ಪರವಾನಿಗೆ ಇಲ್ಲದ ಓಷಧ ಅಂಗಡಿಗಳನ್ನು ರದ್ದ ಮಾಡಲು ಒತ್ತಾಯ

Forced to abolish unlicensed drug shops

ಪರವಾನಿಗೆ ಇಲ್ಲದ ಓಷಧ ಅಂಗಡಿಗಳನ್ನು ರದ್ದ ಮಾಡಲು ಒತ್ತಾಯ  

ಗಂಗಾವತಿ 15: ನಗರದಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ ಮಾಫೀಯಾ ಬಗ್ಗೆ ಈ ಹಿಂದೆ ಹಲವು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ ಮತ್ತು ದೃಶ್ಯ ಮಾಧ್ಯಮಗಳಲ್ಲಿಯೂ ಬಿತ್ತರವಾಗಿವೆ. ಈ ಕಾರಣಕ್ಕಾಗಿ ಬಳ್ಳಾರಿ ವಿಭಾಗದ ಉಪ ಓಷಧ ನಿಯಂತ್ರಕರ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಯಾದಗಿರಿ ವೃತ್ತಗಳ ಸಹಾಯಕ ಓಷಧ ನಿಯಂತ್ರಕರನ್ನೊಳಗೊಂಡ ಅಧಿಕಾರಿಗಳ ತಂಡ ಗಂಗಾವತಿ ನಗರದ ಕೆಲವು ಓಷಧ ಮಾರಾಟ ಮಳಿಗೆಗಳ ಮೇಲೆ ಧೀಡೀರ ದಾಳಿ ಮಾಡಿ, ಪರಿಕ್ಷಾರ್ತವಾಗಿ ಮಂಪರು ಬರುವ ಓಷಧಗಳನ್ನು ಖರೀದಿ ಮಾಡಿದ್ದರು. 

ಇಂತಹ ಓಷಧಗಳನ್ನು ತಜ್ಞ ವೈದ್ಯರ ಸಲಹಾ ಚೀಟಿಯಿಲ್ಲದೆ ಮಾರಾಟ ಮಾಡಿದ್ದಕ್ಕಾಗಿ ಒಟ್ಟು ಹನ್ನೊಂದು ಓಷಧ ಅಂಗಡಿಗಳ ಪರವಾನಗೆಗಳನ್ನು ಕೊಪ್ಪಳ ವೃತ್ತದ ಸಹಾಯಕ ಓಷಧ ನಿಯಂತ್ರಕರು ಕೆಲ ದಿನಗಳ ಕಾಲ ಅಮಾನತ್ತಿನಲ್ಲಿ ಇರಿಸಿದ್ದರು. ಅದರಂತೆ ಬಸ್ ಸ್ಟ್ಯಾಂಡ್ ರಸ್ತೆಯ, ನೀಲಕಂಠೇಶ್ವರ ವೃತ್ತದಲ್ಲಿರುವ ಅಪೋಲೋ ಫಾರ್ಮಸಿಯ ಪರವಾನಿಗೆಗಳನ್ನು ನವೆಂಬರ 18ರಿಂದ 21-11-2024 ರವರೆಗೂ ಅಮಾನತ್ತಿನಲ್ಲಿ ಇರಿಸಿದ್ದರು. ಆದರೆ ಎಲ್ಲಾ ಖಾಸಗಿ ಓಷಧ ವ್ಯಾಪಾರಿಗಳು ಅಧಿಕಾರಿಗಳ ಆದೇಶದ ಅನ್ವಯ ಅಂಗಡಿಗಳನ್ನು ಮುಚ್ಚಿದ್ದರು.ಆದರೆ ಅಪೋಲೋ ಸಂಸ್ಥೆ ಈ ಅವಧಿಯಲ್ಲಿ ಅದೇಶ ಉಲ್ಲಂಘಿಸಿ, ವ್ಯಾಪಾರ ನಡೆಸಿದ್ದು ಕಂಡು ಬಂದಿದೆ. ನವೆಂಬರ 18 ರಂದು ಮತ್ತು 19-11-2024 ರಂದು ಈ ಫಾರ್ಮಸಿಯಲ್ಲಿ ವಹಿವಾಟು ಎಂದಿನಂತೆ ನಡೆದಿರುವುದನ್ನು ಕಂಡು ಓರ್ವರು ದಿ.19 ರಂದು ಫೋಟೋ ತೆಗೆದಿದ್ದಾರೆ. ಇಂತಹ ಆದೇಶ ಉಲ್ಲಂಘನೆಗಾಗಿ ಈ ಫಾರ್ಮಸಿಯ ಪರವಾನಿಗೆಯನ್ನು ರದ್ದು ಮಾಡಬೇಕೆಂದು ಹಲವಾರು ಓಷಧ ವ್ಯಾಪಾರಿಗಳು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.