ಜನಪದ ಸಾಹಿತ್ಯದ ಸಂಸ್ಕಾರ ಮಾನವನಷ್ಟೇ ಪ್ರಾಚೀನ: ಸಿದ್ದು ಸವದಿ

ಲೋಕದರ್ಶನ ವರದಿ

ಮಹಾಲಿಂಗಪುರ: ಕನರ್ಾಟಕ ಜಾನಪದ ಪರಿಷತ್ತು, ಬೆಂಗಳೂರು,ಜಿಲ್ಲಾ ಘಟಕ ಬಾಗಲಕೋಟೆ,ತಾಲೂಕು ಘಟಕ ರಬಕವಿ-ಬನಹಟ್ಟಿ,ಗ್ರಾಮ ಪಂಚಾಯತ ಢವಳೇಶ್ವರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಂಘ,ಢವಳೇಶ್ವರ ಇವರ ಸಂಯುಕ್ತಾಶ್ರಯದಲ್ಲಿ ಕನರ್ಾಟಕ ಜಾನಪದ ಪರಿಷತ್ತು,ಮಹಾಲಿಂಗಪುರ ವಲಯ ಘಟಕ ಢವಳೇಶ್ವರದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಜಾಪ ಮಹಾಲಿಂಗಪುರ ವಲಯ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಡೊಳ್ಳು ಬಾರಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಾ

ಜನಪದ ಸಾಹಿತ್ಯ ಮಾನವನ ಹುಟ್ಟಿನಿಂದಲೇ ಬಂದಿದೆ. ನಮ್ಮ ಪೂರ್ವಜರು ಕೂತಲ್ಲಿ, ನಿಂತಲ್ಲಿ ಕುಟ್ಟ್ಟುವಾಗ, ಬೀಸುವಾಗ, ತೂಗುವಾಗ ಅವರ ಖುಷಿ,ಸಂತೋಷ,ನಲಿವು, ನೋವುಗಳ ಮಧ್ಯೆ ಜಾನಪದ ಹುಟ್ಟಿಕೊಂಡಿದೆ. ಇದು ಇಂದು ನಿನ್ನೆಯದಲ್ಲ.ಇದರ ಕಾಲವನ್ನು ನಿಖರವಾಗಿ ಹೇಳಲಾಗದು. ನಮ್ಮ ಜನಪದ ಸಾಹಿತ್ಯ ಮಾನವನಷ್ಟೇ ಪ್ರಾಚೀನ. ನಮ್ಮ ಸಂಸ್ಕೃತಿಯ ಪ್ರತೀಕ, ಈ ಮಣ್ಣಿನ ಸಂಸ್ಕೃತಿ. ನಮ್ಮ ಜಾನಪದ ಸಾಹಿತ್ಯದ ಸಂಸ್ಕಾರ ಸರ್ವಶ್ರೇಷ್ಠ. ಸಾಹಿತಿಗಳು,ಕಲಾವಿದರು ಈ ದೇಶದ ಗೌರವ. ಆದರೆ ಇಂದು ಸಿನೆಮಾ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ಬದುಕಿನ ಮರ್ಮ ಹಾಗೂ ನಮ್ಮ ಧರ್ಮದ ಮಹತ್ವ ಸಾರುವ ನಮ್ಮ ಕನ್ನಡ ಜಾನಪದ ಸಂಸ್ಕೃತಿ ಮುಳುಗುವ ಹಂತ ತಲುಪಿರುವುದು ಶೋಚನೀಯ ಎಂದು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿದರು.

ಶಿಷ್ಠ ಸಾಹಿತ್ಯ ಜನಪದ ಸಾಹಿತ್ಯದ ಬುನಾದಿ, ಒಗಟು, ಗಾದೆ, ಗೀಗಿಪದ, ಭಜನೆ, ಡೊಳ್ಳು, ನಂದಿಕೋಲು, ಲಾವಣಿ, ಸೋಬಾನೇ ಹಾಡು,ಬೀಸುಕಲ್ಲಿನ ಪದ,ಕರಡಿಮಜಲು ಮುಂತಾದವು ಜಾನಪದ ಸಾಹಿತ್ಯದ ಶಕ್ತಿ. ಆದರೆ ಇಂದು ಜನಪದ ಸಾಹಿತ್ಯ ಸಿನೆಮಾ ಹಾವಳಿಗೆ ಸಿಲುಕಿ ತನ್ನ ಮೂಲ ಧಾಟಿ,ಲಯ ಕಳೆದುಕೊಂಡಿದೆ. ಕೆಲವು ಕಲಾವಿದರು ಆಕರ್ಷಣೆಗಾಗಿ ಅಶ್ಲೀಲತೆಗೊಳಿಸಿರುವುದು ದೊಡ್ಡ ಆಘಾತ. ನಮ್ಮ ಮೂಲ ಜನಪದ ಸಾಹಿತ್ಯದ ಸೊಗಡನ್ನು ಉಳಿಸಲು ಇಂದು ರಾಜ್ಯ ರಾಜಧಾನಿಯಿಂದ ಹಳ್ಳಿ ಹಳ್ಳಿಯವರೆಗೂ ಕಜಾಪ ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಉದಯಿಸಿರುವ ಮಹಾಲಿಂಗಪುರ ವಲಯ ಘಟಕ ಅದೇ ದಾರಿಯಲ್ಲಿ ದಿಟ್ಟವಾಗಿ ಸಾಗಲು ನಾವು ಬದ್ಧ ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕಜಾಪ ಮಹಾಲಿಂಗಪುರ ವಲಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಮಹಾಲಿಂಗಪುರ ಮಹಾಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಯೋಗಿ ರಾಜೇಂದ್ರ ಶ್ರೀಗಳು ಮಾನವನಾಗಿ ಹುಟ್ಟಿದ ನಾವು ಗಳಿಸಿದ್ದೆಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗುತ್ತೇವೆ. ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಹಾಗಾಗಿ ಸಾಮಾಜಿಕ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು. ಅಂಥ ಸತ್ಕಾರ್ಯದಲ್ಲಿ ತೊಡಗಿರುವ ಬಸವರಾಜ ಮೇಟಿಯವರ ಕಾರ್ಯವನ್ನು ಶ್ಲಾಘಿಸಿ. ನಿಮ್ಮ ಸತ್ಕಾರ್ಯಗಳ ಸಹಾಯಕ್ಕೆ ನಾವು ಸದಾ ಸಿದ್ಧ ಎಂದು ಆಶಿರ್ವದಿಸಿದರು.

ಮಹಾಲಿಂಗಪುರ ಕರಡಿಯವರ ಮನೆತನದ ನಾಲ್ಕು ತಲೆಮಾರಿನ ಬಾಲಕಲಾವಿದರ ಕರಡಿಮಜಲು ಹಾಗೂ ಇತರೆ ಕಲಾ ತಂಡಗಳ ಭಜನೆ,ಹಂತಿಪದ,ಸುಗಮ ಸಂಗೀತ, ಮಿಮಿಕ್ರಿ, ಸೋಬಾನೆ ಹಾಡು,ಬೀಸುಕಲ್ಲಿನ ಹಾಡು,ಡೊಳ್ಳಿನ ಪದ ಮುಂತಾದ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು.

ಗ್ರಾ.ಪಂ. ಅಧ್ಯಕ್ಷ ಬನಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿ, ಪಿ.ಕೆ.ಪಿ.ಎಸ್.ಅಧ್ಯಕ್ಷ ಎಸ್.ಎಂ.ಪಾಟೀಲ, ತಾ.ಪಂ.ಸದಸ್ಯ. ಶ್ರೀಶೈಲ ಪಟ್ಟಣಶೆಟ್ಟಿ ,ರ-ಬ ತಾ.ಕಜಾಪ ಅಧ್ಯಕ್ಷ ಮ.ಕೃ.ಮೇಗಾಡಿ, ಮಕ್ಕಳ ಸಾಹಿತಿ ಅಣ್ಣಾಜಿ ಫಡತಾರೆ, ತಾ.ಕಸಾಪ ಅಧ್ಯಕ್ಷ ವೀರೇಶಕುಮಾರ ಆಸಂಗಿ, ಪಿ.ಕೆ.ಪಿ.ಎಸ್.ಉಪಾಧ್ಯಕ್ಷ ಚಂದ್ರಕಾಂತ ಕೌಜಲಗಿ, ಗ್ರಾ.ಪಂ.ಉಪಾಧ್ಯಕ್ಷೆ ಶಾಂತವ್ವ ಕಡಬಲ್ಲವರ, ಮಲ್ಲಪ್ಪ ಸಿಂಗಾಡಿ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಸಿ.ಎಂ.ಕಟಗಿ,ಗೋಲೇಶ ಅಮ್ಮಣಗಿ, ರಾಮಣ್ಣ ಕೊಣ್ಣೂರ, ಎಂ.ಜಿ.ಬ್ಯಾಳಿ, ಲಕ್ಕಪ್ಪ, ಜಯರಾಮಶೆಟ್ಟಿ, ಚಂದ್ರಶೇಖರ ಮೋರೆ, ಮಹಾಲಿಂಗಪ್ಪ ಹೊಸೂರ, ಸುರೇಶ ಕೌಜಲಗಿ ಮುಂತಾದವರು ಉಪಸ್ಥಿರಿದ್ದರು.ಕಜಾಪ ಸದಸ್ಯೆ ಶಾರದ ಕಡಪಟ್ಟಿ ಪ್ರಾಥರ್ಿಸಿ, ಭೀಮಪ್ಪ ನೇಗಿನಾಳ ನಿರೂಪಿಸಿದರು.

ಎನ್ಪಿಎಸ್ರದ್ದತಿಯ ಸಮಿತಿಯ ಅವಧಿ 

3 ತಿಂಗಳು ನಿಗದಿಪಡಿಸಲು ಬೀರಪ್ಪ ತ್ತಾಯ

ಮುಧೋಳ: 2006ರ ಎಪ್ರೀಲ್ 1 ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಿರುವ ಎನ್.ಪಿ.ಎಸ್.ಯೋಜನೆಯನ್ನು ಮಾಪರ್ಾಡು ಮಾಡಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರವು ಸಮಿತಿಯನ್ನು ರಚನೆಯನ್ನು ಮಾಡಿರುವುದು ಸ್ವಾಗರ್ತ ವಿಷಯವಾಗಿದೆ. ಆದರೆ ಸಮಿತಿಯು 3 ತಿಂಗಳ ಒಳಗೆ ತನ್ನ ವರದಿಯನ್ನು ನೀಡುವಂತೆ ಅವಧಿಯನ್ನು ನಿಗದಿ ಪಡಿಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರಕಾರವನ್ನು ಒತ್ತಾಯಿಸಿದ್ದಾರೆ.

    ಈ ವಿಷಯದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈಗಾಲೇ ಎನ್.ಪಿ.ಎಸ್.ಎಂಬ ನೌಕರರಿಗೆ ಮಾರಕವಾದ ಯೋಜನೆಯು ಜಾರಿಯಾಗಿ 12 ವರ್ಷ ಕಳೆದಿದೆ. ಸಮಿತಿಯನ್ನು ರಚನೆ ಮಾಡಿ ಅವಧಿಯನ್ನು ನಿಗದಿಪಡಿಸದಿದ್ದರೆ ಇನ್ನೂ ಹೆಚ್ಚು ವರ್ಷಗಳ ಕಾಲ ರದ್ದಿತಿಗಾಗಿ ಕಾಯಬೇಕಾಗುತ್ತದೆ. ಜೆ.ಡಿ.ಎಸ್.ಪಕ್ಷವು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸುವ ಅಂಶ ವನ್ನು ಅಳವಡಿಸಿದ್ದರು. ಹಾಗಾಗೀ ಎನ್.ಪಿ.ಎಸ್.ಯೋಜನೆಯನ್ನು ರದ್ದುಪಡಿಸಲು ರಚಿಸಿರುವ ಸಮಿತಿಯು 3 ತಿಂಗಳ ಒಳಗೆ ತನ್ನ ವರದಿ ಯನ್ನು ನೀಡದಿದ್ದರೆ ಮತ್ತೆ ಅನಿದರ್ಿಷ್ಟ ಅವಧಿಯವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸುವುದಾಗಿ ತಿಳಿಸಿದ್ದಾರೆ.