ಒಳ್ಳೆಯ ಸಂಘಗಳ ಅನುಸರಣೆ ಮಾಡಿ : ನಿಂಗಪ್ಪ ಸುಣಗಾರ

Follow good associations : Ningappa Sunagara

ಒಳ್ಳೆಯ ಸಂಘಗಳ ಅನುಸರಣೆ ಮಾಡಿ : ನಿಂಗಪ್ಪ ಸುಣಗಾರ

ಶಿಗ್ಗಾವಿ  16: ಒಳ್ಳೆಯ ಸಂಘಗಳ ಅನುಸರಣೆ ಮಾಡಿ ಕೆಟ್ಟ ಸಂಘದ ಸಹವಾಸ ಬಿಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ ಸುಣ್ಣಗಾರ ಕಿವಿ ಮಾತು ಹೇಳಿದರು.ತಾಲೂಕಿನ ಶಿಶುವಿನಹಾಳ ಮಠದಲ್ಲಿ ಹುಲಗೂರ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಒಂದಾಗಿ ಬಾಳಬೇಕು ನಮ್ಮಂತೆ ಇತರರನ್ನು ಬದುಕಲು ಬೀಡಬೇಕು ಹಾಗೂ ನಮ್ಮ ಮಕ್ಕಳು ಹೆತ್ತವರಿಗೆ ರತ್ನವಾಗುವಂತೆ ಬೆಳಸಬೇಕು ಎಂದು ಮಾರ್ಮಿಕವಾಗಿ ಹೇಳಿದರು.  ಮ. ನಿ. ಪ್ರ ಅಭಿನವ ಬಸವಣ್ಣಜ್ಜ ದಿವ್ಯ ಸಾನಿಧ್ಯವಹಿಸಿ ಆರ್ಶಿವದಿಸಿ ವಿಶ್ವ ಗುರುವಿನ ದೇಶದಲ್ಲಿ ನಾವೆಲ್ಲರೂ ಭೂಮಿತಾಯಿಯನ್ನು ಪೂಜಿಸಿದರೇ ಆ ತಾಯಿ ನಮ್ಮನ್ನು ರಕ್ಷಿಸುತ್ತಾಳೆ ಎಂದರು. ಹುಲಗೂರ ಠಾಣೆ ಪೋಲಿಸ ಅಧಿಕಾರಿ ಎಸ್‌.ಎನ್‌. ವಿಠಣ್ಣನವರ ಕಾರ್ಯಕ್ರಮ ಉದ್ಘಾಟಿಸಿದರು.ಅಧ್ಯಕ್ಷತೆ ಚನ್ನಬಸಪ್ಪ.ಬೆಟ್ಟದೂರವಹಿಸಿದ್ದರುಹಾಗೂ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು ಪ್ರಾಸ್ತಾವಿಕವಾಗಿ ಹಾಗೂ ಎಲ್‌. ಎಸ್‌. ಗುರುವಾಯ್ಯನ ಮಾತನಾಡಿದರು.ಈ ಸಂದರ್ಭದಲ್ಲಿ ಯೋಜನಾಧಿಕಾರಿ ಉಮಾ ಹಾಗೂ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಶಿಶುವಿನಾಳ ಮಠದ ಕಮಿಟಿ ಸದಸ್ಯರು ಹಾಗೂ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿ ಸದಸ್ಯರು, ಒಕ್ಕೂಟ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು