ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅನಾರೋಗ್ಯ

Kumaraswamy

ಬೆಂಗಳೂರು,‌ ಡಿ‌‌ 4-ಮಾಜಿ ಮುಖ್ಯಮಂತ್ರಿ‌ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಅನಾರೋಗ್ಯವುಂಟಾಗಿದೆ.

ಹವಾಮಾನ  ವೈಪರೀತ್ಯದಿಂದ ಹಾಗೂ ಚುನಾವಣಾ ಪ್ರಚಾರಗಳಲ್ಲಿ ಸತತ ತೊಡಗಿಸಿಕೊಂಡಿದ್ದರಿಂದ ಜ್ವರ,  ನೆಗಡಿ ಕೆಮ್ಮು ಉಂಟಾಗಿದೆ. ಕಳೆದ‌ ಮೂರು ದಿನಗಳ‌ ಹಿಂದೆಯೇ ಚಿಕ್ಕಬಳ್ಳಾಪುರ ಪ್ರಚಾರದಲ್ಲಿ  ಭಾಗಿಯಾಗಿದ್ದಾಗಲೇ ಗಂಟಲು ಕೆರೆತ ಹಾಗೂ ಶೀತವುಂಟಾಗಿತ್ತು. ವಿಶ್ರಾಂತಿರಹಿತ‌ ಸುತ್ತಾಟ,  ಭಾಷಣದಿಂದ ಜ್ವರ ಹೆಚ್ಚಾಗಿದ್ದು, ಜಯದೇವ ಆಸ್ಪತ್ರೆಯಲ್ಲಿ ವೈದ್ಯರಿಂದ ಬುಧವಾರ  ತಪಾಸಣೆಗೊಳಗಾದರು. ಸುಮಾರು ಅರ್ಧಗಂಟೆ  ಕುಮಾರಸ್ವಾಮಿ ಅವರನ್ನು ಪರಿಶೀಲಿಸಿದ ವೈದ್ಯರು ನಾಲ್ಕು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ವೈದ್ಯಕೀಯ ತಪಾಸಣೆ ಬಳಿಕ ಅವರು ತಮ್ಮ  ಜೆ.ಪಿ‌ ನಗರದ ನಿವಾಸಕ್ಕೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ