ಹಿಂದೂಗಳ ಪರವಾಗಿ ಮಾತನಾಡಿದವರಿಗೆ ಮುಸ್ಲಿಂ ವಿರೋಧಿ ಪಟ್ಟ : ಸೂಲಿಬೆಲೆ

ಲೋಕದರ್ಶನ ವರದಿ

ಬೆಳಗಾವಿ 15: ಹಿಂದೂಗಳ ಪರವಾಗಿ ಮಾತನಾಡಿದವರಿಗೆ ಮುಸ್ಲಿಂ ವಿರೋಧಿ ಎನ್ನುವ ಪಟ್ಟ ಕಟ್ಟಲಾಗುತ್ತಿದೆ. ಆದರೆ, ಲಿಂಗಾಯತ ಸಂಘ ಕಟ್ಟಿಕೊಂಡವರು, ಲಿಂಗಾಯತ ಧರ್ಮ ಪರವಾಗಿ ಮಾತನಾಡುವವರನ್ನು ಬ್ರಾಹ್ಮಣ ವಿರೋಧಿ ಎಂದು ಹೇಳುವುದಿಲ್ಲ ಎಂದು ಜಾಗೋ ಭಾರತ್ನ ಚಕ್ರವತರ್ಿ ಸೂಲಿಬೆಲೆ ಹೇಳಿದರು.

 ದಿ.13 ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಾಡ ಹಬ್ಬ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ನೆರೆ ರಾಷ್ಟ್ರಗಳ ವಲಸೆಯಿಂದ ಆಗುವ ಪರಿಣಾಮಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.

 ಹಿಂದೂ ಮತದಾರರನ್ನು ಜಾತಿ ಮೇಲೆ ಅಳೆಯಲಾಗುತ್ತದೆ. ಮುಸ್ಲಿಂರನ್ನು ಧರ್ಮದ ಮೇಲೆ ಗುರುತಿಸಲಾಗುತ್ತದೆ. ಈ ಮನಸ್ಥಿತಿ ನೂರಾರು ವರ್ಷಗಳ ಗುಲಾಮಿತನದಿಂದ ಬಂದ ಗಿಳಿಪಾಠ' ಎಂದರು.

`ಬಾಂಗ್ಲಾದೇಶ, ಪಾಕಿಸ್ಥಾನ, ಮಯನ್ಮಾರ ದೇಶಗಳಿಂದ ಭಾರತಕ್ಕೆ ಅಕ್ರಮ ವಲಸಿಗರು ಬರುತ್ತಿದ್ದಾರೆ. ಅವರೆಲ್ಲರೂ ಪಡಿತರ ಚೀಟಿ, ಆಧಾರ್ ಕಾಡರ್್ಗಳನ್ನು ಕೂಡ ಪಡೆದಕೊಂಡಿದ್ದಾರೆ. ಓಟ್ ಬ್ಯಾಂಕ್ ಮತ್ತು ಇಲ್ಲಿನ ರಾಜಕೀಯ ವ್ಯವಸ್ಥೆ ಅವರಿಗೆ ಆಶ್ರಯ ಕೊಡುತ್ತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದಂಥ ದೇಶಕ್ಕೆ ತುಂಬಾ ಅಪಾಯಕಾರಿ' ಎಂದರು.

`ಭಾರತದ ರಾಜರು ಯುದ್ಧ ಮಾಡಿದರೆ, ಅದು ಅವರಿಬ್ಬರ ಮಧ್ಯೆ ಮಾತ್ರ ಇರುತ್ತಿತ್ತು. ಜನಸಾಮಾನ್ಯರು ಅದರಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಭಾರತಕ್ಕೆ ಮುಸ್ಲಿಂರು ಬಂದ ಮೇಲೆ ನಾಯಕರು ಕಿತ್ತಾಡುವುದಕ್ಕಿಂತ ಮೊದಲೇ ಜನಸಾಮಾನ್ಯರು ಬಡಿದಾಡಿಕೊಳ್ಳುತ್ತಿದ್ದಾರೆ. ಬ್ರಿಟೀಷರು ಹುಟ್ಟಿಸಿದ ಈ ಧ್ವೇಷ ಈಗಲೂ ಇದೆ. ರಾಜಕಾರಣಿಗಳು ಅದನ್ನು ಪೋಷಿಸುತ್ತಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಸಂಸದ ಸುರೇಶ ಅಂಗಡಿ ಮಾತನಾಡಿದ ಅವರು ಮಹಷರ್ಿ ವಾಲ್ಮಿಕಿ ಕಾಲದಿಂದಲೇ ಭಾರತವನ್ನು ಕೇಸರಿಕರಣ ಮಾಡುವ ಕೆಲಸ ನಡೆದಿದೆ. ಕೇಸರಿಕರಣವೇ ತಮ್ಮ ಗುರಿ ಎಂದು  ಹೇಳಿದರು.

`ದೇಶದ ಪರಂಪರೆ ಅರಿಯುವಲ್ಲಿ ಎಡವಿದ್ದೇವೆ. ಭಾರತದಲ್ಲಿ ಕೇಸರಿಕರಣ ಮಾಡದೆ ಬೇರೆ ಎಲ್ಲಿ ಮಾಡಲು ಸಾಧ್ಯವಿದೆ. ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ ವಿದ್ಯಾಥರ್ಿಗಳನ್ನು ದಾರಿ ತಪ್ಪಿಸುತ್ತಿದ್ದೇವೆ. ಕೇಸರಿಕರಣ ಎನ್ನುವುದು ರಾಷ್ಟ್ರಾಭಿಮಾನ, ಸ್ವಾಭಿಮಾನ, ಭಾರತದ ಗೌರವ. ಇದು ನನ್ನ ಹೋರಾಟ' ಎಂದರು.

`ಜೆಎನ್ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ)ದಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿವೆ. ಅರ್ಬನ್ ನಕ್ಸಲೈಟ್ಗಳ ಮೂಲಕ ದೇಶವನ್ನು ಛಿದ್ರ ಮಾಡುವ ತಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ದೇಶದಲ್ಲಿ ಬಾಂಗ್ಲಾದೇಶಿಯರು, ರೋಹಿಂಗ್ಯಾಗಳು ಅಕ್ರಮವಾಗಿ ಸೇರಿಸಿಕೊಂಡಿದ್ದಾರೆ. ಅವರಿಂದಲೂ ದೇಶವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ' ಎಂದರು.

`ದತ್ತು ಪುತ್ರ ನಿಷೇಧ ಪದ್ಧತಿ ವಿರುದ್ಧ ಬ್ರಿಟೀಷರಿಗೆ ಸೆಡ್ಡು ಹೊಡೆದ ಕಿತ್ತೂರು ರಾಣಿ ಚನ್ನಮ್ಮನ ಪರವಾಗಿ ಖಡ್ಗ ಎತ್ತಿದ್ದು, ಲಿಂಗಾಯರಲ್ಲ. ಕುರುಬ ಸಮಾಜದ ಸಂಗೊಳ್ಳಿ ರಾಯಣ್ಣ. ಅವರು ಚನ್ನಮ್ಮನನ್ನು `ಅವ್ವ' ಎಂದು ಕರೆಯುತ್ತಿದ್ದರು. ಆಗ ಜಾತಿ ಎನ್ನುವುದು ಇರಲಿಲ್ಲ ಎಂದರು. ತಮ್ಮ 15 ವರ್ಷಗಳ ಸಾಧನೆ ಹೇಳಿಕೊಳ್ಳುವಾಗ `ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿಮರ್ಿಸಿದ್ದು ನಾನೇ. ಮಹದಾಯಿ ಯೋಜನೆಯನ್ನೂ ಆದಷ್ಟು ಬೇಗ ಮಾಡುತ್ತೇನೆ' ಎಂದರು.

 ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಡಾ. ಎಚ್ ರಾಜಶೆಖರ, ಪ್ರಧಾನ ಕಾರ್ಯದಶರ್ಿಸಿ ಕೆ ಜೋರಾಪುರ, ಮೋಹನ ಗುಂಡ್ಲೂರ, ಅರವಿಂದ ಪಾಟೀಲ್, ವಿಜಯೇಂದ್ರ ಶಮರ್ಾ, ಅರವಿಂದ ಪಾಟೀಲ,  ಮತ್ತಿತರು ಹಾಜರಿದ್ದರು.