ಮದಿಹಾಳ ಸಿದ್ಧಾರೂಢಮಠದ ಪ್ರಥಮ ಜಾತ್ರೆ

First fair of Madihala Siddharudham Math

ಮದಿಹಾಳ ಸಿದ್ಧಾರೂಢಮಠದ ಪ್ರಥಮ ಜಾತ್ರೆ 

ಧಾರವಾಡ 8 : ಇಲ್ಲಿಯ ಮದಿಹಾಳಕ್ಕೆ ಹೊಂದಿಕೊಂಡಿರುವ ಸಿದ್ಧಾರೂಢ ಕಾಲನಿಯಲ್ಲಿರುವ ಸಿದ್ಧಾರೂಢ ಮಠದ ಪ್ರಥಮ ವಾರ್ಷಿಕೋತ್ಸವ ಮತ್ತು ಜಾತ್ರೆ ಫೆ.10 ರಂದು ಜರುಗಲಿದೆ.  

ಸೋಮವಾರ ಪ್ರಾತಃಕಾಲದಲ್ಲಿ ಮಠದಲ್ಲಿರುವ ಗುರು ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಶಿಲಾ ವಿಗ್ರಹಗಳಿಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರ ಪೂಜೆ, ಮಹಾಮಂಗಳಾರತಿ ಜರುಗಲಿದ್ದು, ನಂತರ ವಿವಿಧ ಹೋಮಗಳು ನಡೆಯಲಿವೆ.  

ಪಲ್ಲಕ್ಕಿ ಉತ್ಸವ : ಮುಂಜಾನೆ 9 ಗಂಟೆಗೆ ವಿವಿಧ ವಾದ್ಯಗಳೊಂದಿಗೆ ಸಿದ್ಧಾರೂಢರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಮಠದಿಂದ ಹೊರಟು ಮದಿಹಾಳ ಈಶ್ವರ ದೇವಾಲಯ ತಲುಪಿ ಮರಳಿ ಮಠಕ್ಕೆ ಆಗಮಿಸಿ ಮಂಗಲಗೊಳ್ಳಲಿದೆ. ನಂತರ ನಡೆಯುವ ದಾಸೋಹ ಸೇವೆಯಲ್ಲಿ ಅನ್ನಸಂತರೆ​‍್ಣ ಜರುಗಲಿದೆ.  

ಇದೇ ದಿನ ಸಂಜೆ 4 ಗಂಟೆಗೆ ಮಣಕವಾಡದ ಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ನಂತರ ಭಕ್ತಿಗೀತೆಗಳ ಭಜನೆ ನಡೆಯಲಿದ್ದು, ಮಹಾನಗರದ ಸದ್ಭಕ್ತರು ಪಾಲ್ಗೊಳ್ಳುವಂತೆ ಸಿದ್ಧಾರೂಢ ಮಠದ ಸೇವಾ ಸಮಿತಿ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದೆ.