ಲೋಕದರ್ಶನ ವರದಿ
ಮಹಾಲಿಂಗಪುರ 17: ಒತ್ತಾಯ ಪೂರ್ವಕವಾಗಿ ಬಾಲ್ಯ ವಿವಾಹ ಮಾಡಿಸುವ ಸಂದರ್ಭದಲ್ಲಿ ದಾಳಿ ನಡೆಸಿ ಬಾಲಕಿಯನ್ನು ವಶ ಪಡೆದು ಸಾಂತ್ವನ ಕೇಂದ್ರಕ್ಕೆ ಸೇರಿಸಿದ ಘಟನೆ ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿ ನಡೆದಿದೆ.
ಸ್ಥಳೀಯ ಹುಲಕುಂದ ಓಣಿಯ ಅಪ್ರಾಪ್ತ ವಯಸ್ಸಿನ (17 ವರ್ಷದ) ಸ್ವಾತಿ ಸದಾಶಿವ ನಾವಿ ಎಂಬ ಬಾಲಕಿಯನ್ನು ಬಲವಂತವಾಗಿ ಬಾಲ್ಯ ವಿವಾಹಕ್ಕೆ ಒಳಪಡಿಸುವಾಗ ಅನಾಮಿಕರು ನೀಡಿದ ದೂರಿನನ್ವಯ ಕ್ರಮ ಜರುಗಿಸಲಾಯಿತು. ಬಾಲ್ಯ ವಿವಾಹದ ಒತ್ತಾಯಕ್ಕೊಳಗಾದ ಒಳಗಾದ ಬಾಲಕಿಯನ್ನು ಜಮಖಂಡಿಯ ಸಾಂತ್ವನ ಕೇಂದ್ರ ಬಾಲಮಕ್ಕಳ ಸಂರಕ್ಷಣೆ ವಿಭಾಗಕ್ಕೆ ಒಪ್ಪಿಸಲಾಯಿತು..
ಪೋಸ್ಕೋ ಕಾಯ್ದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ಮಹಿಳಾ ಪೇದೆ ರೂಪಾ ರಾಚನ್ನವರ ಹಾಗೂ ಎಎಸೈ ಕೆ.ಬಿ.ಮಾಂಗ ಅವರು ಪುರಸಭೆ ಆರೋಗ್ಯ ವಿಭಾಗದ ತನಿಖಾಧಿಕಾರಿ ಇಫರ್ಾನ್ ಝಾರೇ, ಮಹಾಲಿಂಗಪುರ ಗ್ರಾಮ ಲೆಕ್ಕಾಧಿಕಾರಿ ಎಸ್.ಎಂ.ಕೆಂದೂರ ಕಾಯರ್ಾಚರಣೆಯಲ್ಲಿದ್ದರು.