ಭುವನೇಶ್ವರ, ಮೇ 6- ಫೋನಿ ಚಂಡಮಾರುತದಿಂದ ತೀವ್ರವಾಗಿ ನಲುಗಿರುವ ಒಡಿಶಾ ರಾಜ್ಯಕ್ಕೆ 1, 000 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಿಸಿರುವ ಪ್ರಧಾನಿ ನರೇಂದ್ರಮೋದಿ, ಶೀಘ್ರದಲ್ಲಿಯೇ ಕೇಂದ್ರದ ತಂಡವೊಂದು ರಾಜ್ಯಕ್ಕೆ ಆಗಮಿಸಿ ಒಟ್ಟಾರೆ ಪರಿಸ್ಥಿತಿಯನ್ನು ಪರಾಮರ್ಶಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.
ಪೋನಿ ಚಂಡಮಾರುತದಿಂದ ಉಂಟಾಗುವ ಭಾರಿ ಪ್ರಮಾಣದ ಹಾನಿಯನ್ನು ತಡೆಯಲು ರಾಜ್ಯ ಸಕರ್ಾರ ಕೈಗೊಂಡ ಮುನ್ನೆಚ್ಚರಿಕೆ ಹಾಗೂ ಪೂರ್ವ ಸಿದ್ಧತೆಗಾಗಿ ಪ್ರಧಾನಿ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರನ್ನು ವಿಶೇಷವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯಸರ್ಕಾರ ರದಿಂದಿಗೆ ಸಂಹವನ ಉತ್ತಮಮಟ್ಟದಲ್ಲಿತ್ತು. ತಾವು ಕೂಡಾ ರಾಜ್ಯದ ಪರಿಸ್ಥಿತಿಯ ಮೇಲೆ ಸತತ ನಿಗಾ ಇರಿಸಿದ್ದಾಗಿ, ಸಕರ್ಾರದ ಪ್ರತಿಯೊಂದು ಸೂಚನೆಯನ್ನು ಒಡಿಶಾ ಜನರು ಕಟ್ಟುನಿಟ್ಟಾಗಿ ಪಾಲಿಸಿರುವುದು ಅಭಿನಂದನಾರ್ಹ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಒಡಿಶಾದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರ ನಡುವಣ ಮೊದಲ ಭೇಟಿ ಇದಾಗಿದೆ. ಕಳೆದ 43 ವರ್ಷಗಳಲ್ಲಿ ಮೊದಲ ಬಾರಿಗೆ ಸಂಭವಿಸಿರುವ ಅಪರೂಪದಲ್ಲಿ ಅಪರೂಪದ ಬೇಸಿಗೆ ಫೋನಿ ಚಂಡಮಾರುತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದ್ದು. ವಿದ್ಯುತ್, ದೂರಸಂಪರ್ಕ ಹಾಗೂ ಕುಡಿಯುವ ನೀರು ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಚಂಡಮಾರುತದಿಂದ ನಲುಗಿರುವ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನುಪರಮರ್ಷಿಸಲು ಸಲು ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಭುವನೇಶ್ವರ ತಲುಪಿದರು. ಪುರಿ, ಖಾರ್ದ , ಕಟಕ್, ಜಗತ್ ಸಿಂಗ ಪುರ್, ಜೈಪುರ್, ಕೇಂದ್ರಪಾರಾ, ಭದ್ರಕ್ ಹಾಗೂ ಬಾಲ್ ಸೋರ್ ಜಿಲ್ಲೆಗಳಲ್ಲಿ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್, ಕೇಂದ್ರ ಧಮರ್ೆಂದ್ರ ಪ್ರಧಾನ್ ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿ ಪರಿಶೀಲಿಸಿದರು. ವಿಮಾನ ನಿಲ್ದಾಣದಲ್ಲಿ ಅವರು, ರಾಜ್ಯಸರ್ಕಾರದ ಅಧಿಕಾರಿಗಳೊಂದಿಗೆ ಪರಿಹಾರ ಹಾಗೂ ಪುನರ್ ನಿಮರ್ಾಣ ಕಾರ್ಯಗಳ ಪ್ರಗತಿಯ ಬಗ್ಗೆ ಪರಾಮಶರ್ೆ ನಡೆಸಿದರು. ಇಂಟರ್ ನೆಟ್ ಕಡಿತಗೊಂಡಿರುವ ಕಾರಣ ಬ್ಯಾಂಕಿಂಗ್ ಸೇವೆ ಸಂಪೂರ್ಣ ಆಯೋಮಯ ಸ್ಥಿತಿ ತಲುಪಿದೆ. ಎಲ್ಲ ಎಟಿಎಂಗಳು ಬಂದ್ ಆಗಿವೆ ಫೋನಿ ಚಂಡಮಾರುತದಿಂದ ಕರಾವಳಿ ಪ್ರದೇಶ ಭಾಗಗಳು ನಲುಗಿದ್ದು, ಸುಮಾರು 1 ಕೋಟಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸಕರ್ಾರ 10 ಸಾವಿರ ಗ್ರಾಮಗಳು ಹಾಗೂ 52 ಪಟ್ಟಣ ಪ್ರದೇಶಗಳಲ್ಲಿ ವ್ಯಾಪಕ ಪರಿಹಾರ ಹಾಗೂ ಪುನರ್ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿದೆ ಚಂಡಮಾರುತದಿಂದ ನಾಶವಾಗಿರುವ ಮನೆಗಳನ್ನು ವಸತಿ ಯೋಜನೆಯಡಿ ನಿಮರ್ಿಸಿಕೊಡಲಾಗುವುದು. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿ ಹಾಗೂ ಜಾನುವಾರು, ಮಿನುಗಾರಿಕೆ ಸಂಪನ್ಮೂಲದ ನಷ್ಟವನ್ನು ಅಂದಾಜು ಮಾಡಿ ಅದರಂತೆ ಪರಿಹಾರ ಕಲ್ಪಿಸಲಾಗುವುದು. ಪರಿಹಾರ ಹಾಗೂ ಪುನರ್ ನಿಮರ್ಾಣ ಕಾರ್ಯಗಳು ಪೂರ್ಣಗೊಂಡ ನಂತರ ಯುದ್ಧೋಪಾದಿಯಲ್ಲಿ ಅರಣ್ಯ ಬೆಳಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.