ಚಿತ್ರಕಲಾ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ

ಲೋಕದರ್ಶನ ವರದಿ

ವಿಜಯಪುರ 28: ಕನರ್ಾಟಕ ರಾಜ್ಯ ವಿಧ್ಯಾಥರ್ಿಗಳ ಕ್ಷೇಮಾಭಿವೃದ್ಧಿ ನಿಧಿ ಶಿಕ್ಷಕರ ಕಲ್ಯಾಣ ನಿಧಿ ಬೆಂಬಳೂರು, ಉಪನಿದರ್ೇಶಕರ ಕಾಯರ್ಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಇತ್ತೀಚೆಗೆ ಡಿ.ಎನ್.ದರಬಾರ ಶಾಲೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪಧರ್ೆಯಲ್ಲಿ ಚಿತ್ರಕಲಾ ಸ್ಪಧರ್ೆಯಲ್ಲಿ ಅಲ್-ಅಮಾನ ಬಾಲಕರ ಉದರ್ು ಮಾಧ್ಯಮ ಪ್ರೌಢ ಶಾಲೆ (ಚಾಂದಪೂರ)ಯ ಎಸ್.ಬಿ.ವಾಲಿಕಾರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕರು ಎಂ.ಎಂ.ಸಿಂಧೂರು ಪ್ರಶಸ್ತಿ ವಿತರಿಸಿದರು. 

ಎಸ್.ಬಿ.ವಾಲಿಕಾರ ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎ.ಎಂ.ಬಾಗವಾನ, ಉಪಾಧ್ಯಕ್ಷ ಎಂ.ಜೆ.ಇನಾಮದಾರ, ಕಾರ್ಯದಶರ್ಿ ಕೆ.ಎಸ್.ಸಾಂಗ್ಲಿಕರ, ಆಡಳಿತಾಧಿಕಾರಿ ಸುಲೇಮಾನ ಖುಮಾರ ತಾಳಿಕೋಟಿ ಇತರ ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯೆ ಎನ್.ಎಂ.ಜಹಾಗೀರದಾರ, ಶಾಲಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.