ಉಗಾರ ಖುರ್ದ ಪುರಸಭೆಯ ಮೊದಲ ಸಾಮಾನ್ಯ ಸಭೆ
ಕಾಗವಾಡ 26: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಪುರಸಭೆ ಸದಸ್ಯರು, ಪಕ್ಷಾತೀತವಾಗಿ ಒಂದಾಗಿ ಶ್ರಮಿಸಬೇಕು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಪಟ್ಟಣದ ಅಭವೃದ್ಧಿಗಾಗಿ ನಾನು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ರಾಜು ಕಾಗೆ ತಿಳಿಸಿದರು. ಅವರು, ಸೋಮವಾರ ದಿ. 25 ರಂದು ತಾಲೂಕಿನ ಉಗಾರ ಖುರ್ದ ಪುರಸಭೆಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ನಂತರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದರು. ಉಗಾರ ಪುರಸಭೆಯ ವ್ಯಾಪ್ತಿಯ ಎಲ್ಲ ವಾರ್ಡಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರಲು ತಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ, ಎಲ್ಲರೂ ಸೇರಿ ಪಟ್ಟಣದ ಅಭಿವೃದ್ಧಿ ಮಾಡೋಣವೆಂದರು. ಅಧ್ಯಕ್ಷ ಫಾತೀಮಾ ರಸೂಲ ನದಾಫ, ಉಪಾಧ್ಯಕ್ಷ ಸತೀಶ ಜಗತಾಪ, ಮುಖ್ಯಾಧಿಕಾರಿ ಎಚ್.ಎಫ್. ನದಾಫ ಸೇರಿದಂತೆ ಪಟ್ಟಣದ ಎಲ್ಲ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.