ ಕಾಖರ್ಾನೆಯ ಸೇಸ್ ಅನುದಾನದ ರಸ್ತೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಸರಕಾರ ಅವರದೆ ಇದೆ, ಮೊದಲು ಯೋಜನೆಗಳು ಮಂಜೂರುಗೊಳಿಸಿರಿ. ಆಗ ಪೂಜೆ ಸಲ್ಲಿಸಿರಿ ಎಂದರು.
ಪೌರಾಡಳಿತ ಕಾಮರ್ಿಕರು ನಿರಾಧಾರ:
ರಾಜ್ಯದಲ್ಲಿಯ ಪಟ್ಟಣ ಪಂಚಾಯತಿ ಹಾಗೂ ಪುರಸಭೆಯಲ್ಲಿ ಪೌರಾಡಳಿತ ಕಾಮರ್ಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯ ಮಾಡಲು ಸರಕಾರ ಪ್ರಯತ್ನಿಸುತ್ತಿದೆ. ಆದರೆ, ಕಾಮರ್ಿಕರು ನಮ್ಮನ್ನು ಸೇವೆಯಲ್ಲಿ ಕಾಯಂಗೊಳಿಸಿ ಸರಕಾರದ ನೌಕರರೆಂದು ಪರಿಗಣಿಸಿರಿ ಎಂದು ಕೇಳುತ್ತಿದ್ದಾರೆ. 11 ತಿಂಗಳು ಗತಿಸಿದರೂ ಕಾಮರ್ಿಕರಿಗೆ ಸಂಬಳು ಇಲ್ಲಾ, ಇತ್ತಾ ಸರಕಾರಿ ಸೇವೆಯಲ್ಲಿಯು ಇಲ್ಲಾ. ಈಗ ನಿರಾಧಾರರಾಗಿದ್ದಾರೆ.ಬಡಕುಟುಂಬಗಳಿಗೆ ಸರಕಾರಕೂಡಲೆ ಸಹಾಯ ನೀಡುವದು ಅವಶ್ಯಕತೆಯಿದೆ ಎಂದು ಉಗಾರ ಪುರಸಭೆ ಸದಸ್ಯ ಸಿದ್ದಗೌಡಾ ಕಾಗೆ ಹೇಳಿದರು.
ಉಗಾರದ ಪುರಸಭೆಯಲ್ಲಿ 18 ಕಾಮರ್ಿಕರಿದ್ದು, ಅವರಿಗೆ ಕಳೆದ 11 ತಿಂಗಳುಗಳಿಂದ ಸಂಬಳ ನೀಡಿಲ್ಲಾ. ಈ ಸಮಸ್ಯೆ ರಾಜ್ಯಾದ್ಯಂತಯಿದ್ದು, ಇದರ ಬಗ್ಗೆ ಪೌರಾಡಳಿತ ಇಲಾಖೆ ಸಚಿವ ರಮೇಶ ಜಾರಕಿಹೋಳಿ ಹಾಗೂ ರಾಜ್ಯದ ಅಧಿಕಾರಿಗಳು ಸಮಸ್ಯೆ ಬಗೆಹರಿಸಲಿದ್ದಾರೆ. ಆದರೆ, ಕಾಮರ್ಿಕರಿಗೆ ತೊಂದರೆಯಾಗುತ್ತಿದ್ದು, ನಾವು ಸಹಾಯ ಮಾಡುತ್ತಿದ್ದೇವೆ ಎಂದು ಪುರಸಭೆ ಅಧಿಕಾರಿ ಕಮಲವ್ವಾ ಭಾಗೋಜಿ ಹೇಳಿದರು.