ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ : ಈರೇಶ ಜಂಬಗಿಗೆ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಜೋಡಗೇರಿ ಸನ್ಮಾನ

ಕಾಗವಾಡ ಬಿಇಒ ಎ.ಎಸ್.ಜೋಡಗೇರಿ ಇವರು ಕೃಷ್ಣಾ-ಕಿತ್ತೂರಿನಲ್ಲಿ ಸಾಧನೆಗೈದ ವಿದ್ಯಾಥರ್ಿ ಈರೇಶ ಜಂಬಗಿ ಇತನಿಗೆ ಸನ್ಮಾನಿಸುತ

ಕಾಗವಾಡ 03: ಗ್ರಾಮೀಣ ಭಾಗದ ವಿದ್ಯಾಥರ್ಿಗಳಿಗೆ ಓದಲು ಪ್ರೋತ್ಸಾಹಿಸಿ ಸಹಾಯ, ಸಹಕಾರ ಮಾಡಿದರೆ ಪಟ್ಟಣದ ವಿದ್ಯಾಥರ್ಿಗಳಕ್ಕಿಂತ ಶಿಕ್ಷಣದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದೆ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಕೃಷ್ಣಾ-ಕಿತ್ತೂರದಲ್ಲಿ ಹೇಳಿದರು.

ಗುರುವಾರ ರಂದುಕೃಷ್ಣಾ-ಕಿತ್ತೂರದ ಲಕ್ಷ್ಮೀದೇವಿ ಕನ್ನಡ ಪ್ರೌಢಶಾಲೆಗೆ ತೆರಳಿ, ಶಾಲೆಯ ವಿದ್ಯಾಥರ್ಿ ಈರೇಶ ಜಂಬಗಿ ಇತನು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 622 ಅಂಕಗಳನ್ನು ಪಡೆದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು, ಕಾಗವಾಡ ಬಿಇಒ ವಲಯಕ್ಕೆ, ಗ್ರಾಮಕ್ಕೆ, ಶಾಲೆಗೆ ಕೀತರ್ಿ ತಂದಿದ್ದರಿಂದ ಬಿಇಒ ಎ.ಎಸ್.ಜೋಡಗೇರಿಯವರು ಸನ್ಮಾನಿಸಿ, ಸಿಹಿ ಹಂಚಿ ಅಭಿನಂದಿಸಿದರು.

ಇತನ ಶಿಕ್ಷಣಕ್ಕಾಗಿ ತಾಯಿ-ತಂದೆದೊಂದಿಗೆ ಶಿಕ್ಷಣಪ್ರೇಮಿಗಳಾದ ಸೀರಾಜ್ ಕುಡಚಿ, ಜಾವೇದ ಕುಡಚಿ ಇವರನ್ನು ಅಭಿನಂದಿಸಿದರು. ಪ್ರತಿಯೊಬ್ಬರು ಇನ್ನೊಬ್ಬರಿಗೆ ಮನದಾಳದಿಂದ ಸಹಕರಿಸಿದರೆ ಏನು ಸಾಧಿಸಬಹುದು. ಇದಕ್ಕೆ ಈರೇಶ, ಸಾಕ್ಷಿಯಾಗಿದ್ದಾನೆ. ಅಳವಾಸ್ ಸಂಸ್ಥೆಯಲ್ಲಿ ದಾಖಲೆ ಮಾಡಿ ಎಂ.ಬಿ.ಬಿ.ಎಸ್ ಓದುವದೊಂದಿಗೆ, ಐ.ಎ.ಎಸ್ ಆಗುವ ಗುರಿ ವಿದ್ಯಾಥರ್ಿ ವ್ಯಕ್ತಪಡಿಸಿದನು.

ಶಿಕ್ಷಣ ಸಂಸ್ಥೆಯ ಆಧ್ಯಕ್ಷ ವಿಶ್ವನಾಥ ಮಲಗೌಡಾ ಪಾಟೀಲ, ಮುಖ್ಯಾಧ್ಯಾಪಕರಾದ ಸಂಜಯ ಮೋರೆ, ಸುರೇಶ ನಿಂಗನೂರೆ, ಸುರೇಶ ಕಲಾಲ, ಸೀರಾಜ ಕುಡಚಿ, ಜಾವೇದ ಕುಡಚಿ, ವಿರುಪಾಕ್ಷ ಜಾಯಗೋಳ, ಕಲ್ಲಪ್ಪಾ ಬುಚರ್ಿ, ದತ್ತಾತ್ರಯ ಕದಂ, ಆನಂದ ಜಂಬಗಿ, ಸೇರಿದಂತೆ ಅನೇಕರು ಇದ್ದರು.