ಧಾರವಾಡ 03: ಮಹಾತ್ಮಾ ಗಾಂಧೀಜಿಯವರನ್ನು ನಾನು ಭೆಟ್ಟಿಯಾದ ಕ್ಷಣಗಳು ನನ್ನ ಜೀವನದ ಮಹತ್ವದ ಕ್ಷಣಗಳು. ಗಾಂಧೀಜಿಯವರು ಮಾತೃಸ್ವಭಾವದವರು. ಬಾಲಕನಾಗಿದ್ದ ನನಗೆ ಭೆಟ್ಟಿಗೆ ಅವಕಾಶ ನೀಡಿ, ನನ್ನೊಡನೆ ಮಾತನಾಡಿ, ನನ್ನ ಬೆನ್ನನ್ನು ಸವರಿ, ತಟ್ಟಿ ಪ್ರೇರೆಪಣೆಯ ಮಾತನಾಡಿದ ಸಂದರ್ಭ ನನ್ನ ಮನಸಿನಲ್ಲಿ ಇಂದಿಗೂ ಹಚ್ಚಹಸಿರಾಗಿ ಉಳಿದಿದೆ. ಅವರು ನಿನ್ನ ಜೀವನದುದ್ದಕ್ಕೂ ಸಾಧ್ಯವಿದ್ದಷ್ಟು ಒಳ್ಳೆಯ ಕೆಲಸ ಮಾಡು, ದೇಶಸೇವೆ ಮಾಡು, ದೀನದುರ್ಬಲರ ಬೆನ್ನಿಗೆ ನಿಲ್ಲು ಮತ್ತು ಜನತೆಗೆ ಉಪಯೋಗವಾಗುವ ಸಾಮಾಜಿಕ ಕಾರ್ಯಗಳನ್ನು ಅಂಜದೇ ಅಳುಕದೆ ಮಾಡುತ್ತಾ ಹೋಗು ಎಂದು ನನಗೆ ಉಪದೇಶಿಸಿದಂತೆ ನಾನು ಇಂದಿಗೂ ಕೂಡ ನನ್ನ ಕೈಲಾದಷ್ಟು ಈ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಇದೇ ಕಾರಣಕ್ಕೆ ನಾನು ಕನ್ನಡ ನಾಡಿಗೆ ಏನನ್ನಾದರೂ ವಿಶೇಷವಾದದ್ದನ್ನು ಮಾಡಬೇಕೆಂಬ ಹೆಬ್ಬಯಕೆಯಿಂದ, ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ, ಇಡೀ ರಾಜ್ಯವನ್ನು ಐದು ಬಾರಿ ಸುತ್ತಿ, ಕನ್ನಡಿಗರ ಸಮಸ್ಯೆಗಳನ್ನು ಸರಕಾರದ ಮುಂದೆ ಇಟ್ಟಿರುತ್ತೇನೆ, ಈಗಲೂ ನಾನು ಕನ್ನಡ ನಾಡು-ನುಡಿ-ನೆಲ-ಜಲ-ಗಡಿಗಳಿಗಾಗಿ ಅವಿರತವಾಗಿ ನನ್ನ ಹೋರಾಟವನ್ನು ಮುಂದುವರೆಸಿಕೊಂಡು ಹೋಗಲು ಸಿದ್ಧನಿದ್ದೇನೆ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೇಳಿದರು.
ಕನರ್ಾಟಕ ವಿದ್ಯಾವರ್ಧಕ ಸಂಘವು 63ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ 15 ದಿನಗಳ ಕಾಲ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ 14 ನೇ ದಿನ `ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಹಿರಿಯ ಸದಸ್ಯರಿಗೆ ಗೌರವ ಸನ್ಮಾನ' ಮತ್ತು ನಾಟಕ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ನಾಡು-ನುಡಿಯ ಸೇವೆಗಾಗಿ ಯುವಜನರು ಇನ್ನೂ ಹೆಚ್ಚಿನ ಸೇವೆ ಮಾಡಲು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಸಂಘದ ಸದಸ್ಯರಾದ ಡಾ. ರಾಜನ್ ದೇಶಪಾಂಡೆ, ಡಾ. ಬಿ. ಸಿ. ರಾಯ್ ಪ್ರಶಸ್ತಿ ಪುರಸ್ಕೃತರು, ಡಾ. ಆದಿತ್ಯ ಆನಂದ ಪಾಂಡುರಂಗಿ, ಡಾ. ಎಸ್.ಎಸ್. ಜಯರಾಮ ಪ್ರಶಸ್ತಿ ಪುರಸ್ಕೃತರು, ಮಧು ದೇಸಾಯಿ, ಕನರ್ಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು, ಬಸವರಾಜ ಬೆಂಗೇರಿ, ಶಿವಕುಮಾರ ಪ್ರಶಸ್ತಿ ಪುರಸ್ಕೃತರು ಇವರಿಗೆ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರು ಎಂದು ಗೌರವ ಸನ್ಮಾನ ಮಾಡಲಾಯಿತು.
ಸಂಘದ ಹಿರಿಯ ಸದಸ್ಯರಾದ ಪ್ರೊ. ವಿಜಯಕುಮಾರ ಗಿಡ್ನನವರ, ರಾಮಚಂದ್ರ ಪಾಟೀಲ, ಡಾ. ಶಿವಾನಂದ ಗುಬ್ಬಣ್ಣವರರನ್ನು, ಧಾರವಾಡದ ರಂಗಕಮರ್ಿ ಜನಮೆಚ್ಚಿದ ಶಿಕ್ಷಕ ಹನುಮಂತಪ್ಪ ತಳವಾರ ಇವರಿಗೆ ರಂಗಕಲಾ ಸನ್ಮಾನ ಹಾಗೂ ಹಿರಿಯ ನ್ಯಾಯವಾದಿಗಳಾದ ಆರ್. ಎಸ್. ಚಂದನಗೌಡರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ, ಗೌರವ ಉಪಾಧ್ಯಕ್ಷ ಬಿ.ಎಲ್. ಪಾಟೀಲ, ಸೇತುರಾಮ ಹುನಗುಂದ, ಡಾ. ಇಸಬೆಲ್ಲಾ ಝೇವಿಯರ್, ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ವೇದಿಕೆ ಮೇಲಿದ್ದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಜ ಪಾಟೀಲ ಸ್ವಾಗತಿಸಿದರು. ಪ್ರಫುಲ್ಲಾ ನಾಯಕ ನಿರ್ವಹಿಸಿದರು, ಶಿವಾನಂದ ಭಾವಿಕಟ್ಟಿ ವಂದಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ, ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವೇಶ್ವರಿ ಹಿರೇಮಠ, ಶಾಂತೇಶ ಗಾಮನಗಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಸುವರ್ಣ ಸುರಕೋಡ ನಾಡಿಗೀತೆ ಹಾಡಿದರು.
ನಂತರ ಎಚ್. ಬಿ. ಪರೀಟ್ ರಚನೆ, ಹೆಲನ್ ಮೈಸೂರು ನಿದರ್ೇಶನದ `ಮರಾಠಿ ಹೆಂಡತಿ' ಹಾಸ್ಯ ನಾಟಕವನ್ನು ಬೆಂಗಳೂರಿನ ರಂಗಬದುಕು ಟ್ರಸ್ಟ್ ತಂಡದವರು ಸೊಗಸಾಗಿ ಪ್ರಸ್ತುತಪಡಿಸಿ ನೆರೆದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರೊ. ರಾಯ್ಕರ, ಡಾ. ಎಸ್.ಟಿ. ನಂದಿಬೇವೂರ ದಂಪತಿಗಳು, ಡಾ. ಶಿವಪ್ರಸಾದ, ಪಾಂಡುರಂಗ ಪಾಟೀಲ, ಡಾ. ಆನಂದ ಪಾಂಡುರಂಗಿ, ಎಸ್.ಬಿ. ಗುತ್ತಲ, ಬಸವಲಿಂಗಯ್ಯ ಹಿರೇಮಠ, ಲಕ್ಷ್ಮಣ ಪುರದ, ಜಯಶ್ರೀ ಗವಳಿ, ವಾಯ್. ಸಿ. ಬಿಜಾಪುರ ಶಿವಯೋಗಿ ಹಂಚಿನಾಳ, ವೀರಯ್ಯ ಪತ್ರಿಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.