ಜನಪದ ಸಂಸ್ಕೃತಿ ಎಲ್ಲ ಸಂಗೀತ ಮತ್ತು ಸಾಹಿತ್ಯ ಪ್ರಕಾರಗಳಿಗೆ ಮುಖ್ಯ ಪ್ರೇರಣೆ
ಅಥಣಿ 15: ಇಂದಿನ ನಮ್ಮ ಬದುಕಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಸಾಂಸ್ಕೃತಿಕ ಮತ್ತು ತಾತ್ವಿಕತೆ ನೆಲೆಗಟ್ಟು ಮರೆಯಾಗಿ ತಂತ್ರಗಾರಿಕೆಯೇ ತುಂಬಿಕೊಂಡಿದೆ. ಆದ್ದರಿಂದ ನಮ್ಮ ದೇಶೀಯ ಪರಂಪರೆಯನ್ನು ಅಭಿವ್ಯಕ್ತಿಗೊಳಿಸುವ ಸಂಗೀತ-ಸಾಂಸ್ಕೃತಿಕ ಶೈಲಿಯ ನೃತ್ಯಗಳಾದ ಭರತನಾಟ್ಟ, ಜಾನಪದ ತತ್ವಪದ ಗಾಯನ, ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಕಥಾ ರೂಪಕಗಳ ಮೂಲಕ ನಮ್ಮ ಯುವ ಜನಾಂಗಕ್ಕೆ ಹಿಂದೂ ಧರ್ಮ, ಅದರ ತತ್ವೋಪದೇಶ, ಜೀವನ-ಮೌಲ್ವಿಕ ಸಂದೇಶದ ಸಾರವನ್ನು ತಿಳಿಸಿಕೊಡುವ ಕಾರ್ಯನಡೆಯಬೇಕಾಗಿದೆ.
ಅದಕ್ಕಾಗಿ ನಮ್ಮ ಆಂಜನೇಯ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಂದ ಹನುಮಾನ ಚಾಲೀಸ, ಗಣಪತಿ ಸ್ತೋತ್ರಗಳ ನೃತ್ಯ, ರಾವಣಾಸುರನ ಸಂಹಾರ, ನವದುರ್ಗೆಯ ವಿವಿಧ ರೂಪಗಳ ಬಗ್ಗೆ ನೃತ್ಯ ರೂಪಕಗಳನ್ನು ಪ್ರದರ್ಶನ ನಡೆಯುತ್ತದೆ. ಪ್ರತಿವರ್ಷ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ತಾಂಡವ ನೃತ್ಯ ಅಕ್ಯಾಡೆಮಿ ಹಾಗೂ ನಟರಾಜ ನೃತ್ಯ ಅಕ್ಯಾಡೆಮಿಯ ಮಕ್ಕಳಿಂದ ಹಾಗೂ ನಮ್ಮ ನವರಸಪುರ ಬಡಾವಣೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿರುವದು ಸಂತೋಷದ ಸಂಗತಿಯಾಗಿದೆ, ಇದರಿಂದ ಎಲ್ಲ ಬಡಾವಣೆಗಳ ಮಕ್ಕಳಲ್ಲಿ ನಮ್ಮ ಮೂಲ ಸಂಗೀತ-ಸಾಂಸ್ಕೃತಿಕ ಕಲೆ-ಕೌಶಲ್ಯಗಳು ಒಡಮೂಡಿ, ಅವರಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ ದೊರೆಯಲೆಂಬುದೇ ಈ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಯ ಉದ್ದೇಶವಾಗಿದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಮಾರಂಭದಲ್ಲಿ ದೇವಸ್ಥಾನ ಸೇವಾ ಸಮೀತಿಯ ಶ್ರೀ ಲಕ್ಷ್ಮಣ ಶಿಂಧೆ, ಬಿ.ಆರ್.ಬಿರಾದಾರ, ಎಸ್.ಜಿ.ನಿಂಗನಗೌಡ್ರ, ಎಂ.ಆರ್.ಪಾಟೀಲ, ಬಾಬು ಕೋಲಕಾರ, ಎನ್.ಬಿ.ಕೂಟನೂರ, ಶ್ರೀರಾಮ ದೇಶಪಾಂಡೆ, ಶಿವಾನಂದ ಬಿಜ್ಜರಗಿ, ಡಾ. ಮಹಾದೇವ ಪಾಟೀಲ, ಅನೀಲ ಪಾಟೀಲ, ರಮೇಶ ಕೋಷ್ಠಿ, ಗಂಗಾಧರ ಚಾಬುಕಸವಾರ, ಆರ್. ಬಿ. ಕುಮಟಗಿ, ಬಸವರಾಜ ಕನ್ನೂರ, ಇನ್ನಿತರರು ಸಹ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನವರಸಪುರ ಎಲ್ಲ ಬಡಾವಣೆಗಳ ಮಕ್ಕಳು ಹಾಗೂ ತಾಂಡವ ಮತ್ತು ನಟರಾಜ ನೃತ್ಯ ಅಕ್ಯಾಡೆಮಿ ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮನರಂಜಿಸಿದವು. ಈ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಯುವಕರು, ಹಿರಿಯರು ಮತ್ತು ಸಾರ್ವಜನಿಕರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.