ಸುಸೂತ್ರವಾಗಿ ನಡೆದ ಮೊದಲ ದಿನದ ಸಿಇಟಿ ಪರೀಕ್ಷೆ

ಬಾಗಲಕೋಟೆ,29: ಜಿಲ್ಲೆಯಲ್ಲಿ ಸೋಮವಾರ 12 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗಳು ಸುಸೂತ್ರವಾಗಿ ಹಾಗೂ ಶಾಂತಿಯುತವಾಗಿ ಜರುಗಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಗಲಕೋಟೆ 7 ಹಾಗೂ ಜಮಖಂಡಿಯಲ್ಲಿ 5 ಸೇರಿ ಒಟ್ಟು 12 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗಳು ನಡೆದಿದ್ದು, ಬೆಳಗಿನ ಅವಧಿಯಲ್ಲಿ ನಡೆದ ಜೀವಶಾಸ್ತ್ರ ವಿಷಯ ಪರೀಕ್ಷೆಯಲ್ಲಿ ಒಟ್ಟು 5671 ವಿದ್ಯಾಥರ್ಿಗಳ ಪೈಕಿ 4923 ವಿದ್ಯಾಥರ್ಿಗಳು ಹಾಜರಾಗಿ 748 ವಿದ್ಯಾಥರ್ಿಗಳು ಗೈರು ಆಗಿದ್ದಾರೆ. ಮಧ್ಯಾಹ್ನದ ಅವಧಿಯಲ್ಲಿ ನಡೆದ ಗಣಿತ ವಿಷಯ ಸಿಇಟಿ ಪರೀಕ್ಷೆಯಲ್ಲಿ ಒಟ್ಟು 5671 ಪೈಕಿ 5300 ವಿದ್ಯಾಥರ್ಿಗಳು ಹಾಜರಾಗಿ 371 ವಿದ್ಯಾಥರ್ಿಗಳು ಗೈರು ಆಗಿರುತ್ತಾರೆ.

ಬಾಗಲಕೋಟೆಯಲ್ಲಿ ಒಟ್ಟು 7 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆದಿದ್ದು, ಜೀವಶಾಸ್ತ್ರ ವಿಷಯ ಪರೀಕ್ಷೆಯಲ್ಲಿ ಒಟ್ಟು 3103 ವಿದ್ಯಾಥರ್ಿಗಳ ಪೈಕಿ 2656 ವಿದ್ಯಾಥರ್ಿಗಳು ಹಾಜರಾಗಿ 447 ವಿದ್ಯಾಥರ್ಿಗಳು ಗೈರು ಆಗಿರುತ್ತಾರೆ. ಗಣಿತ ವಿಷಯ ಪರೀಕ್ಷೆಯಲ್ಲಿ 3103 ವಿದ್ಯಾಥರ್ಿಗಳ ಪೈಕಿ 2879 ವಿದ್ಯಾಥರ್ಿಗಳು ಜಾಹರಾಗಿ 224 ವಿದ್ಯಾಥರ್ಿಗಳು ಗೈರು ಆಗಿರುತ್ತಾರೆ. ಜಮಖಂಡಿಯಲ್ಲಿ 5 ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಜೀವಶಾಸ್ತ್ರ ವಿಷಯ ಪರೀಕ್ಷೆಯಲ್ಲಿ ಒಟ್ಟು 2568 ವಿದ್ಯಾಥರ್ಿಗಳ ಪೈಕಿ 2267 ವಿದ್ಯಾಥರ್ಿಗಳು ಹಾಜರಾಗಿ 301 ವಿದ್ಯಾಥರ್ಿಗಳು ಗೈರು ಆಗಿರುತ್ತಾರೆ. ಗಣಿತ ವಿಷಯ ಪರೀಕ್ಷೆಯಲ್ಲಿ 2568 ವಿದ್ಯಾಥರ್ಿಗಳ ಪೈಕಿ 2421 ಹಾಜರಾಗಿ 147 ವಿದ್ಯಾಥರ್ಿಗಳು ಗೈರು ಹಾಜರಾಗಿರುತ್ತಾರೆ.

ನವನಗರದ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ನೇಮಿಸಲಾದ ವೀಕ್ಷಕರು ಸಹ ಆಯಾ ಸಿಇಟಿ ಕೇಂದ್ರಗಳಲ್ಲಿ ಪರೀಕ್ಷಾ ಸರಿಯಾಗಿ ನಡೆಯುವಂತೆ ನೋಡಿಕೊಂಡರು. ಪರೀಕ್ಷೆ ಸುಸೂತ್ರವಾಗಿ ನಡೆಯಲು 144 ಕಲಂ ಜಾರಿ ಮಾಡುವದರ ಜೊತೆಗೆ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳವಾರ ಬೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳ ಸಿಇಟಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.