ಲೋಕದರ್ಶನ ವರದಿ
ಶಿರಹಟ್ಟಿ 28: ಕರ್ನಾಟಕ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕಾಳಜಿ ವಹಿಸಿ ಅವರ ಸಮಯ ಪರಿಪಾಲನೆ ಹಾಗೂ ಮಕ್ಕಳ ಮಾನಸಿಕ ಸದೃಡತೆಯನ್ನು ಹೆಚ್ಚಿಸುವ ಸಲುವಾಗಿ ವಿದ್ಯಾಥರ್ಿಗಳಿಗೆ ಸೈಕಲ್ಗಳನ್ನು ಉಚಿತವಾಗಿ ನೀಡುತ್ತಿದ್ದು ಇವುಗಳ ಸದ್ಬಳಕೆ ಮಾಡೊಳ್ಳಿ ಎಂದು ಶಾಸಕ ರಾಮಣ್ಣ ಲಮಾಣಿ ಕರೆ ನೀಡಿದರು.
ಅವರು ತಾಲೂಕಿನ ಯಳವತ್ತಿ ಗ್ರಾಮದ ಜಗದ್ಗುರು ಫಕೀರ ಚನ್ನವೀರೇಶ್ವರ ಪ್ರೌಢ ಶಾಲೆಯಲ್ಲಿ ಸನ್ 2019-20 ನೇ ಸಾಲಿನ 8 ನೇ ತರಗತಿ ವಿದ್ಯಾರ್ಥಿ / ವಿದ್ಯಾಥರ್ಿನಿಯರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಕರ್ಾರವು ಕೊಡಲ್ಪಟ್ಟ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಿ , ಹಾಜರಾತಿಯನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಿ ಶಾಲಾ ಕೌಂಪೌಂಡ್ ಪೂರ್ಣಗೊಳಿಸುವುದಾಗಿ, ಶಾಲಾ ಆವರಣದಲ್ಲಿ ಸಿಹಿ ನೀರಿನ ಘಟಕವನ್ನು ಸ್ಥಾಪಿಸುವುದಾಗಿ & ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವನ್ನು ಮಂಜೂರ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಎಚ್ ಬೆಳಗಟ್ಟಿ ಮುಖ್ಯೋಪಾಧ್ಯಾಯರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ದೇವಕ್ಕ ಲಮಾಣಿ, ತಾಲೂಕಾ ಪಂಚಾಯತ ಸದಸ್ಯೆ ಹುಸೇನಬಿ ಅತ್ತಿಗೇರಿ, ಯಳವತ್ತಿ ಗ್ರಾ.ಪಂ. ಅಧ್ಯಕ್ಷೆ ಜನ್ನತ್ ಬಿ ಗಮ್ಮಣ್ಣವರ ಸರ್ವ ಸದಸ್ಯರು ಹಾಗೂ ಜ.ಫ.ವಿ. ಸಮಿತಿಯ ಕಾರ್ಯದಶರ್ಿ ಗುಂಡಪ್ಪಗೌಡ್ರ ಪಾಟೀಲ, ಶಾಲಾ ಸುಧಾರಣ ಸಮಿತಿಯ ಚೇರಮನ್ ಮತ್ತು ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಂ. ಜಿ. ಉಪ್ಪಿನ, ಸ್ವಾಗತ ಭಾಷಣವನ್ನು ಆರ್ ಆರ್ ಅಯ್ಯನಗೌಡ್ರ ಮಾಡಿದರು. ಪ್ರಾರ್ಥನೆಯನ್ನು 10 ನೇ ತರಗತಿಯ ವಿದ್ಯಾರ್ಥಿ ಗಳು ಹಾಡಿದರು, ಬಿ.ಟಿ.ದಾಸಕನಕಪ್ಪ ಗುರುಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ವಂದನಾರ್ಪನೆಯನ್ನು ವಿ.ಸಿ.ಹರ್ತೆ ನೇರವೇರಿಸಿದರು.