ಲೋಕದರ್ಶನ ವರದಿ
ಕೊಪ್ಪಳ 10: ಕೊಪ್ಪಳ ನಗರದಲ್ಲಿ ಜಾನ್ಹವಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಕನೂರ, ಬಡ್ರ್ಸ ಕೊಪ್ಪಳ ಇಂಟರ್ನೆಟ್ ಸಾಥಿಗಳ ಟೀಮ್ ಕೊಪ್ಪಳ, ಧ್ವನಿ ಸ್ವಯಂ ಸೇವಾ ಸಂಸ್ಥೆ, ಸೇವಾ ಸಂಸ್ಥೆ ಕೊಪ್ಪಳ ಇವರುಗಳ ಸಹಯೋಗದಲ್ಲಿ ಪ್ರವಾಹ ಪೀಡಿತ ನೆರೆ ಸಂತ್ರಸ್ಥರಿಗೆ ಸಿರಿ ಧಾನ್ಯಗಳು ಮತ್ತು ದಿನ ಬಳಕೆ ವಸ್ತುಗಳನ್ನು ಸಂಗ್ರಹಮಾಡಿ ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ಸಿಎಸ್ಸಿ ಇ ಗವರನ್ನಸ್ ಸವರ್ಿಸ್ ಇಂಡಿಯಾ ಲಿಮೀಟೆಡ್ ಇವರ ಮೂಲಕ ನೆರೆ ಸಂತ್ರಸ್ಥರಿಗೆ ಕಳಿಸಿಕೊಡಲಾಯಿತು. ಈ ಒಂದು ಕಾರ್ಯಕದಲ್ಲಿ ವಿದ್ಯಾರ್ಥಿಗಳು, ಸಂಸ್ಥೆಯ ಸದಸ್ಯರುಗಳು, ಇಂಟರನೆಟ್ ಸಾಥಿ ಬಳಗ ಜೊತೆಯಾಗಿ ನಿಂತು ಸಹಕರಿಸಿದ್ದು ಹೆಮ್ಮೆಯ ವಿಷಯವಾಗಿದೆ.