17 ರಿಂದ ಸಿರಿಧಾನ್ಯಗಳ ಆಹಾರ ಮೇಳ

ಲೋಕದರ್ಶನ ವರದಿ

ವಿಜಯಪುರ 14: ಸಿರಿಧಾನ್ಯಗಳ ಮಹತ್ವ ತಿಳಿಸುವ ದೃಷ್ಟಿಯಿಂದ ವಿಜಯಪುರದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 17 ರಿಂದ ಎರಡು ದಿನಗಳ ಕಾಲ ನಗರದ ದಬರ್ಾರ ಹೈಸ್ಕೂಲ್ ಹಿಂಭಾಗದಲ್ಲಿರುವ ಪ್ರಗತಿ ಮಂಗಲ ಕಾಯರ್ಾಲಯದಲ್ಲಿ ಸಿರಿಧಾನ್ಯಗಳ ಆಹಾರ ಮೇಳ ಹಾಗೂ ಪ್ರದರ್ಶನ ನಡೆಯಲಿದೆ.

ಬುಧವಾರ 14ರಂದು  ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿದರ್ೇಶಕ ವಿ.ಶ್ರೀನಿವಾಸ, ಸಿರಿಧಾನ್ಯಗಳು ಆರೋಗ್ಯ ವರ್ಧಕ ಸಾಧನಗಳಾಗಿವೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.

ಪ್ರದರ್ಶನ ಮಳಿಗೆಯನ್ನು ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಉದ್ಘಾಟಿಸಲಿದ್ದಾರೆ, ಜಿ.ಪಂ. ಅಧ್ಯಕ್ಷೆ ನೀಲಮ್ಮ ಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ. 

ಸಿರಿ ಧಾನ್ಯಗಳು ಆರೋಗ್ಯ ಸಿರಿಯನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ದೇಹಕ್ಕೆ ಅವಶ್ಯಕವಿರುವ ಪೋಷಕಾಂಶಗಳನ್ನು ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಪ್ರದರ್ಶನ ಮೇಳದಲ್ಲಿ ಸಾವೆ, ಊದಲು, ಕೊರಲೆ, ಸಜ್ಜೆ, ಬರಗು, ರಾಗಿ, ಸಜ್ಜೆ ಮೊದಲಾದ ಸಿರಿಧಾನ್ಯಗಳ ವಿವಿಧ ತಳಿಗಳ ಪ್ರದರ್ಶನ ನಡೆಯಲಿದೆ. ಸಿರಿಧಾನ್ಯಗಳ ತಿಂಡಿ ತಿನಿಸುಗಳ ತಯಾರಿಕೆಯ ಪ್ರಾತ್ಯಕ್ಷಿತೆ ಸಹ ನಡೆಯಲಿದೆ. 

ಕಾಶೀಬಾಯಿ ಖ್ಯಾಡಗಿ, ಸುಧಾಕರ ವಿ.ಎಸ್. ಸೇರಿದಂತೆ ಹಲವಾರು ಸಂಪನ್ಮೂಲ ವ್ಯಕ್ತಿಗಳು ಸಿರಿಧಾನ್ಯಗಳ ಮಹತ್ವದ ಬಗ್ಗೆ ಉಪನ್ಯಾಸ ಮಂಡಿಸಲಿದ್ದಾರೆ, ಅಷ್ಟೇ ಅಲ್ಲದೇ ಸಿರಿಧಾನ್ಯಗಳ ಸೇವನೆಯಿಂದ ಯಾವ ಪ್ರಯೋಜನ, ಆರೋಗ್ಯ ವೃದ್ಧಿಯ ಎಂಬ ವಿಷಯದ ಕುರಿತಾಗಿಯೂ ಉಪಯುಕ್ತ ಮಾಹಿತಿ ನೀಡಲಿದ್ದಾರೆ  ಎಂದು ವಿವರಿಸಿದರು.